Karnataka news paper

ಕೊರೊನಾ ಸಾವಿನ ಪ್ರಕರಣಗಳ ಆಡಿಟ್‌ ಮಾಡುತ್ತೇವೆ ಎಂದ ಸಚಿವ ಕೆ. ಸುಧಾಕರ್‌​


ಹೈಲೈಟ್ಸ್‌:

  • ಸಾವಿನ ಪ್ರಕರಣಗಳ ಆಡಿಟ್‌ ಮಾಡುತ್ತೇವೆ ಎಂದ ಸಚಿವ ಕೆ. ಸುಧಾಕರ್‌
  • ಸೋಂಕಿತರಿಗೆ ಚಿಕಿತ್ಸೆ ನೀಡುವೆ ಬಗ್ಗೆಯೂ ಪರಿಶೀಲನೆ ಎಂದ ಸಚಿವ
  • ಲಸಿಕಾ ಅಭಿಯಾನಕ್ಕೆ ಚುರುಕು ಎಂದ ಸಚಿವ ಸುಧಾಕರ್

ಬೆಂಗಳೂರು : ರಾಜ್ಯದಲ್ಲಿ ಮೊದಲ ಹಾಗೂ ಎರಡನೇ ಕೋವಿಡ್‌ ಅಲೆಗೆ ಹೋಲಿಸಿದರೆ ಸಾವಿನ ಸರಾಸರಿ ಪ್ರಮಾಣ ಕಡಿಮೆ ಇದೆ. ಸಾವಿನ ಪ್ರಮಾಣ ಕನಿಷ್ಠ ಶೇ.0.04 ರಷ್ಟಿದೆ. ಆದರೂ ಸಾವಿನ ತಡೆಗೆ ಸರಕಾರ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಿದೆ. ಪ್ರತಿ ಜೀವವೂ ಮುಖ್ಯ, ಹೀಗಾಗಿ, ಸೋಂಕಿತರಿಗೆ ಯಾವ ರೀತಿಯಲ್ಲಿ ಚಿಕಿತ್ಸೆ ನೀಡಬೇಕು ಎಂಬುದರ ಬಗ್ಗೆ ಪರಿಶೀಲಿಸುವುದರ ಜತೆಗೆ, ಸಾವಿನ ಪ್ರಕರಣಗಳ ಆಡಿಟ್‌ ಮಾಡುತ್ತೇವೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡೆತ್‌ ಆಡಿಟ್‌ ನಡೆಸುವುದರಿಂದ ಯಾರಿಗೆ ಇತರ ಆರೋಗ್ಯ ಸಮಸ್ಯೆಗಳು ಇತ್ತು? ಕೊರೊನಾದಿಂದಲೇ ಸತ್ತಿದ್ದಾರಾ? ಇತರ ಆರೋಗ್ಯ ಸಮಸ್ಯೆಗಳು ಕಾರಣ ಆದ್ವಾ? ಇದೆಲ್ಲವನ್ನೂ ತಿಳಿದುಕೊಳ್ಳಲು ಸಹಾಯವಾಗುತ್ತದೆ. ಈ ಹಿಂದೆಯೂ ಆರೋಗ್ಯ ಇಲಾಖೆ ಡೆತ್‌ ಆಡಿಟ್‌ ನಡೆಸಿತ್ತು. ಆಗ ಆರೋಗ್ಯ ಸಮಸ್ಯೆ ಇರುವ ಹೆಚ್ಚಿನ ಸೋಂಕಿತರು ಸಾವನ್ನಪ್ಪಿರುವುದು ಬೆಳಕಿಗೆ ಬಂದಿತ್ತು. ಡಯಾಬಿಟೀಸ್‌ ಹಾಗೂ ರಕ್ತದೊತ್ತಡ ಇರುವವರು ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿರುವುದು ಡೆತ್‌ ಆಡಿಟ್‌ನಲ್ಲಿ ತಿಳಿದು ಬಂದಿತ್ತು, ಎಂದರು.

ಲಸಿಕಾ ಅಭಿಯಾನಕ್ಕೆ ಚುರುಕು:
ಸದ್ಯ ಲಸಿಕಾ ಅಭಿಯಾನದಿಂದಾಗಿ ಕೋವಿಡ್‌ ಸೋಂಕಿನಿಂದ ತಪ್ಪಿಸಿಕೊಳ್ಳಲು ಆಗದೇ ಇದ್ದರೂ ತೀವ್ರತರ ರೋಗದಿಂದ, ಸಾವು ಸಂಭವಿಸುವುದನ್ನು ತಡೆಯಬಹುದಾಗಿದೆ. ಹೀಗಾಗಿ, ವೇಗವಾಗಿ ಲಸಿಕಾಭಿಯಾನ ನಡೆಯಬೇಕಿದೆ. ಹಲವು ಜಿಲ್ಲೆಗಳಲ್ಲಿ ಲಸಿಕಾಭಿಯಾನ ಮಂದಗತಿಯಲ್ಲಿ ನಡೆಯುತ್ತಿದೆ, ಎಂದು ಸುಧಾಕರ್‌ ಹೇಳಿದರು.

ಕರ್ನಾಟಕದಲ್ಲಿ ಪ್ರತಿ ದಿನ 80 ಸಾವಿರದಿಂದ 1.2 ಲಕ್ಷ ಜನರಿಗೆ ಕೋವಿಡ್‌ ಸೋಂಕು ಸಂಭವ..!



Read more

[wpas_products keywords=”deal of the day sale today offer all”]