ಹೈಲೈಟ್ಸ್:
- ಡಿಸೆಂಬರ್ ಅಂತ್ಯಕ್ಕೆ ಡಾಲರ್ ಎದುರು ರೂಪಾಯಿ ಮೌಲ್ಯ ಇಳಿಕೆಗೆ ಪ್ರೋತ್ಸಾಹ
- ಪಾಲಿಸಿ ದರಗಳ ಬಗ್ಗೆ ಪರಾಮರ್ಶೆ ಮಾಡಲು 20 ಕೇಂದ್ರ ಬ್ಯಾಂಕ್‌ಗಳ ಸಭೆ
- ದುರ್ಬಲಗೊಂಡ ಕರೆನ್ಸಿಯಿಂದ ರಫ್ತು ವಹಿವಾಟಿಗೆ ಉತ್ತೇಜನ ನೀಡಲು ಸಾಧ್ಯ
ಬಾಂಡ್ ಖರೀದಿಗಳನ್ನು ಪೂರ್ಣಗೊಳಿಸುವುದನ್ನು ಅಮೆರಿಕ ಫೆಡರಲ್ ರಿಸರ್ವ್ ಚುರುಕುಗೊಳಿಸಿದರೆ ಡಿಸೆಂಬರ್ ಅಂತ್ಯದ ವೇಳೆಗೆ ಸ್ಥಳೀಯ ಕರೆನ್ಸಿ 76.30/50ರ ಮಟ್ಟಕ್ಕೆ ತಲುಪುವ ನಿರೀಕ್ಷೆ ಇದೆ. ಋಣಾತ್ಮಕ ಬಡ್ಡಿ ದರದ ವಿಸ್ತರಣೆಯು ಕರೆನ್ಸಿ ಮೇಲಿನ ಒತ್ತಡವನ್ನು ಮತ್ತಷ್ಟು ಹೆಚ್ಚಿಸಲಿದೆ.
ಸರಕಾರಿ ಬ್ಯಾಂಕ್‌ಗಳಲ್ಲಿ 41,177 ಹುದ್ದೆಗಳು ಖಾಲಿ – ನಿರ್ಮಲಾ ಸೀತಾರಾಮನ್
ನೀತಿ ದರಗಳ ಪರಾಮರ್ಶೆಗಾಗಿ ಫೆಡರಲ್ ರಿಸರ್ವ್ ಸೇರಿದಂತೆ ಸುಮಾರು 20 ಕೇಂದ್ರ ಬ್ಯಾಂಕ್‌ಗಳು ಈ ವಾರ ಸಭೆ ಸೇರಲಿವೆ. ನವೆಂಬರ್‌ನಲ್ಲಿ 15 ಬಿಲಿಯನ್ ಡಾಲರ್ ಇದ್ದ ಆಸ್ತಿ ಖರೀದಿಯ ವೇಗವನ್ನು ಫೆಡರಲ್ ರಿಸರ್ವ್ 25-30 ಬಿಲಿಯನ್ ಡಾಲರ್‌ಗೆ ಹೆಚ್ಚಿಸುವ ನಿರೀಕ್ಷೆಯಿದೆ. ಅದರ ನೀತಿ ದರದಲ್ಲಿ ಯಾವುದೇ ಬದಲಾವಣೆಯಾಗುವ ಸಾಧ್ಯತೆ ಇಲ್ಲ. ಯುರೋಝೋನ್, ಜಪಾನ್, ಫಿಲಿಪ್ಪೀನ್ಸ್, ತೈವಾನ್ ಮತ್ತು ಇಂಡೋನೇಷ್ಯಾದ ಕೇಂದ್ರ ಬ್ಯಾಂಕ್‌ಗಳು ಅದೇ ಮಟ್ಟದ ದರವನ್ನು ಉಳಿಸಿಕೊಳ್ಳುವ ಸಂಭವ ಇದೆ.
ಸೋಮವಾರ ರೂಪಾಯಿ ಮೌಲ್ಯ ಪ್ರತಿ ಡಾಲರ್‌ಗೆ 75.77 ರೂ.ದಲ್ಲಿ ಅಂತ್ಯಗೊಂಡಿತ್ತು. ಹಿಂದಿನ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಕಳೆದ ಎರಡು ವಾರಗಳಲ್ಲಿ ಸ್ಥಳೀಯ ಕರೆನ್ಸಿ ಶೇ 1.3ರಷ್ಟು ಕುಸಿತ ಕಂಡಿದ್ದು, ಕಳೆದ ವಾರ ಶೇ 0.8 ಕುಸಿತವಾಗಿತ್ತು.
ಫೆಡರಲ್ ಮುಂದಿನ ವರ್ಷ ದರ ಏರಿಕೆಯ ಸುಳಿವು ನೀಡಿದೆ. ಫೆಡರಲ್ ಅದರಂತೆ ನಡೆದರೆ ಡಿಸೆಂಬರ್ ಅಂತ್ಯಕ್ಕೆ ರೂಪಾಯಿ 76.30 ಮಟ್ಟಕ್ಕೆ ಇಳಿಯಬಹುದು. ಕಳೆದ ಎರಡು ವರ್ಷಗಳಲ್ಲಿ 76.50ರ ಮಟ್ಟದಲ್ಲಿಯೇ ಇರುವುದರಿಂದ ಈ ದರವಿದ್ದರೆ ಆರ್‌ಬಿಐ ಹೆಚ್ಚು ತಲೆಕೆಡಿಸಿಕೊಳ್ಳಲಾರದು ಎಂದು ಕೊಟಕ್ ಸೆಕ್ಯುರಿಟೀಸ್ ಉಪಾಧ್ಯಕ್ಷ ಅನಿಂದ್ಯಾ ಬ್ಯಾನರ್ಜಿ ಹೇಳಿದ್ದಾರೆ.
ಬೆಂಗಳೂರಿನ ನಿಂಜಕಾರ್ಟ್‌ನಲ್ಲಿ ಫ್ಲಿಪ್‌ಕಾರ್ಟ್, ವಾಲ್‌ಮಾರ್ಟ್‌ನಿಂದ 1,100 ಕೋಟಿ ರೂ. ಹೂಡಿಕೆ
ಉನ್ನತ ಮಟ್ಟದಲ್ಲಿ ಆರ್‌ಬಿಐನ ಮಧ್ಯಪ್ರವೇಶವನ್ನು ವ್ಯಾಪಾರಿಗಳು ಎದುರು ನೋಡುತ್ತಿದ್ದಾರೆ. ಹಸ್ತಕ್ಷೇಪದ ವೇಗ ನಿಧಾನವಾಗಿದ್ದರೆ, ವ್ಯಾಪಾರ ಅಂತ್ಯವು 77ರ ಮಟ್ಟದತ್ತ ಸಾಗಬಹುದು.
ಭಾರತದ ಒಟ್ಟಾರೆ ವಾಣಿಜ್ಯ ರಫ್ತು ಸತತ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಶೇ 40ರ ಸಮೀಪದ ಬೆಳವಣಿಗೆಯೊಂದಿಗೆ 100 ಬಿಲಿಯನ್ ಡಾಲರ್ ಗಡಿಯನ್ನು ದಾಟುವುದು ಮುಂದುವರಿಯಲಿದೆ ಎಂದು ಎಕ್ಸ್‌ಪೋರ್ಟ್-ಇಂಪೋರ್ಟ್ ಬ್ಯಾಂಕ್ ಆಫ್ ಇಂಡಿಯಾ ಅಂದಾಜಿಸಿದೆ. ತೈಲಯೇತರ ರಫ್ತುಗಳು ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಶೇ 27ರ ಏರಿಕೆಯೊಂದಿಗೆ 89 ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆಯಿದೆ. ಕುಸಿತಗೊಂಡ ಕರೆನ್ಸಿ ಇದಕ್ಕೆ ಬೆಂಬಲ ನೀಡಲಿದೆ.
ತೀಕ್ಷ್ಣ ಒಳನೋಟ ಹಾಗೂ 20ಕ್ಕೂ ಹೆಚ್ಚು ವಲಯಗಳ ವಿಸ್ತೃತ ಮಾಹಿತಿ ಒಳಗೊಂಡ ‘ಎಕನಾಮಿಕ್ ಟೈಮ್ಸ್‘ ವಿಶೇಷ ಲೇಖನಗಳಿಗಾಗಿ ಈಗಲೇ ಸಬ್‌ಸ್ಕ್ರೈಬ್ ಆಗಿ.