ಹೈಲೈಟ್ಸ್:
- ದೇವರಿಗೆ ಪ್ರಾಣಿಬಲಿ ಕೊಡುವಾಗ ಯಡವಟ್ಟು
- ಆಡು ಹಿಡಿದುಕೊಂಡಿದ್ದವನ ತಲೆಯೇ ಕಟ್
- ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಘಟನೆ
ಚಿತ್ತೂರು ಜಿಲ್ಲೆಯ ವಲಸಪಲ್ಲಿ ಗ್ರಾಮದಲ್ಲಿ ಪ್ರತಿವರ್ಷ ಜನವರಿಯಲ್ಲಿ ಜಾತ್ರೆ ನಡೆಯುತ್ತದೆ. ಈ ವೇಳೆ ಯಲ್ಲಮ್ಮ ದೇವಿಗೆ ಪ್ರಾಣಿ ಬಲಿ ನೀಡುವುದು ಸಂಪ್ರದಾಯ. ಅದಂತೆ ಈ ಬಾರಿಯೂ ಆಡನ್ನು ಬಲಿ ನೀಡಲು ಸಿದ್ಧತೆ ನಡೆಸಲಾಗಿತ್ತು. ಬಲಿ ಪೀಠದ ಬಳಿ ಮೇಕೆಯನ್ನು ಕಟ್ಟಲಾಗಿತ್ತು.
ಈ ವೇಳೆ ಚಲಪತಿ ಎಂಬ ವ್ಯಕ್ತಿ ಆಡಿನ ತಲೆ ತಾನೇ ಕಡಿಯುವುದಾಗಿ ಮುಂದೆ ಬಂದಿದ್ದಾನೆ. ಆದರೆ ಆತ ಪಾನಮತ್ತನಾಗಿದ್ದರಿಂದ ಅಲ್ಲಿದ್ದವರೆಲ್ಲಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಾರ ಮಾತನ್ನೂ ಕೇಳದ ಚಲಪತಿ, ಆಡು ಕಡಿಯಲು ಮುಂದಾಗಿ ಮಚ್ಚು ಬೀಸಿದ್ದಾನೆ. ಆದರೆ ಮಚ್ಚಿನ ಏಟು ಆಡಿನ ಬದಲಿಗೆ ಪ್ರಾಣಿಯನ್ನು ಅಲ್ಲಾಡದಂತೆ ಹಿಡಿದುಕೊಂಡಿದ್ದ ಸುರೇಶ್ ಎಂಬಾತನ ಕತ್ತಿಗೆ ಬಿದ್ದಿದೆ. ತೀವ್ರ ರಕ್ತಸ್ತಾವದಿಂದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸ್ಥಳೀಯರು ಸುರೇಶನನ್ನು ಮದನಪಲ್ಲಿ ಆಸ್ಪತ್ರೆಗೆ ಕರೆದೊಯ್ದರೂ ಅಷ್ಟರಲ್ಲಿಆತನ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.
ಅಸ್ಸಾಂನಲ್ಲಿ ನರಬಲಿಗಾಗಿ ಐದು ವರ್ಷದ ಬಾಲಕಿಯ ಹತ್ಯೆ? ಮಂತ್ರವಾದಿ ಬಂಧನ!
”ಕುಡಿದು ತೂರಾಡುತ್ತಿದ್ದ ಚಲಪತಿ, ಬೇಡ ಎಂದರೂ ಬಿಡಿದೇ ಕತ್ತಿ ಹಿಡಿದು ನಿಂತ. ಆತನ ಸ್ನೇಹಿತ ಸುರೇಶ್ ಬಲಿದಾನಕ್ಕೆ ಅನುವು ಮಾಡಿಕೊಡಲು ಆಡಿನ ತಲೆಯನ್ನು ಎಳೆದು ಹಿಡಿದುಕೊಂಡಿದ್ದ. ಈ ವೇಳೆ ಮತ್ತಿನಲ್ಲಿದ್ದ ಚಲಪತಿ, ಕುರಿಯ ಕತ್ತಿಗೆ ಹಾಕಬೇಕಿದ್ದ ಏಟನ್ನು ಸುರೇಶನ ತಲೆಗೆ ಹಾಕಿದ,” ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಚಲಪತಿಯನ್ನು ಬಂಧಿಸಿ, ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ಸುರೇಶ್‌ಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಪೊಲೀಸರು ಇದು ಆಕಸ್ಮಿಕವಾಗಿ ನಡೆದ ಘಟನೆಯೋ ಅಥವಾ ಉದ್ದೇಶಪೂರ್ವಕ ಕೃತ್ಯವೋ ಎಂಬ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ.
Read more
[wpas_products keywords=”deal of the day sale today offer all”]