ಹೈಲೈಟ್ಸ್:
- ಭಾರತ-ದಕ್ಷಿಣ ಆಫ್ರಿಕಾ ನಡುವಣ ಮೂರು ಪಂದ್ಯಗಳ ಒಡಿಐ ಸರಣಿ.
- ಮೊದಲ ಒಡಿಐಗೆ ಟೀಮ್ ಇಂಡಿಯಾ ಇಲೆವೆನ್‌ನಲ್ಲಿ ಮಹತ್ವದ ಆಯ್ಕೆ.
- ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಉಳಿಸಿಕೊಂಡ ಶಿಖರ್ ಧವನ್.
ಕಳೆದ ವರ್ಷ ನಡೆದ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲೂ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದ ಧವನ್, ಇತ್ತೀಚಿನ ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಹೀಗಾಗಿ ಹಲವು ಮಾಜಿ ಕ್ರಿಕೆಟಿಗರು ಧವನ್ ಅವರನ್ನು ಆಡಿಸಬಾದರು ಎಂಏ ಅಭಿಪ್ರಾಯ ಪಟ್ಟಿದ್ದರು.
ಈ ಬಗ್ಗೆ ಮಾತನಾಡಿರುವ ಮಾಜಿ ಓಪನರ್ ಗೌತಮ್ ಗಂಭೀರ್, ಟೀಮ್ ಇಂಡಿಯಾ ಅನುಭವಿ ಎಡಗೈ ಬ್ಯಾಟ್ಸ್‌ಮನ್ ಸೇವೆ ಕಳೆದುಕೊಂಡರೆ ಅದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಶಿಖರ್ ಪರ ಬ್ಯಾಟ್ ಬೀಸಿದ್ದಾರೆ.
ಓಡಿಐ ಸರಣಿಯಲ್ಲಿ ಭಾರತಕ್ಕೆ ಎದುರಾಗಿರುವ 3 ಸವಾಲು ತಿಳಿಸಿದ ಚೋಪ್ರಾ!
“ಶಿಖರ್ ಧವನ್ ಬ್ಯಾಟಿಂಗ್ ಕಣ್ಣಿಗೆ ಹಿತ ನೀಡುವಂಥದ್ದು. ಎಡಗೈ ಬ್ಯಾಟ್ಸ್‌ಮನ್‌ಗಳಲ್ಲಿ ಇರಬೇಕಾದ ಎಲ್ಲಾ ಹೊಡೆತಗಳು ಅವರಲ್ಲಿದೆ. ಅದ್ಭುತ ಕವರ್ ಡ್ರೈವ್ ಹೊಂದಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾದಲ್ಲಿ ಶಿಖರ್ ಧವನ್‌ಗೆ ತಮ್ಮ ಲಯ ಕಂಡುಕೊಳ್ಳಲು ಉತ್ತಮ ಅವಕಾಶವಿದೆ. ವಯಸ್ಸಾಗಿದೆ ಎಂದ ಮಾತ್ರಕ್ಕೆ ಅವರನ್ನು ಆಡಿಸದೇ ಇರುವ ತಂತ್ರದ ಬಗ್ಗೆ ನನಗೆ ವಿಶ್ವಾಸವಿಲ್ಲ. ಅವರಿಗೀಗ 36 ವರ್ಷ ಎಂದು ಟೀಕೆ ಮಾಡಲಾಗುತ್ತಿದೆ. ಹೀಗಾಗಿ ಶಿಖರ್ ಆಚೆಗಿನ ಆಟಗಾರರನ್ನು ನೋಡಬೇಕು ಎಂದು ಹೇಳುತ್ತಿದ್ದಾರೆ. ಆದರೆ ಶಿಖರ್ ಅವರನ್ನು ಈ ಸರಣಿಯಲ್ಲಿ ಆಡುವ ಹನ್ನೊಂದರ ಬಳಗದಿಂದ ಕೈ ಬಿಡುವುದರಲ್ಲಿ ಯಾವುದೇ ಅರ್ಥವಿಲ್ಲ,” ಎಂದು ಗಂಭೀರ್ ಹೇಳಿದ್ದಾರೆ.
ಕೆಎಲ್ ರಾಹುಲ್ ಮೊದಲ ಒಡಿಐಗೆ ಆಯ್ಕೆ ಮಾಡಿಕೊಂಡ ಟೀಮ್ ಇಂಡಿಯಾ ಇಲೆವೆನ್‌ನಲ್ಲಿ ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಮತ್ತು ದೀಪಕ್ ಚಹರ್ ಸ್ಥಾನ ಪಡೆಯಲು ವಿಫಲರಾದರು. ರಾಹುಲ್ ಇಬ್ಬರು ಸ್ಪಿನ್ನರ್‌ಗಳನ್ನು ಆಯ್ಕೆ ಮಾಡಿ ಅಚ್ಚರಿ ಮುಡಿಸಿದರು.
ಭಾರತ ವಿರುದ್ಧ ಓಡಿಐ ಸರಣಿಯಿಂದ ಕಗಿಸೊ ರಬಾಡಗೆ ವಿಶ್ರಾಂತಿ!
ಮೊದಲ ಒಡಿಐಗೆ ಟೀಮ್ ಇಂಡಿಯಾ ಆಯ್ಕೆ ಮಾಡಿದ ಹನ್ನೊಂದು ಆಟಗಾರರ ಪಟ್ಟಿ
1. ಕೆಎಲ್ ರಾಹುಲ್ (ಕ್ಯಾಪ್ಟನ್/ ಓಪನರ್)
2. ಶಿಖರ್ ಧವನ್ (ಓಪನರ್)
3. ವಿರಾಟ್ ಕೊಹ್ಲಿ (ಬ್ಯಾಟ್ಸ್‌ಮನ್)
4. ಶ್ರೇಯಸ್ ಅಯ್ಯರ್ (ಬ್ಯಾಟ್ಸ್‌ಮನ್)
5. ರಿಷಭ್ ಪಂತ್ (ವಿಕೆಟ್‌ಕೀಪರ್/ ಬ್ಯಾಟ್ಸ್‌ಮನ್)
6. ವೆಂಕಟೇಶ್ ಅಯ್ಯರ್ (ಆಲ್‌ರೌಂಡರ್)
7. ಆರ್ ಅಶ್ವಿನ್ (ಆಫ್ ಸ್ಪಿನ್ನರ್)
8. ಶಾರ್ದುಲ್ ಠಾಕೂರ್ (ಆಲ್‌ರೌಂಡರ್)
9. ಭುವನೇಶ್ವರ್ ಕುಮಾರ್ (ಬಲಗೈ ವೇಗಿ)
10. ಜಸ್‌ಪ್ರೀತ್ ಬುಮ್ರಾ (ಬಲಗೈ ವೇಗಿ)
11. ಯುಜ್ವೇಂದ್ರ ಚಹಲ್ (ಲೆಗ್ ಸ್ಪಿನ್ನರ್)
ಓಡಿಐ ಸರಣಿಯಲ್ಲಿ ಕೊಹ್ಲಿ ಸೆಂಚುರಿ ಬಾರಿಸುವುದು ಪಕ್ಕಾ ಎಂದ ಮಾರ್ಕೆಲ್!
ವೆಂಕಟೇಶ್ ಅಯ್ಯರ್‌ಗೆ ಪದಾರ್ಪಣೆಯ ಭಾಗ್ಯ
ಐಪಿಎಲ್ 2021 ಟೂರ್ನಿಯ 2ನೇ ಚರಣದಲ್ಲಿ ಮಿಂಚಿದ ವೆಂಕಟೇಶ್ ಅಯ್ಯರ್‌ಗೆ ಅದೃಷ್ಟದ ಬಾಗಿಲು ತೆರೆದಿದೆ. ನ್ಯೂಜಿಲೆಂಡ್ ವಿರುದ್ಧದ ಟಿ20 ಕ್ರಿಕೆಟ್ ಸರಣಿಯಲ್ಲಿ ಭಾರತ ತಂಡಕ್ಕೆ ಕಾಲಿಟ್ಟ ವೆಂಕಟೇಶ್‌ಗೆ ಈಗ ಭಾರತ ಒಡಿಐ ತಂಡದಲ್ಲೂ ಆಡುವ ಅವಕಾಶ ಸಿಕ್ಕಿದೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ಗೆ ಬಲವಾಗಲು ಹಾಗೂ 6ನೇ ಬೌಲರ್ ಆಗಿ ದಕ್ಷಿಣ ಆಫ್ರಿಕಾ ವಿರುದ್ಧದ ಒಡಿಐ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಇಲೆವೆನ್‌ಗೆ ಸೇರಿದ್ದಾರೆ.
ಕಳೆದ ವರ್ಷ ನಡೆದ ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ 27 ವರ್ಷದ ಆಲ್‌ರೌಂಡರ್ ಮಧ್ಯ ಪ್ರದೇಶ ಪರ ಮೂರು ಶತಕಗಳನ್ನು ಒಳಗೊಂಡ 379 ರನ್ ಸಿಡಿಸಿ, 9 ವಿಕೆಟ್‌ಗಳನ್ನು ಪಡೆದು ಮಿಂಚಿದ್ದರು. ಇದೇ ಕಾರಣಕ್ಕೆ ಭಾರತ ಒಡಿಐ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ.
Read more
[wpas_products keywords=”deal of the day sale today offer all”]