Online Desk
ಬೆಂಗಳೂರು: ಬೆಂಗಳೂರಿನಿಂದ ಸ್ಯಾನ್ ಫ್ರಾನ್ಸಿಸ್ಕೋ ಗೆ ತೆರಳಬೇಕಿದ್ದ ವಿಮಾನ 20 ಗಂಟೆಗಳ ಕಾಲ ವಿಳಂಬವಾಗಿ ಟೇಕ್ ಆಫ್ ಆಗಿದ್ದು ಹಲವು ಮಂದಿ ತಮ್ಮ ಪ್ರಯಾಣವನ್ನೇ ರದ್ದುಗೊಳಿಸಿದ್ದಾರೆ.
196 ಮಂದಿಯಿದ್ದ ವಿಮಾನ ಸೋಮವಾರ ಮಧ್ಯಾಹ್ನ ಟೇಕ್ ಆಫ್ ಆಗಬೇಕಿತ್ತು. ಆದರೆ ಮಂಗಳವಾರ ಮಧ್ಯಾಹ್ನ 12.37 ಟೇಕ್ ಆಫ್ ಆಗಿದೆ. ಈ ಮಧ್ಯದ ಅವಧಿಯಲ್ಲಿ ಇದೇ ವಿಮಾನದಲ್ಲಿ ತೆರಳಬೇಕಿದ್ದ ಮಂದಿಗೆ ಆರ್ ಟಿಪಿಸಿಆರ್ ಪರೀಕ್ಷೆಯಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದ್ದು ಪ್ರಯಾಣವನ್ನೇ ರದ್ದಾಗುವ ಪರಿಸ್ಥಿತಿ ಎದುರಿಸಿದರು.
ವಿಮಾನ ವಿಳಂಬವಾಗಿ ಟೇಕ್ ಆಫ್ ಆಗುವುದಕ್ಕೆ ಬ್ರೇಕ್ ನ ಸಮಸ್ಯೆ ಕಾರಣವಾಗಿದ್ದು, ವಿಳಂಬವನ್ನು ಘೋಷಣೆ ಮಾಡುವುದಕ್ಕೂ ಮೂರು ತಾಸುಗಳು ಪ್ರಯಾಣಿಕರು ವಿಮಾನದಲ್ಲೇ ಕುಳಿತು ಪರದಾಡುವಂತಾಯಿತು. ತೀವ್ರ ಅಸಮಾಧಾನಗೊಂಡು ಪ್ರತಿಭಟನೆಗೆ ಮುಂದಾದ ಪ್ರಯಾಣಿಕರನ್ನು ಏರ್ ಇಂಡಿಯಾ ಸಿಬ್ಬಂದಿಗಳು ಸಮಾಧಾನಪಡಿಸಿದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಇಂಡಿಗೊ ವಿಮಾನಗಳ ನಡುವೆ ತಪ್ಪಿದ ಮುಖಾಮುಖಿ ಡಿಕ್ಕಿ
ಟೇಕ್ ಆಫ್ ಆಗುವ ಸಮಯದಲ್ಲಿ ಪೈಲಟ್ ಗಳಿಗೆ ವಿಮಾನದಲ್ಲಿನ ಬ್ರೇಕ್ ಗಳ ಸಮಸ್ಯೆ ಕಂಡುಬಂದಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲವನ್ನೂ ಸರಿ ಮಾಡಿಯೇ ಟೇಕ್ ಆಫ್ ಮಾಡಲು ನಿರ್ಧರಿಸಿದ್ದಾರೆ.
ಪ್ರಯಾಣಿಕರಿಗೆ ವಿಳಂಬವಾದ ಹಿನ್ನೆಲೆಯಲ್ಲಿ ಅವರ ಬಗ್ಗೆ ಉತ್ತಮ ಕಾಳಜಿ ವಹಿಸಲಾಯಿತು. ಆಹಾರ ಪೂರೈಕೆ ಹಾಗೂ ಹೊಟೆಲ್ ಗಳಲ್ಲಿ ತಂಗಲು ವ್ಯವಸ್ಥೆ ಮಾಡಲಾಯಿತು. ಅಥವಾ ನಗರದಿಂದ ಹೊರ ಹೋಗುವವರಿಗೆ ಟ್ಯಾಕ್ಸಿ ವ್ಯವಸ್ಥೆ ಮಾಡಲಾಯಿತು. ಮತ್ತೊಂದು ಸುತ್ತಿನ ಆರ್ ಟಿಪಿಸಿಆರ್ ಟೆಸ್ಟ್ ಗೂ ಪಾವತಿ ಮಾಡಲಾಯಿತು ಎಂದು ಏರ್ ಇಂಡಿಯಾದ ವಕ್ತಾರರೊಬ್ಬರು ಮಾಹಿತಿ ನೀಡಿದ್ದಾರೆ.
ಈ ಪೈಕಿ ಪೂರ್ವನಿಗದಿತ ಪ್ರಯಾಣದ ವೇಳೆ ಕೋವಿಡ್-19 ನೆಗೆಟೀವ್ ವರದಿ ಪಡೆದಿದ್ದವರ ಪೈಕಿ 20 ಮಂದಿಗೆ ಎರಡನೇ ಬಾರಿಯ ಪರೀಕ್ಷೆಯಲ್ಲಿ ಪಾಸಿಟೀವ್ ಬಂದಿದ್ದು ಜ.31 ನಂತರವಷ್ಟೇ ವಿದೇಶಿ ವಿಮಾನದಲ್ಲಿ ತೆರಳಲು ಸಾಧ್ಯವಾಗಲಿದೆ.
Read more
[wpas_products keywords=”deal of the day”]