ಹೈಲೈಟ್ಸ್:
- ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಾಪ್ ಸಿಂಹ ಕಿಡಿ
- ಕ್ಯಾಂಟೀನ್‌ಗೆ ಹೆಸರಿಡುವಾಗ ನಾರಾಯಣ ಗುರುಗಳ ನೆನಪಾಗಿಲ್ಲ
- ಆಗ ಇಂದಿರಾ ಗಾಂಧಿ ಮಾತ್ರ ಇವರಿಗೆ ನೆನಪಿದ್ದರು ಎಂದು ಸಿಂಹ ಕಿಡಿ
ಮೈಸೂರಿನಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ರಾಜ್ಯದಲ್ಲಿ ಕ್ಯಾಂಟೀನ್‌ಗೆ ಹೆಸರಿಡುವಾಗ ಈ ಮಹಾಪುರುಷರ ಹೆಸರು ನೆನಪಾಗಲಿಲ್ಲ. ಆಗ ನೆನಪಾಗಿದ್ದು ಇಂದಿರಾಗಾಂಧಿ ಮಾತ್ರ. ಅಧಿಕಾರ ಇದ್ದಾಗ ಸಿದ್ದರಾಮಯ್ಯನವರಿಗೆ ನಾಯರಣ ಗುರು, ಒನಕೆ ಓಬವ್ವ, ಮೈಸೂರು ಮಹಾರಾಜರು, ನೆನಪಾಗಲಿಲ್ಲ. ಈಗ ನೆನಪಾಗುತ್ತಿದ್ದಾರೆ ಎಂದು ತಿರುಗೇಟು ನೀಡಿದ್ರು ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತೆ ಮಹಾನೀಯರಿಗೆ ಗೌರವ ಕೊಡುವುದನ್ನು ನಮಗೆ ಹೇಳುತ್ತಿದ್ದಾರೆ.
ಗಣರಾಜ್ಯೋತ್ಸವದಲ್ಲಿ ಒಂದು ವಿಷಯ ಕೊಟ್ಟಿದ್ದಾರೆ.ಆ ವಿಷಯಕ್ಕೆ ಅನುಗುಣವಾಗಿ ಯಾರು ಸ್ತಬ್ಧ ಚಿತ್ರ ಮಾಡಿರುತ್ತಾರೋ ಗುಣಮಟ್ಟದ ಆಧಾರದ ಮೇಲೆ ಅದರ ಆಯ್ಕೆ ಆಗುತ್ತದೆ. ಆಯ್ಕೆ ಪ್ರಕ್ರಿಯೆ ಪಾರದಾರ್ಶಕವಾಗಿರುತ್ತೆ.ಇಲ್ಲಿ ಯಾರ ಮೇಲೂ ಅವಮಾನದ ಪ್ರಶ್ನೆಯೆ ಇರುವುದಿಲ್ಲ. ಸಿದ್ದರಾಮಯ್ಯ ಅವರು ಮೊದಲು ಗಣರಾಜ್ಯೋತ್ಸವದ ಸ್ಥಬ್ಧ ಚಿತ್ರಗಳ ಮಾರ್ಗ ಸೂಚಿ ಓದಿಕೊಳ್ಳಲಿ ಅಂತ ಪ್ರತಾಪ್ ಸಿಂಹ ಟಾಂಗ್ ಕೊಟ್ರು.
ನಾರಾಯಣ ಗುರುಗಳ ಸ್ತಬ್ಧಚಿತ್ರ ತಿರಸ್ಕಾರ; ಏನಿದು ವಿವಾದ? ಇಲ್ಲಿದೆ ಸಂಪೂರ್ಣ ಮಾಹಿತಿ
ಮತ್ತೆ ಲಾಕ್‌ಡೌನ್ ಮಾಡ್ತೀನಿ ಅಂದ್ರೆ ಲಸಿಕೆ ಏಕೆ ಬೇಕಿತ್ತು?
ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಜಾರಿ ಮಾಡಿರುವ ವೀಕೆಂಡ್ ಕರ್ಫ್ಯೂಗೆ ಹಲವು ಬಿಜೆಪಿ ನಾಯಕರೇ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಸಹ ವೀಕೆಂಡ್ ಕರ್ಫ್ಯೂ ನೈಟ್ ಕರ್ಫ್ಯೂ ತೆಗೆಯುವಂತೆ ಒತ್ತಾಯಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ವೀಕೆಂಡ್ ಕರ್ಫ್ಯೂ ವಿಧಿಸುವುದಾದರೇ ಲಸಿಕೆ ಏಕೆ ಬೇಕಿತ್ತು. ..? ಪಂಚ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ.
ಅಲ್ಲಿ ಪ್ರಚಾರ ಸಭೆ ರ್ಯಾಲಿ ನಡೆಸಲಾಗುತ್ತಿದೆ. ಹೀಗಿರುವಾಗ ರಾಜ್ಯದಲ್ಲಿ ಕರ್ಫ್ಯೂ ಯಾಕೆ ರಾಜ್ಯದಲ ಜನರಿಗೆ ಭಯ ಬೀಳಿಸುವುದನ್ನ ಬಿಡಿ. ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ತೆಗೆಯಿರಿ ಎಂದು ಆಗ್ರಹಿಸಿದ್ದಾರೆ. ಕರ್ಫ್ಯೂ ನಿಂದಾಗಿ ರಾಜ್ಯದ ಜನರಿಗೆ ತೊಂದರೆಯಾಗುತ್ತಿದೆ ಜೀವ ಉಳಿಸಿಕೊಳ್ಳಲು ವ್ಯಾಕ್ಸಿನ್ ನೀಡಲಾಗಿದೆ. ಜನರ ಜೀವನ ಉಳಿಸಬೇಕಾದರೇ ಕರ್ಫ್ಯೂ ತೆಗೆಯಿರಿ. ಜನರ ಜೀವ ಜೀವನ ಎರಡೂ ಮುಖ್ಯ. ಸಾರ್ವಜನಿಕರ ಅಭಿಪ್ರಾಯಕ್ಕೆ ನನ್ನ ಬೆಂಬಲವಿದೆ. ಜನರಿಗೆ ಆಗುತ್ತಿರುವ ಕಷ್ಟಗಳನ್ನ ಸಿಎಂ ತಡೆಯಬೇಕು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ಜನರು ತುಂಬಾ ನೊಂದಿದ್ದಾರೆ. ಹೆಚ್ಚಿನ ಜನ ಲಸಿಕೆ ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಲಾಕ್‌ಡೌನ್ ಕರ್ಫ್ಯೂ ಬೇಡ.ಸಿಎಂ ಬಸವರಾಜ ಬೊಮ್ಮಾಯಿ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ನಂಬಿಕೆ ಇದೆ ಎಂದು ವೀಕೆಂಡ್ ಕರ್ಫ್ಯೂ ತೆರವುಗೊಳಿಸಿ ಎಂದು ಪರೋಕ್ಷವಾಗಿ ಸಿಎಂಗೆ ಮನವಿ ಮಾಡಿದ್ರು.
Read more
[wpas_products keywords=”deal of the day sale today offer all”]