Karnataka news paper

ಒಂದೇ ಫೋನಿನಲ್ಲಿ ಒಂದಕ್ಕಿಂತ ಹೆಚ್ಚು ಇನ್‌ಸ್ಟಾಗ್ರಾಮ್‌ ಖಾತೆ ತೆರೆಯುವುದು ಹೇಗೆ?


ಏಕಕಾಲದಲ್ಲಿ

ಹೌದು, ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್‌ನಲ್ಲಿ ಬಳಕೆದಾರರು ಏಕಕಾಲದಲ್ಲಿ ಬಹು ಖಾತೆಗಳನ್ನು ತೆರೆಯಲು ಸಾಧ್ಯ ಇದೆ. ಮೊದಲು, ಒಬ್ಬ ಬಳಕೆದಾರ ಕೇವಲ ಒಂದು ಇನ್‌ಸ್ಟಾಗ್ರಾಮ್‌ (Instagram) ಖಾತೆಯನ್ನು ನಿರ್ವಹಿಸಬಹುದಾಗಿತ್ತು. ಆದರೆ ಈಗ ಬಹು ಖಾತೆ ನಿರ್ವಹಿಸಲು ಅವಕಾಶ ಇದೆ. ಇನ್‌ಸ್ಟಾಗ್ರಾಮ್‌ ಒಂದೇ ಫೋನ್‌ನಲ್ಲಿ ಒಟ್ಟು ಐದು ಖಾತೆಗಳನ್ನು ಅನುಮತಿಸಿದೆ. ಅವುಗಳಲ್ಲಿ ಒಂದು ವೈಯಕ್ತಿಕ, ಒಂದು ಅಧಿಕೃತ ಹಾಗೂ ಮೂರು ಇತರೆ ಖಾತೆಗಳಿಗೆ ಅವಕಾಶ ಇದೆ.

ವೃತ್ತಿಪರ

ಇನ್‌ಸ್ಟಾಗ್ರಾಮ್‌ನ ಈ ಆಯ್ಕೆಯು ಆಂಡ್ರಾಯ್ಡ್‌ (Android) ಮತ್ತು ಐಓಎಸ್ (iOS) ಪ್ಲಾಟ್‌ಫಾರ್ಮ್‌ಗಳಿಗೆ ಲಭ್ಯವಿದೆ. ಈ ಆಯ್ಕೆಯಿಂದಾಗಿ ಬಳಕೆದಾರರು ಒಂದೇ ಫೋನಿನಲ್ಲಿ ವೈಯಕ್ತಿಕ ಮತ್ತು ವೃತ್ತಿಪರ ಇನ್‌ಸ್ಟಾಗ್ರಾಮ್‌ ಖಾತೆಗಳನ್ನು ಸುಲಭವಾಗಿ ನಿರ್ವಹಿಸಬಹುದಾಗಿದೆ. ಹಾಗಾದರೇ ಒಂದೇ ಫೋನಿನಲ್ಲಿ ಬಹು ಇನ್‌ಸ್ಟಾಗ್ರಾಮ್‌ ಖಾತೆಗಳನ್ನು ತೆರೆಯುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಈ ಕ್ರಮ ಅನುಸರಿಸಿ:

ಈ ಕ್ರಮ ಅನುಸರಿಸಿ:

ಹಂತ 1: ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್ ಅನ್ನು ತೆರೆಯಿರಿ

ಹಂತ 2: ಈಗ ಕೆಳಗಿನ ಬಲ ಮೂಲೆಯಲ್ಲಿರುವ ಡಿಪಿ ಅನ್ನು ಕ್ಲಿಕ್ ಮಾಡುವ ಮೂಲಕ ಪ್ರೊಫೈಲ್‌ಗೆ ಹೋಗಿ.

ಹಂತ 3: ಗೇರ್ ಆಯ್ಕೆಮಾಡಿ ಅಥವಾ ಪರದೆಯ ಮೇಲಿನ ಬಲ ಭಾಗದ ಮೂಲೆಯಲ್ಲಿರುವ ಮೂರು ಚುಕ್ಕೆಗಳನ್ನು ಆಯ್ಕೆಮಾಡಿ.

ಹಂತ 4: ಮುಂದೆ, ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಖಾತೆಯನ್ನು ಸೇರಿಸಿ ಆಯ್ಕೆಮಾಡಿ.

ಹಂತ 5: ನಿಮ್ಮ ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ ಅಥವಾ ನಿಮ್ಮ ಫೇಸ್‌ಬುಕ್ ಖಾತೆಯೊಂದಿಗೆ ಲಾಗ್ ಇನ್ ಮಾಡಿ

ಒಂದು ಖಾತೆಯಿಂದ ಇನ್ನೊಂದಕ್ಕೆ ಬದಲಾಯಿಸಲು ಹೀಗೆ ಮಾಡಿ:

ಒಂದು ಖಾತೆಯಿಂದ ಇನ್ನೊಂದಕ್ಕೆ ಬದಲಾಯಿಸಲು ಹೀಗೆ ಮಾಡಿ:

ಹಂತ 1: ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದ ನಂತರ, ಪ್ರೊಫೈಲ್ ಪುಟಕ್ಕೆ ಹೋಗಿ ಮತ್ತು ನಿಮ್ಮ ಬಳಕೆದಾರ ಹೆಸರನ್ನು ಟ್ಯಾಪ್ ಮಾಡಿ, ಅದನ್ನು ಮೇಲಿನ ಎಡ ಮೂಲೆಯಲ್ಲಿ ನೀಡಲಾಗಿದೆ.

ಹಂತ 2: ಈಗ ನೀವು ಕಾರ್ಯನಿರ್ವಹಿಸಲು ಬಯಸುವ ಖಾತೆಯನ್ನು ಆಯ್ಕೆಮಾಡಿ ಮತ್ತು ನಿರ್ವಹಿಸಿ.

ಇನ್‌ಸ್ಟಾಗ್ರಾಮ್‌ ಖಾತೆಯನ್ನು ಡಿಲೀಟ್ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್‌ ಖಾತೆಯನ್ನು ಡಿಲೀಟ್ ಮಾಡುವುದು ಹೇಗೆ?

ಹಂತ 1: ಪ್ರೊಫೈಲ್ ಪುಟಕ್ಕೆ ಹೋಗಿ ಮತ್ತು ಗೇರ್ ಐಕಾನ್ ಆಯ್ಕೆಮಾಡಿ.

ಹಂತ 2: ಕೆಳಕ್ಕೆ ಸ್ಕ್ರಾಲ್ ಮಾಡಿ ಮತ್ತು ಲಾಗ್‌ಔಟ್ ಆಯ್ಕೆಗೆ ಹೋಗಿ, ಆಡ್ ಖಾತೆಯ ಬಳಿಯೇ ನೀಡಲಾಗಿದೆ.

ಹಂತ 3: ಡಿಲೀಟ್ ಮಾಡ ಬಯಸುವ ಯಾವುದೇ ಖಾತೆಯಿಂದ ಲಾಗ್ ಔಟ್ ಮಾಡಿ ಅಥವಾ ನೀವು ಎಲ್ಲಾ ಖಾತೆಗಳಿಂದ ಲಾಗ್ ಔಟ್ ಮಾಡಬಹುದು. ಇದು ಎಲ್ಲಾ ಖಾತೆಗಳನ್ನು ತೆಗೆದುಹಾಕುತ್ತದೆ.

ಶಾಶ್ವತವಾಗಿ ಇನ್‌ಸ್ಟಾಗ್ರಾಂ ಡಿಲೀಟ್ ಮಾಡಲು ಹೀಗೆ ಮಾಡಿ:

ಶಾಶ್ವತವಾಗಿ ಇನ್‌ಸ್ಟಾಗ್ರಾಂ ಡಿಲೀಟ್ ಮಾಡಲು ಹೀಗೆ ಮಾಡಿ:

* ವೆಬ್ ವರ್ಷನ್‌ ಇನ್‌ಸ್ಟಾಗ್ರಾಂ ತೆರೆದು ಲಾಗ್‌ ಇನ್‌ ಆಗಿರಿ.
* ಅಕೌಂಟ್ ತೆಗೆದುಹಾಕುವ ಸೂಕ್ತ ಕಾರಣ ತಿಳಿಸಬೇಕು.
* ನಂತರ ಶಾಶ್ವತವಾಗಿ ತೆಗೆದುಹಾಕುವ ಆಯ್ಕೆ ಕಾಣಿಸುತ್ತದೆ- rid of it forever
* ನಂತರ ಪಾಸ್‌ವರ್ಡ್‌ ಎಂಟ್ರಿ ಮಾಡಿ.
* ಕೊನೆಯದಾಗಿ ಡಿಸೆಬಲ್ ಆಯ್ಕೆ ಕ್ಲಿಕ್ ಮಾಡಿ.



Read more…

[wpas_products keywords=”smartphones under 15000 6gb ram”]