Online Desk
ಚೆನ್ನೈ: ನಟ ಧನುಷ್ ಮತ್ತು ಐಶ್ಚರ್ಯಾ ರಜನಿಕಾಂತ್, ವಿಚ್ಛೇದನ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. 18 ವರ್ಷಗಳ ವೈವಾಹಿಕ ಜೀವನ ಮುರಿದು ಬೀಳಲು ಕಾರಣ ಏನು ಎಂಬ ಬಗ್ಗೆಯೂ ಕುತೂಹಲ ಮೂಡಿದ್ದು, ಧನುಷ್ ಕೆಲವು ನಟಿ ಮಣಿಯರ ಜೊತೆ ಡೇಟಿಂಗ್ ನಲ್ಲಿ ಇದ್ದರು ಎನ್ನುವುದೇ ಕಾರಣ ಎನ್ನುವ ಸುದ್ದಿ ಕೇಳಿಬರುತ್ತಿದೆ.
ನಟ ಧನುಷ್ ಮತ್ತು ಪತ್ನಿ ಐಶ್ಚರ್ಯಾ ರಜನಿಕಾಂತ್ ಜೊತೆಗಿನ 18 ವರ್ಷಗಳ ವೈವಾಹಿಕ ಜೀವನವನ್ನು ವಿಚ್ಛೇದನ ಮೂಲಕ ಕೊನೆಗಾಣಿಸಲು ನಿರ್ಧರಿಸಿರುವುದಾಗಿ ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದರು. ಧನುಷ್ ಹೆಸರು ಈ ಹಿಂದೆ ಹಲವು ನಟಿಯರ ಜೊತೆ ಕೇಳಿಬಂದಿತ್ತು.
ಶ್ರುತಿ ಹಾಸನ್
ಐಶ್ವರ್ಯಾ ರಜಿನಿಕಾಂತ್ 2012 ರ ಚಲನಚಿತ್ರ, 3 ಎಂಬ ಸಿನಿಮಾ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಮಾಜಿ ಪತಿ ಧನುಷ್ ಮತ್ತು ಶ್ರುತಿ ಹಾಸನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶ್ರುತಿ ಹಾಸನ್ , ಪತ್ನಿ ಐಶ್ವರ್ಯಾ ಅವರ ಬಾಲ್ಯದ ಗೆಳತಿಯಾಗಿದ್ದು, ಧನುಷ್ ಮತ್ತು ಐಶ್ವರ್ಯ ಅವರ ‘ತ್ರಿಕೋನ’ ಪ್ರೇಮಕಥೆಯು ಧನುಷ್ ಮತ್ತು ಐಶ್ವರ್ಯಾ ಅವರ ಪ್ರಪಂಚವು ಕುಸಿಯುವುದಕ್ಕೆ ಮೂಲ ಕಾರಣ ಎನ್ನಲಾಗುತ್ತಿತ್ತು. ಆದರೆ ಶೃತಿ ಅವರು ನನಗೆ ಉತ್ತಮ ಸ್ನೇಹಿತ ಎನ್ನುವ ಮೂಲಕ ಆರೋಪಗಳನ್ನು ತಳ್ಳಿಹಾಕಿದ್ದರು.
ಅಮಲಾ ಪೌಲ್
ಸೌತ್ ಸ್ಟಾರ್ ಅಮಲಾ ಪೌಲ್ ಮತ್ತು ಎಎಲ್ ವಿಜಯ್ 2017 ರಲ್ಲಿ ತಮ್ಮ ವಿಚ್ಛೇದನವನ್ನು ಘೋಷಿಸಿದರು. ಎಎಲ್ ವಿಜಯ್ ಅವರ ತಂದೆ, ನಿರ್ಮಾಪಕ ಎಎಲ್ ಅಳಗಪ್ಪನ್, ಅಮಲಾ ಅವರ ಮಗ ವಿಚ್ಛೇದನಕ್ಕೆ ಧನುಷ್ ಕಾರಣ ಎಂದು ಹೇಳಿದ್ದರು. ಮದುವೆಯ ನಂತರ ಅಮಲಾ ಸಿನಿಮಾದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ ಎಂದು ಅಳಗಪ್ಪನ್ ತಮಿಳು ಚಾನೆಲ್ಗೆ ತಿಳಿಸಿದ್ದರು. ಆದರೆ ಧನುಷ್ ತಮ್ಮ ನಿರ್ಮಾಣದ ಅಮ್ಮ ಕಣಕ್ಕು ಚಿತ್ರದಲ್ಲಿ ಅವರಿಗೆ ಪ್ರಮುಖ ಪಾತ್ರವನ್ನು ನೀಡಿದರು. ಇದಕ್ಕೆ ಅಮಲ್ ಪೌಲ್ ಒಪ್ಪಿಕೊಂಡಿದ್ದರು. ಎಎಲ್ ವಿಜಯ್ ಅವರ ತಂದೆ ತಮ್ಮ ಮಗ ಮತ್ತು ಅಮಲಾ ವಿಚ್ಛೇದನದ ಹಿಂದಿನ ಕಾರಣದಲ್ಲಿ ಧನುಷ್ ಹೆಸರು ಉಲ್ಲೇಖಿಸಿದ್ದು, ಚಿತ್ರರಂಗದಲ್ಲಿ ಭಾರೀ ಸಂಚಲನ ಮೂಡಿಸಿತ್ತು.
ತ್ರಿಶಾ
ನಟಿ ತ್ರಿಶಾ ಜೊತೆ ಧನುಷ್ ಸಂಬಂಧ ಹೊಂದಿದ್ದರು, ಡೇಟಿಂಗ್ ಮಾಡುತ್ತಿದ್ದರು ನಟಿ ಹಾಗೂ ಗಾಯಕಿ ಸುಚಿತ್ರಾ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಇದರಲ್ಲಿ ತ್ರಿಶಾ ಮತ್ತು ಧನುಷ್ ಅವರ ಸೆಲ್ಫಿ ಫೋಟೋ ಅಪ್ಲೋಡ್ ಮಾಡಿದ್ದರು.
Read more…
[wpas_products keywords=”party wear dress for women stylish indian”]