Karnataka news paper

ವೀಕೆಂಡ್ ಕರ್ಫ್ಯೂ ತೆರವು ಬೇಡಿಕೆ; ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ; ಸುಧಾಕರ್


ಹೈಲೈಟ್ಸ್‌:

  • ವೀಕೆಂಡ್ ಕರ್ಫ್ಯೂ ತೆರವು ಬೇಡಿಕೆ ವಿಚಾರ
  • ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ
  • ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳಿಕೆ

ಬೆಂಗಳೂರು: ವೀಕೆಂಡ್ ಕರ್ಫ್ಯೂ ತೆರವು ಬೇಡಿಕೆ ವಿಚಾರವಾಗಿ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ಸಿಎಂ ಬಸವರಾಜ ಬೊಮ್ಮಾಯಿ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಆರೋಗ್ಯ ಸಚಿವ ಡಾ.‌ಕೆ ಸುಧಾಕರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು,ವೀಕೆಂಡ್ ಕರ್ಫ್ಯೂ ಕುರಿತಾಗಿ ಎಲ್ಲರ ಅಭಿಪ್ರಾಯ ಸಂಗ್ರಹ ಮಾಡುತ್ತೇವೆ. ಸಿಎಂ ಸಭೆಯಲ್ಲಿ ಚರ್ಚೆ ಮಾಡಿ, ಸಾಧಕ ಬಾಧಕ ಗಮನಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.

ಕೋವಿಡ್ ನಿಯಮ ಜನಸಾಮಾನ್ಯರಿಗಷ್ಟೇ ಸೀಮಿತವೇ? ಜನಪ್ರತಿನಿಧಿಗಳು ಉಲ್ಲಂಘಿಸಿದರೆ ಕ್ರಮ ಯಾಕಿಲ್ಲ

ಜನಪರವಾದ ಸರ್ಕಾರ ಜನಪರ ವಾದ ನಿರ್ಧಾರ ಕೈಗೊಳ್ಳುತ್ತದೆ. ಆದರೆ ಜನರ ಪ್ರಾಣಕ್ಕೆ ಕುಂದು ಬರಬಾರದು‌‌. ಜನರ ಜನಜೀವನಪ ಸುಗಮವಾಗಿ ಸಾಗಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ನಿರ್ಧಾರ ಕೈಗೊಳ್ಳಲಾಗುವುದು. ಎಲ್ಲ ವಿಚಾರ ಗಮನಿಸಿ ಸಿಎಂ ನಿರ್ಧರಿಸುತ್ತಾರೆ ಎಂದರು.

ಇನ್ನು ಇದೇ ಸಂದರ್ಭದಲ್ಲಿ ಕೋವಿಡ್ ಕುರಿತಾಗಿ ವೈದ್ಯರ ಹೇಳಿಕೆಗಳಿಗೆ ನಿರ್ಬಂಧ ಹೇರಿರುವ ಕುರಿತಾಗಿ ಪ್ರತಿಕ್ರಿಯೆ ನೀಡಿ, ವೈದ್ಯರಿಂದ ಇಂತಹ ಹೇಳಿಕೆಗಳನ್ನು ನಿರೀಕ್ಷೆ ಮಾಡಿರಲಿಲ್ಲ. ಪ್ರೊಅಕ್ಟೀವಿಸಂ ಭರದಲ್ಲಿ ಏನೋ ಹೇಳ್ತಾರೆ ಅದು ಆಗಬಾರದು.

ಬೆಂಗಳೂರಿನಲ್ಲಿ ಕೋವಿಡ್ ಬಗ್ಗೆ 14 ರಿಂದ ಹದಿನೈದು ಜನ ವೈದ್ಯರು ಮಾತ್ರ ಕೊಡುವುದು ಅಧಿಕೃತವಾದ ಹೇಳಿಕೆಯಾಗಿದೆ. ಬೇರೆಯವರಿಗೆ ಗೊತ್ತಿಲ್ಲ ಎಂದಲ್ಲ.ಸಾಂಕ್ರಾಮಿಕ ರೋಗದ ಪರಿಸ್ಥಿತಿಯಲ್ಲಿ ಯಾರೂ ಗೊಂದಲಕ್ಕೆ ಒಳಗಾಗಬಾರದು ಇಂತಹ ಒಂದು ಹೇಳಿಕೆಯಿಂದ ಜನಸಾಮಾನ್ಯರಿಗೆ ತೊಂದರೆ ಆಗಬಾರದು. ಈ ಕಾರಣಕ್ಕಾಗಿ ಡಾಕ್ಟರ್ ಪ್ಯಾನೆಲ್ ಮಾಡಿದ್ದೇವೆ ಎಂದರು.

ಸರ್ಕಾರದ ಆದೇಶವನ್ನು ಮೀರಿದರೆ ಕಾನೂನಾತ್ಮಕ ಕ್ರಮ ಆಗುತ್ತದೆ. ಅವರ ಅಭಿಪ್ರಾಯದ ಬಗ್ಗೆ ಗೌರವ ಇದೆ. ಆದರೆ ಅದನ್ನು ಇವಾಗ ಮುಕ್ತವಾಗಿ ಹಂಚಿಕೊಳ್ಳುವುದು ಬೇಡ ಎಂದರು‌. ಕೋವಿಡ್ ನಿಯಂತ್ರಣ ಮಾಡುವ ನಿಟ್ಟಿನಲ್ಲಿಲಸಿಕೆ ಕೆಲಸ ಮಾಡಿದೆ. ಅದೊಂದೇ ಉಪಾಯ ನಮಗೆ. ಮೂರನೇ ಡೋಸ್ ಅಗತ್ಯವಿದ್ದವರು ಕೂಡಾ ಹಾಕಿಸಿಕೊಳ್ಳಿ. 60 ವರ್ಷ ಮೇಲ್ಪಟ್ಟವರು ಕೂಡಾ ಹಾಕಿಸಿಕೊಳ್ಳಬೇಕು.

ಲಸಿಕೆ ಪಡೆಯದ ಜನರು ಮಕ್ಕಳು. ಹೀಗಾಗಿ ಅವರಲ್ಲಿ ಕೋವಿಡ್ ಕಂಡುಬರುತ್ತದೆ. ಆದರೆ ಮಕ್ಕಳಿಗೆ ಬಂದರೂ ಅವರಲ್ಲಿ ತೀವ್ರತೆ ಕಂಡುಬಂದಿಲ್ಲ. ಸ್ವಾಭಾವಿಕವಾಗಿ ಅವರಲ್ಲಿ ರೋಗ ನಿರೋಧಕ ಶಕ್ತಿ ಇದೆ ಎಂಬುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ತಿಳಿಸಿದರು.



Read more

[wpas_products keywords=”deal of the day sale today offer all”]