ಹೈಲೈಟ್ಸ್:
- ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರು ಪಂದ್ಯಗಳ ಓಡಿಐ ಸರಣಿ.
- ಮೊದಲನೇ ಓಡಿಐ ಪ್ಲೇಯಿಂಗ್ XIನಲ್ಲಿ ಸೂರ್ಯಕುಮಾರ್‌ಗೆ ಅವಕಾಶ ಇಲ್ಲ.
- ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ತಂಡ.
ಬುಧವಾರ ಇಲ್ಲಿನ ಬೊಲೆಂಡ್ ಪಾರ್ಕ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವೂಮ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅಂದಹಾಗೆ ಭಾರತ ತಂಡದ ಆಡುವ ಬಳಗದಲ್ಲಿ ವೆಂಕಟೇಶ್ ಅಯ್ಯರ್‌ಗೆ ಚೊಚ್ಚಲ ಅವಕಾಶ ನೀಡಲಾಯಿತು. ಇವರ ಜೊತೆಗೆ ವೇಗದ ಬೌಲಿಂಗ್ ಆಲ್‌ರೌಂಡರ್ ಆಗಿ ಶಾರ್ದುಲ್ ಠಾಕೂರ್‌ಗೂ ಚಾನ್ಸ್ ನೀಡಲಾಗಿದೆ.
ಟಾಸ್ ವೇಳೆ ಮಾತನಾಡಿದ ನಾಯಕ ಕೆ.ಎಲ್ ರಾಹುಲ್, “ಟಾಸ್ ಗೆದ್ದಿದ್ದರೆ ನಾವು ಕೂಡ ಮೊದಲು ಬ್ಯಾಟ್ ಮಾಡುತ್ತಿದ್ದೆವು. ಇಲ್ಲಿನ ವಿಕೆಟ್ ನೋಡಲು ಸ್ವಲ್ಪ ಒಣಗಿದಂತೆ ಕಾಣುತ್ತಿದೆ. ನಮ್ಮ ಬೌಲಿಂಗ್ ದಾಳಿಯಲ್ಲಿ ಇಬ್ಬರು ಗುಣಮಟ್ಟದ ಸ್ಪಿನ್ನರ್‌ಗಳಿದ್ದಾರೆ. ಹೊಸ ಚೆಂಡಿನಲ್ಲಿ ಜಸ್‌ಪ್ರಿತ್ ಬುಮ್ರಾ ಹಾಗೂ ಭುವನೇಶ್ವರ್ ಕುಮಾರ್ ಬೌಲ್ ಮಾಡಲಿದ್ದು, ಆರಂಭದಲ್ಲಿ ಅವರು ಸ್ವಿಂಗ್ ಮಾಡಲಿದ್ದಾರೆಂಬ ವಿಶ್ವಾಸವಿದೆ,” ಎಂದರು.
IND vs SA 1st ODI: ಮೊದಲನೇ ವಿಕೆಟ್ ಕಳೆದುಕೊಂಡ ದಕ್ಷಿಣ ಆಫ್ರಿಕಾ!
“ವೆಂಕಟೇಶ್ ಅಯ್ಯರ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಶ್ರೇಯಸ್ ಅಯ್ಯರ್ ನಾಲ್ಕನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಆಡಲಿದ್ದಾರೆ. ಕಳೆದ ಎರಡು ದಿನಗಳಿಂದ ತಂಡದ ಆಟಗಾರರು ಭಾವುಕರಾಗಿದ್ದಾರೆ. ವಿರಾಟ್ ಅಡಿಯಲ್ಲಿ ಸಾಕಷ್ಟು ಆಟಗಾರರು ಪದಾರ್ಪಣೆ ಮಾಡಿದ್ದಾರೆ. ಅವರು ಕೂಡ ತಂಡದ ಪ್ರಮುಖ ಭಾಗವಾಗಿದ್ದು, ತಂತ್ರ ಹಾಗೂ ಯೋಜನೆ ಸಂಬಂಧ ಅವರ ನೆರವು ಪಡೆಯುತ್ತೇನೆ. ನಾನು ವೈಯಕ್ತಿಕವಾಗಿ ಜಾಸ್ತಿ ಬದಲಾಗುವುದಿಲ್ಲ. ಪ್ರಯೋಗಾತ್ಮಕವಾಗಿ ಆಡುವ ಬದಲು ಮೊದಲನೇ ಎಸೆತದಿಂದಲೇ ಹೊಡೆತಗಳಿಗೆ ಕೈ ಹಾಕುತ್ತೇವೆ,” ಎಂದು ಕೆ.ಎಲ್ ರಾಹುಲ್ ತಿಳಿಸಿದ್ದಾರೆ.
ಇಲ್ಲಿನ ವಿಕೆಟ್ ಒಣಗಿರುವ ಕಾರಣ ವೆಂಕಟೇಶ್ ಅಯ್ಯರ್ ಹಾಗೂ ಶಾರ್ದುಲ್ ಠಾಕೂರ್ ಇಬ್ಬರು ಫಾಸ್ಟ್ ಬೌಲಿಂಗ್ ಆಲ್‌ರೌಂಡರ್‌ಗಳ ಜೊತೆಗೆ ಇಬ್ಬರು ವಿಶೇಷ ಸ್ಪಿನ್ನರ್‌ಗಳನ್ನು ಪ್ಲೇಯಿಂಗ್ ಇಲೆವೆನ್‌ಗೆ ಟೀಮ್ ಮ್ಯಾನೇಜ್‌ಮೆಂಟ್ ಕರೆಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸೂರ್ಯಕುಮಾರ್ ಯಾದವ್ ಆಡುವ ಬಳಗದಲ್ಲಿ ಅವಕಾಶ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ.
ದಕ್ಷಿಣ ಆಫ್ರಿಕಾ Vs ಭಾರತ ಮೊದಲನೇ ಓಡಿಐ ಸ್ಕೋರ್‌ಕಾರ್ಡ್
ಸೂರ್ಯಕುಮಾರ್‌ಗೆ ಚಾನ್ಸ್ ಕಷ್ಟ: ಇಲ್ಲಿನ ಪಿಚ್ ಪ್ಲ್ಯಾಟ್ ಹಾಗೂ ನಿಧಾನಗತಿಯಿಂದ ಕೂಡಿರುವ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಇಬ್ಬರು ಆಲ್‌ರೌಂಡರ್‌ಗಳನ್ನು ಕಣಕ್ಕೆ ಇಳಿಸುವುದು ಅಗತ್ಯವಿದೆ. ಈ ಕಾರಣ ಮುಂದಿನ ಪಂದ್ಯಗಳಲ್ಲಿಯೂ ಟೀಮ್ ಮ್ಯಾನೇಜ್‌ಮೆಂಟ್ ಇಬ್ಬರು ಆಲ್‌ರೌಂಡರ್‌ಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬಹುದು. ಆದ್ದರಿಂದ ಮುಂದಿನ ಹಣಾಹಣಿಗಳಲ್ಲಿಯೂ ಸೂರ್ಯಕುಮಾರ್ ಯಾದವ್‌ಗೆ ಚಾನ್ಸ್ ಸಿಗುವುದು ಕಷ್ಟ.
ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿರುವ ಶ್ರೇಯಸ್ ಅಯ್ಯರ್ ಇದೀಗ ತಂಡಕ್ಕೆ ಮರಳಿದ್ದರಿಂದ ಅವರು ಎಂದಿನಂತೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿದ್ದಾರೆ. ಒಂದು ವೇಳೆ ಶ್ರೇಯಸ್ ಅಯ್ಯರ್ ಸತತ ಎರಡು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದರೆ, ಈ ಸ್ಥಾನಕ್ಕೆ ಸೂರ್ಯಕುಮಾರ್ ಯಾದವ್ ಅವರನ್ನು ಟೀಮ್ ಮ್ಯಾನೇಜ್‌ಮೆಂಟ್ ಕರೆ ತಂದರೂ ಅಚ್ಚರಿ ಇಲ್ಲ.
ಭಾರತ ಪ್ಲೇಯಿಂಗ್ XI : ಕೆಎಲ್ ರಾಹುಲ್(ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್(ವಿ.ಕೀ), ವೆಂಕಟೇಶ್ ಅಯ್ಯರ್, ಶಾರ್ದುಲ್ ಠಾಕೂರ್, ರವಿಚಂದ್ರನ್ ಅಶ್ವಿನ್ , ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಹಲ್, ಜಸ್‌ಪ್ರಿತ್ ಬುಮ್ರಾ
Read more
[wpas_products keywords=”deal of the day gym”]