Source : Online Desk
ಹಾಂಗ್ ಕಾಂಗ್: ಹಾಂಗ್ ಕಾಂಗ್ ನ ಪ್ರಭಾವಿ ಪತ್ರಿಕೋದ್ಯಮಿ, ಚೀನಾ ವಿರೋಧಿ ಸಾಮಾಜಿಕ ಹೋರಾಟಗಾರ ಜಿಮ್ಮಿ ಲಾಯ್ ಅವರಿಗೆ ನ್ಯಾಯಾಲಯ 13 ತಿಂಗಳ ಜೈಲು ಶಿಕ್ಷೆ ಪ್ರಕಟಿಸಿದೆ.
ಇದನ್ನೂ ಓದಿ: ಭಾರತದ ಕಾರ್ಯತಂತ್ರ ಗುರಿಗಳ ಈಡೇರಿಕೆಗೆ ದೀರ್ಘಾವಧಿಯಲ್ಲಿ ಚೀನಾ ಸವಾಲು: ಐಎಎಫ್ ಮುಖ್ಯಸ್ಥ
ಜಿಮ್ಮಿ ಲಾಯ್ ಅವರು ಪ್ರಜಾಪ್ರಭುತ್ವ ಪರ ದನಿಯೆತ್ತಿದ್ದರು. ಅಲ್ಲದೆ ಆ ನಿಟ್ಟಿನಲ್ಲಿ ಹಲವು ಹೋರಾಟಗಳಲ್ಲಿ ಭಾಗಿಯಾಗಿ ಚೀನಾದ ಕೆಂಗಣ್ಣಿಗೆ ಗುರಿಯಾಗಿದ್ದರು.
ಇದನ್ನೂ ಓದಿ: ಭಾರತದ ಪ್ರತಿಭಟನೆಗೆ ಮಣಿದ ಚೀನಾ: ಶ್ರೀಲಂಕಾ ದ್ವೀಪಗಳಲ್ಲಿನ ಯೋಜನೆಗಳನ್ನು ಸ್ಥಗಿತಗೊಳಿಸಿದ ಡ್ಯ್ರಾಗನ್ ರಾಷ್ಟ್ರ
ಹಾಂಗ್ ಕಾಂಗನ್ನು ಚೀನಾದ ಬಿಗಿಮುಷ್ಟಿಯಿಂದ ಬಿಡಿಸಿ, ಪ್ರಜಾಪ್ರಭುತ್ವ ಸ್ಥಾಪನೆಯಾಗಬೇಕೆಂದು ಅವರು ಆಗ್ರಹಿಸಿದ್ದರು. ಜಿಮ್ಮಿ ಲಾಯ್ ಅವರನ್ನು ದೇಶ ದ್ರೋಹದ ಆರೋಪದಡಿ ಬಂಧಿಸಲಾಗಿತ್ತು.
ಇದನ್ನೂ ಓದಿ: ಬೆಂಕಿ ಜೊತೆ ಸರಸ ಬೇಡ ಎಂದಿದ್ದ ಚೀನಾಗೆ ಜೋ ಬೈಡನ್ ಭರ್ಜರಿ ಟಕ್ಕರ್; ತೈವಾನ್ ಗೆ ಅಧಿಕೃತ ಆಹ್ವಾನ
ಈ ಹಿಂದೆ ಜಿಮ್ಮಿ ನಡೆಸುತ್ತಿದ್ದ ಆಪಲ್ ಡೈಲಿ ಪತ್ರಿಕೆಯನ್ನು ಚೀನಾ ಬೆಂಬಲಿತ ಹಾಂಗ್ ಕಾಂಗ್ ಸರ್ಕಾರ ಮುಚ್ಚಿಸಿತ್ತು. ಜಿಮ್ಮಿ ಲಾಯ್ ಪರ ಅಂತಾರಾಷ್ಟ್ರೀಯ ಸಮುದಾಯ ದನಿಯೆತ್ತಿವೆ.
ಇದನ್ನೂ ಓದಿ: ವಿಶ್ವದ ಶ್ರೀಮಂತ ರಾಷ್ಟ್ರ: ಅಮೆರಿಕಾವನ್ನು ಹಿಂದಿಕ್ಕಿದ ಚೀನಾ ಬಳಿ ಇರುವ ಸಂಪತ್ತು ಎಷ್ಟು ಗೊತ್ತೇ?