Karnataka news paper

ಉಗ್ರರ ಬೆಂಬಲಿಗರಿಗೆ ಪಾಕಿಸ್ತಾನದಲ್ಲಿ ಪಂಚತಾರಾ ಆತಿಥ್ಯ–ಭಾರತ ಆಕ್ಷೇಪ


ವಿಶ್ವಸಂಸ್ಥೆಯಲ್ಲಿರುವ ಭಾರತದ ಕಾಯಂ ಪ್ರತಿನಿಧಿ ಟಿ.ಎಸ್‌.ತಿರುಮೂರ್ತಿ

ನ್ಯೂಯಾರ್ಕ್‌: ಮುಂಬೈಯಲ್ಲಿ 1993ರಲ್ಲಿ ಸಂಭವಿಸಿದ ಸರಣಿ ಬಾಂಬ್‌ ಸ್ಫೋಟಕ್ಕೆ ಕಾರಣಕರ್ತರಾದ ಅಪರಾಧ ಜಾಲದವರು ಪಾಕಿಸ್ತಾನದಲ್ಲಿ ಪಂಚತಾರಾ ಆತಿಥ್ಯ ಪಡೆಯುತ್ತಿದ್ದು, ಸರ್ಕಾರವೇ ಅವರಿಗೆ ರಕ್ಷಣೆಯನ್ನೂ ನೀಡುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿರುವ ಭಾರತದ ಕಾಯಂ ಪ್ರತಿನಿಧಿ ಟಿ.ಎಸ್‌.ತಿರುಮೂರ್ತಿ ಆರೋಪಿಸಿದ್ದಾರೆ.

ಇಲ್ಲಿ ಮಂಗಳವಾರ ಗ್ಲೋಬಲ್‌ ಕೌಂಟರ್‌ ಟೆರರಿಸಂ ಕೌನ್ಸಿಲ್‌ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಭಯೋತ್ಪಾದನೆ ನಿಗ್ರಹ ಸಮಾವೇಶ 2022ರಲ್ಲಿ ಮಾತನಾಡಿದ ಅವರು, ಪಾಕಿಸ್ತಾನದಲ್ಲಿ ಎಲ್‌ಇಟಿ ಮತ್ತು ಜೆಇಎಂ ಸಂಘಟನೆಗಳೂ ಬಲಗೊಳ್ಳುತ್ತಿವೆ. ಅಫ್ಗಾನಿಸ್ತಾನದಲ್ಲಿ ಈಚೆಗೆ ನಡೆದಿರುವ ಬೆಳವಣಿಗೆಗಳಿಂದ ಉಗ್ರ ಸಂಘಟನೆಗಳಿಗೆ ಮತ್ತೆ ಶಕ್ತಿ ಬರುವಂತಾಗಿದೆ ಎಂದರು.

2020ರಲ್ಲಿ ಭಾರತವು ದಾವೂದ್‌ ಇಬ್ರಾಹಿಂ ಸಹಿತ 88 ಭಯೋತ್ಪಾದನಾ ಗುಂಪುಗಳನ್ನು ನಿಷೇಧಿಸಿದ್ದು. ಆ ಬಳಿಕವಷ್ಟೇ ಪಾಕಿಸ್ತಾನವು ದಾವೂದ್ ಇಬ್ರಾಹಿಂ ತನ್ನ ದೇಶದಲ್ಲಿ ಇರುವುದನ್ನು ಒಪ್ಪಿಕೊಂಡಿತ್ತು.



Read more from source

[wpas_products keywords=”deals of the day offer today electronic”]