Karnataka news paper

ಕೋವಿಡ್ ವಾಕ್ ಇನ್ ಟೆಸ್ಟ್ ಗೆ ಸಚಿವ ಅಶ್ವಥ್ ನಾರಾಯಣ ಚಾಲನೆ


Online Desk

ಬೆಂಗಳೂರು: ಓಮಿಕ್ರಾನ್ ಕೊರೋನಾ ರೂಪಾಂತರಿ ಮತ್ತು ಕೋವಿಡ್ ಮೂರನೇ ಅಲೆ ಬಹಳ ವೇಗವಾಗಿ ಜನರಲ್ಲಿ ಹರಡುತ್ತಿದೆ. ಇಂತಹ ಸಂದರ್ಭದಲ್ಲಿ ಜನರಿಗೆ ಸುರಕ್ಷಿತವಾಗಿ ಸುಲಭವಾಗಿ ಕೋವಿಡ್ ತಪಾಸಣೆ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವತಿಯಿಂದ ಕೋವಿಡ್ ವಾಕ್ ಇನ್ ಟೆಸ್ಟ್ ಗೆ ಚಾಲನೆ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ ಹೇಳಿದ್ದಾರೆ.

ತಮ್ಮ ಕ್ಷೇತ್ರ ಮಲ್ಲೇಶ್ವರದಲ್ಲಿ ಇಂದು ಅವರು ಕೋವಿಡ್ ವಾಕ್ ಇನ್ ಟೆಸ್ಟ್(Covid walk in test)ಗೆ ಚಾಲನೆ ನೀಡಿ ಮಾತನಾಡಿ, ಸುಲಭವಾಗಿ ಜನರು ಸುರಕ್ಷಿತವಾಗಿ ಕೋವಿಡ್ ಟೆಸ್ಟ್, ಸ್ವಾಬ್ ಟೆಸ್ಟ್ ಮಾಡಿಸಿಕೊಳ್ಳಲು ನಮ್ಮ ಬೆಂಗಳೂರಿನಲ್ಲಿ ಪ್ರಾರಂಭವಾಗಿದೆ. ಡ್ರೈವ್ ಇನ್ ಸ್ವಾಬ್ ಟೆಸ್ಟ್ ಒಂದು ಕಡೆಯಾದರೆ ಮತ್ತೊಂದು ಕಡೆ ಮನೆ ಮನೆಗಳಿಗೆ ಹೋಗಿ ಟೆಸ್ಟ್ ಮಾಡಿಸಲಾಗುತ್ತದೆ. ಕೋವಿಡ್ ಸೋಂಕಿನ ಲಕ್ಷಣ ಹೊಂದಿರುವವರು ಟೆಸ್ಟ್ ಮಾಡಿಸಿಕೊಳ್ಳಬಹುದು,ಇದಕ್ಕೆ ಹಣ ನೀಡುವ ಅಗತ್ಯವಿಲ್ಲ ಎಂದರು.

ಆಸ್ಪತ್ರೆಗೆ ದಾಖಲಾಗುವವರು, ಚಿಕಿತ್ಸೆ ಬೇಕಾಗುವವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಂಪೂರ್ಣ ತಪಾಸಣೆ ಮಾಡಿ ಬಿಬಿಎಂಪಿ ವತಿಯಿಂದ ಆಸ್ಪತ್ರೆಗಳಿಗೆ ದಾಖಲು ಮಾಡುವ ಕೆಲಸವನ್ನು ಸರ್ಕಾರದ ಅಡಿಯಲ್ಲಿ ಬಿಬಿಎಂಪಿ ಮಾಡಲಿದೆ. ರಕ್ತ ಪರೀಕ್ಷೆ, ಔಷಧಿ ಕಿಟ್ ಗಳನ್ನು ಕೂಡ ನೀಡಲಾಗುತ್ತದೆ ಎಂದರು. 

ಕೋವಿಡ್‌ ಸೋಂಕು ಲಕ್ಷಣ ಇರುವವರಿಗೆ ಸರಳ, ಸುಲಭ, ಸುರಕ್ಷಿತ ಪರೀಕ್ಷೆ ನಡೆಸಲು ಈ ಅಭಿಯಾನವಾಗಿದೆ. ಮನೆ ಬಾಗಿಲಿಗೆ ತೆರಳಿ ಪರೀಕ್ಷೆ ಮಾಡುವ ಉಪಕ್ರಮ ಇದಾಗಿದೆ. 





Read more

[wpas_products keywords=”deal of the day”]