Karnataka news paper

ಅಪ್ಪ-ಅಮ್ಮನ ವಿವಾಹ ವಾರ್ಷಿಕೋತ್ಸವಕ್ಕೆ ಧನುಷ್ ಪತ್ನಿ ಐಶ್ವರ್ಯಾ ಹಾಕಿದ್ದ ಪೋಸ್ಟ್ ವೈರಲ್


ಹೈಲೈಟ್ಸ್‌:

  • 18 ವರ್ಷಗಳ ವೈವಾಹಿಕ ಜೀವನಕ್ಕೆ ವಿರಾಮ ಇಟ್ಟ ಧನುಷ್, ಐಶ್ವರ್ಯಾ
  • 23ನೇ ವಯಸ್ಸಿಗೆ ಐಶ್ವರ್ಯಾ ಮದುವೆ ನಡೆದಿತ್ತು
  • ಅಪ್ಪ, ಅಮ್ಮನ ವಿವಾಹ ವಾರ್ಷಿಕೋತ್ಸವಕ್ಕೆ ಐಶ್ವರ್ಯಾ ಏನು ಪೋಸ್ಟ್ ಹಾಕಿದ್ದರು?

18 ವರ್ಷಗಳ ಸಂಸಾರ ಮಾಡಿದ ನಂತರದಲ್ಲಿ ಐಶ್ವರ್ಯಾ, ನಟ ಧನುಷ್ ಅವರು ವಿಚ್ಛೇದನ ಪಡೆದು ದೂರ ದೂರ ಇರೋದಾಗಿ ಘೋಷಣೆ ಮಾಡಿದ್ದಾರೆ. 23ನೇ ವಯಸ್ಸಿಗೆ ಪ್ರೀತಿಸಿ ಮದುವೆಯಾಗಿದ್ದ ಐಶ್ವರ್ಯಾ ಇಷ್ಟು ವರ್ಷಗಳ ನಂತರದಲ್ಲಿ ಗಂಡನಿಂದ ದೂರ ಆಗಿರೋದು ಅನೇಕರಿಗೆ ಆಶ್ಚರ್ಯ ಮೂಡಿಸಿದೆ. ಈ ನಡುವೆ ಅವರು ಈ ಹಿಂದೆ ಮದುವೆ ಎಂಬ ಪದದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದ ಪೋಸ್ಟ್‌ವೊಂದು ವೈರಲ್ ಆಗುತ್ತಿದೆ.

ಐಶ್ವರ್ಯಾ ಹಾಕಿದ್ದ ಪೋಸ್ಟ್ ಏನು?

ಕಳೆದ ವರ್ಷ ಫೆಬ್ರವರಿ 26ರಂದು ಐಶ್ವರ್ಯಾ ಅವರು ತಂದೆ ರಜನಿಕಾಂತ್, ತಾಯಿ ಲತಾ ಅವರ 40ನೇ ವರ್ಷದ ಮದುವೆ ವಾರ್ಷಿಕೋತ್ಸವಕ್ಕೆ ಹಾಕಿದ್ದ ಪೋಸ್ಟ್ ಎಲ್ಲರ ಗಮನ ಸೆಳೆದಿದೆ. ತಂದೆ ತಾಯಿ ಮದುವೆ ಫೋಟೋ ಹಂಚಿಕೊಂಡಿದ್ದ ಐಶ್ವರ್ಯಾ “ಎಲ್ಲರನ್ನು ಅಮ್ಮ ತನ್ನ ಕುಟುಂಬದವರು ಎಂದು ಒಪ್ಪಿಕೊಂಡರು. ಅಪ್ಪ, ಅಮ್ಮನ ಮನೆಯವರನ್ನು ಕೂಡ ತನ್ನವರು ಎಂಬಂತೆ ಕಾಳಜಿ ಮಾಡುತ್ತ ಬಂದರು. ನನ್ನ ಅಜ್ಜ, ಅಜ್ಜಿ ನಿಮಗೆ ಸುರಕ್ಷಾ ಕವಚದಂತೆ ಬದುಕಿನುದ್ದಕ್ಕೂ ಇದ್ದರು. ಇಬ್ಬರೂ ಪರಸ್ಪರ ಭಾರ ಹೊರುವುರು ಮದುವೆ ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ, ಕಲಿಯುತ್ತಿದ್ದೇನೆ ಕೂಡ ” ಎಂದು ಐಶ್ವರ್ಯಾ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ.

“ಸಹಾನುಭೂತಿಯು ಉತ್ಸಾಹವನ್ನೂ ಮೀರಿದ್ದಾಗಿದೆ. ಸ್ನೇಹವು ಒಡನಾಟದ ಆಧಾರವಾಗುತ್ತದೆ. ಮನೆ ಅಂದರೆ ಮನೆಯೇ. ನಾನು ನಿಮ್ಮನ್ನು ಮಾತ್ರವಲ್ಲದೆ ಇಡೀ ಕುಟುಂಬವನ್ನು ಪ್ರೀತಿ ಮಾಡುತ್ತೇನೆ. ನಾವು ಒಟ್ಟಿಗೆ ವೈಯಕ್ತಿಕವಾಗಿ ಬೆಳೆಯುತ್ತ ಹಳೆಯದಾಗುತ್ತ ಹೋಗುತ್ತೇವೆ. ಅಪ್ಪ ಅಮ್ಮನಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು” ಎಂದು ಐಶ್ವರ್ಯಾ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ.

Dhanush: ‘ತಲೈವಾ’ ರಜನಿಕಾಂತ್ ಭೇಟಿ ಮಾಡಲು ಹಿಂದೇಟು ಹಾಕಿದ್ರಾ ಧನುಷ್?

23ನೇ ವಯಸ್ಸಿಗೆ ಮದುವೆ ಆಗಿದ್ದ ಬಗ್ಗೆ ಐಶ್ವರ್ಯಾ ಏನಂದ್ರು?
ಐಶ್ವರ್ಯಾ 23ನೇ ವಯಸ್ಸಿಗೆ ನಟ ಧನುಷ್ ಅವರನ್ನು ವರಿಸಿದರು. ಪ್ರೀತಿಯಲ್ಲಿ ಬಿದ್ದಿದ್ದ ಅವರಿಬ್ಬರನ್ನೂ ನೋಡಿದ ಪಾಲಕರು ತಡ ಮಾಡೋದು ಬೇಡ ಎಂದು ಬೇಗ ಮದುವೆ ಮಾಡಿದರು. ಆಗ ಧನುಷ್‌ಗೆ 21ರ ಹರೆಯ. ಈ ವಿಚಾರದ ಬಗ್ಗೆಯೂ ಸಂದರ್ಶನದಲ್ಲಿ ಮಾತನಾಡಿದ್ದ ಐಶ್ವರ್ಯಾ, “ನಾನು ಮತ್ತು ಧನುಷ್ ಪರಸ್ಪರ ಇಬ್ಬರೂ ಒಬ್ಬರಿಗೊಬ್ಬರೂ ಒಂದಷ್ಟು ಜಾಗ ನೀಡುತ್ತೇವೆ. ನೀವು 20ನೇ ವರ್ಷದಲ್ಲಿದ್ದಾಗ ನೀವು ಏನು ನಂಬುತ್ತೀರೋ ಅದಕ್ಕೆ ಬದ್ಧರಾಗುತ್ತೀರಿ, ಆಮೇಲೆ ನಿಮ್ಮನ್ನು ನೀವು ಬದಲಾಯಿಸಿಕೊಳ್ಳೋದು ಕಷ್ಟ” ಎಂದು ಹೇಳಿದ್ದರು.

ಮದುವೆಯಾದಾಗ ನಟ ಧನುಷ್‌ಗೆ 21, ಐಶ್ವರ್ಯಾಗೆ 23; ಗಡಿಬಿಡಿಯಲ್ಲಿ ರಜನಿಕಾಂತ್ ಮಗಳ ಮದುವೆ ಮಾಡಿದ್ದೇಕೆ?

2004ರ ನವೆಂಬರ್ 18ರಂದು ಅದ್ದೂರಿಯಾಗಿ ಐಶ್ವರ್ಯಾ, ಧನುಷ್ ಮದುವೆಯಾದರು. ಈ ಅದ್ದೂರಿ ಮದುವೆಗೆ ಚಿತ್ರರಂಗದ ಗಣ್ಯರು ಸಾಕ್ಷಿಯಾಗಿದ್ದರು. ಧನುಷ್ ಹಾಗೂ ಐಶ್ವರ್ಯಾರಿಗೆ 2006ರಲ್ಲಿ ಮಗ ಜನಿಸಿದ್ದನು, ಅವನಿಗೆ ಯಾತ್ರಾ ಎಂದು ಹೆಸರಿಟ್ಟಿದ್ದರು. 2010ರಲ್ಲಿ ಎರಡನೇ ಮಗ ಹುಟ್ಟಿದ್ದು ಲಿಂಗ ಮಗ ಹುಟ್ಟಿದ್ದನು. ಧನುಷ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ, ಐಶ್ವರ್ಯಾ ಫಿಟ್‌ನೆಸ್ ಎಂದು ಕೆಲ ಮೋಟಿವೇಶನ್ ವಿಷಯಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.



Read more

[wpas_products keywords=”deal of the day party wear dress for women stylish indian”]