Karnataka news paper

ನಾಪತ್ತೆಯಾಗಿದ್ದ ನಟಿ ಮೃತದೇಹ ಶವವಾಗಿ ಪತ್ತೆ; ಪತಿ, ಕಾರು ಚಾಲಕನ ಬಂಧನ


Online Desk

ಢಾಕಾ: ಬಾಂಗ್ಲಾದೇಶದಲ್ಲಿ ನಾಪತ್ತೆಯಾಗಿದ್ದ ಖ್ಯಾತ ನಟಿ ರೈಮಾ ಶಿಮು ಅವರ ಮೃತದೇಹ ಇಲ್ಲಿನ ಹೊರವಲಯದಲ್ಲಿ ಪತ್ತೆಯಾಗಿದ್ದು, ಪ್ರಕರಣ ಸಂಬಂಧ ಅವರ ಪತಿ ಹಾಗೂ ಕಾರು ಚಾಲಕನನ್ನು ಬಾಂಗ್ಲಾ ಪೊಲೀಸರು ಬಂಧಿಸಿದ್ದಾರೆ.

ಬಾಂಗ್ಲಾದೇಶದ ಹಜಾರತ್‌ಪುರ ಸಮೀಪದಲ್ಲಿ ಕೇರಾಣಿಗಂಜ್ ನಲ್ಲಿರುವ ಸೇತುವೆ ಬಳಿ ರೈಮಾ ಅವರ ಮೃತದೇಹ ಪತ್ತೆಯಾಗಿದ್ದು, ಅವರು ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಈ ಸಂಬಂಧ ರೈಮಾ ಪತಿ ಹಾಗೂ ಕುಟುಂಬದವರು ದೂರ ದಾಖಲಿಸಿದ್ದರು.

ಮೃತದೇಹವನ್ನು ವಶಕ್ಕೆ ಪಡೆದಿರುವ ಪೊಲೀಸರು ಶವ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರಗೆ ಕಳುಹಿಸಿದ್ದಾರೆ. ಈ ಪ್ರಕರಣದ ತನಿಖೆ ಕೈಗೊಂಡಿರುವ ಪೊಲೀಸರು ರೈಮಾ ಪತಿ ಹಾಗೂ ಕಾರು ಚಾಲಕನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ  ಮಾಡಿವೆ. 

ರೈಮಾ ಅವರು 1998ರಲ್ಲಿ ಸಿನಿಮಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದರು. ಅವರು 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ ಎಂದು ತಿಳಿದುಬಂದಿದೆ.
 



Read more

[wpas_products keywords=”deal of the day”]