Karnataka news paper

ಡಿಸ್ಕವರಿ ಪ್ಲಸ್‌ನಲ್ಲಿ ಮಿಷನ್‌ ಫ್ರಂಟ್‌ಲೈನ್‌, ಬ್ರೇಕಿಂಗ್‌ ಪಾಯಿಂಟ್‌


ಹೋಮ್‌ ಆಫ್‌ ಪೇಟ್ರಿಯಾಟ್ಸ್‌ (ದೇಶಭಕ್ತರ ನಾಡು) ಅಭಿಯಾನದ ಅಡಿ ದೇಶಭಕ್ತಿ, ಸೈನಿಕರ ಸಾಹಸ ಬಿಂಬಿಸುವ ಹೊಸ ಸರಣಿ ‘ಮಿಷನ್‌ ಫ್ರಂಟ್‌ಲೈನ್‌’ ಮತ್ತು ‘ಬ್ರೇಕಿಂಗ್‌ ಪಾಯಿಂಟ್‌’ ಡಿಸ್ಕವರಿ ಪ್ಲಸ್‌ನಲ್ಲಿ ಪ್ರಸಾರವಾಗಲಿದೆ. 

ಮಿಷನ್‌ ಫ್ರಂಟ್‌ಲೈನ್‌ ಜ. 20ರಂದು ಹಾಗೂ ಬ್ರೇಕಿಂಗ್‌ ಪಾಯಿಂಟ್‌ ಜ. 21ರಂದು ಪ್ರಸಾರವಾಗಲಿದೆ. ಫರ್ಹಾನ್‌ ಖಾನ್‌ ಮತ್ತು ರೋಹಿತ್‌ ಶೆಟ್ಟಿ ಈ ಸರಣಿಯಲ್ಲಿ ಪ್ರಧಾನ ಭೂಮಿಕೆಯಲ್ಲಿದ್ದಾರೆ. 

ಮಿಷನ್‌ ಫ್ರಂಟ್‌ಲೈನ್‌: ಈ ಸರಣಿಯು ರಾಷ್ಟ್ರೀಯ ರೈಫಲ್ಸ್‌ ಪಡೆಯಲ್ಲಿ ಇಬ್ಬರೂ ಕಠಿಣ ತರಬೇತಿ ಪಡೆಯುವುದು, ಅಲ್ಲಿನ ಜೀವನಕ್ರಮ, ಸೈನಿಕರ ಹೋರಾಟ, ಕಾರ್ಯಾಚರಣೆಯ ರೋಚಕ ದೃಶ್ಯಗಳು ಈ ಸರಣಿಯಲ್ಲಿ ಇವೆ ಎಂದು ವಾಹಿನಿ ಹೇಳಿದೆ.  

ಬ್ರೇಕಿಂಗ್‌ ಪಾಯಿಂಟ್‌: ಇದು ಪ್ಯಾರಾಟ್ರೂಪರ್ಸ್, ಆರ್ಮ್‌ಡ್‌ ಕಾರ್ಪ್ಸ್, ಆರ್ಮಿ ಆರ್ಟಿಲರಿ ಮತ್ತು ಆರ್ಮಿ ಏವಿಯೇಷನ್ ಸೇರಿದಂತೆ ತರಬೇತಿಯಲ್ಲಿ ಸೈನಿಕರ ವಿವಿಧ ಗುಂಪುಗಳ ಬಗ್ಗೆ ವಿವರಿಸುವ 4 ಕಂತುಗಳ ಸರಣಿ. ನಾಸಿಕ್, ಜೋಧ್‌ಪುರ ಅಹಮದ್‌ನಗರ, ಆಗ್ರಾ, ಜೈಸಲ್ಮೇರ್ ಮತ್ತು ಸರ್ಮಥುರಾ ನಗರಗಳಲ್ಲಿ ನೀಡಲಾಗುವ ತರಬೇತಿಯನ್ನು ತೋರಿಸಲಾಗಿದೆ.



Read More…Source link

[wpas_products keywords=”deal of the day party wear for men wedding shirt”]