Karnataka news paper

ಸಮಂತಾ ಡ್ಯಾನ್ಸ್ ನಂಬರ್ ಗೆ ಪುರುಷರ ಸಂಘ ಆಕ್ಷೇಪ: ‘ಪುಷ್ಪ’ ಸಿನಿಮಾದ ಡ್ಯಾನ್ ನಂಬರ್ ನಿಷೇಧಿಸುವಂತೆ ಪ್ರಕರಣ ದಾಖಲು


Source : The New Indian Express

ಹೈದರಾಬಾದ್: ಅಲ್ಲು ಅರ್ಜುನ್- ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ- ದಿ ರೈಸ್’ ತೆಲುಗು ಸಿನಿಮಾದಲ್ಲಿನ ಡ್ಯಾನ್ ನಂಬರ್ ವಿವಾದಕ್ಕೆ ಗುರಿಯಾಗಿದೆ. ನಟಿ ಸಮಂತಾ ಹೆಜ್ಜೆ ಹಾಕಿದ್ದ ಈ ಡ್ಯಾನ್ಸ್ ನಂಬರ್ ವಿರುದ್ಧ ಪುರುಷರ ಸಂಘ ಕೋರ್ಟ್ ಮೆಟ್ಟಿಲೇರಿದೆ. 

ಇದನ್ನೂ ಓದಿ: ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪಾ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ 

ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದ ‘ಓ ಅಂತವಾ’ ಹಾಡಿನಲ್ಲಿ ಪುರುಷರು ಎಂದರೆ ಕೇವಲ ಕಾಮದ ಹಿಂದೆ ಬೀಳುವವರು ಎನ್ನುವ ಅರ್ಥದ ಸಾಲುಗಳಿವೆ ಎನ್ನುವ ಆರೋಪ ಕೇಳಿಬಂದಿತ್ತು. ಪುರುಷರಿಗೆ ಅವಹೇಳನ ಉಂಟುಮಾಡುವ ಈ ಹಾಡನ್ನು ನಿಷೇಧಿಸುವಂತೆ ಕೋರಿ ಆಂಧ್ರ ಪುರುಷರ ಸಂಘ ನ್ಯಾಯಾಲಯದ ಮೆಟ್ಟಿಲೇರಿದೆ.

ಇದನ್ನೂ ಓದಿ: ಡೈವರ್ಸ್ ಬಳಿಕ ಚಿತ್ರರಂಗದತ್ತ ಮುಖಮಾಡಿದ ನಟಿ: ಪುಷ್ಪ ಸಿನಿಮಾದ ಐಟಂ ಸಾಂಗ್‌ ಗೆ ಹೆಜ್ಜೆ ಹಾಕಿದ ಸಮಂತಾ

ನಟಿ ಸಮಂತಾ ಇತ್ತೀಚಿಗಷ್ಟೆ ತಾವು ಪತಿ ನಾಗಚೈತನ್ಯರಿಂದ ದೂರವಾಗುತ್ತಿರುವುದಾಗಿ ಬಹಿರಂಗಪಡಿಸಿದ್ದರು. ಈ ತಾರಾದಂಪತಿಯ ವಿಚ್ಚೇದನ ಸುದ್ದಿ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿತ್ತು. ಅದರ ಬೆನ್ನಲ್ಲೇ ಸಮಂತಾ ನಟಿಸಿದ ಹಾಡು ವಿವಾದಕ್ಕೆ ಕಾರಣವಾಗಿರುವುದು ವಿಪರ್ಯಾಸ.

ಇದನ್ನೂ ಓದಿ: ವಿವಾದಕ್ಕೆ ಕಾರಣವಾದ ನಟ ಅಲ್ಲು ಅರ್ಜುನ್ ಜಾಹೀರಾತು: ಲೀಗಲ್ ನೋಟಿಸ್​ ನೀಡಿದ ಟಿಎಸ್‌ಆರ್‌ಟಿಸಿ



Read more…