Karnataka news paper

ಮೋದಿ ಭದ್ರತೆಯಲ್ಲಿ ಲೋಪ ವಿಚಾರ: ಸುಪ್ರೀಂ ಕೋರ್ಟ್ ವಕೀಲರಿಗೆ ಸಿಖ್ ಸಂಘಟನೆಯಿಂದ ಬೆದರಿಕೆ ಕರೆ


PTI

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚಿಗೆ ಪಂಜಾಬ್ ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಭದ್ರತೆ ಲೋಪಕ್ಕೆ ಸಂಬಂಧಿಸಿದಂತೆ ಸಿಖ್ಕರ ನ್ಯಾಯಕ್ಕಾಗಿ ಹೋರಾಡುತ್ತಿರುವ ಸಂಘಟನೆಯಿಂದ  (ಎಸ್ ಎಫ್ ಜೆ)  ವಿವಿಧ ಅಂತಾರಾಷ್ಟ್ರೀಯ ನಂಬರ್ ನಿಂದ ಅನೇಕ ಸುಪ್ರೀಂಕೋರ್ಟ್ ವಕೀಲರು ಸೋಮವಾರ ಮತ್ತೆ ಬೆದರಿಕೆ ಕರೆ ಸ್ವೀಕರಿಸಿರುವುದಾಗಿ ಆರೋಪಿಸಲಾಗಿದೆ.

ಇದೇ ವಿಚಾರವಾಗಿ ಸುಪ್ರೀಂಕೋರ್ಟ್ ವಕೀಲ ವಿಷ್ಣು ಶಂಕರ್ ಜೈನ್ ಕಳೆದ ವಾರ ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇಂದು ಮತ್ತೆ ಬೆದರಿಕೆ ಕರೆ ಸ್ವೀಕರಿಸಿದ್ದಾರೆ. ಅವರ ವಿರುದ್ಧ ದೂರು ದಾಖಲಿಸಲು ನ್ಯಾಯಕ್ಕಾಗಿ ಸಿಖ್ ಗುಂಪಿನಿಂದ ಬೆದರಿಕೆ ಕರೆ ಸ್ವೀಕರಿಸಿರುವುದಾಗಿ ಜೈನ್ ತಿಳಿಸಿದ್ದಾರೆ. 

ಇದನ್ನೂ ಓದಿ: ಪ್ರಧಾನಿ ಮೋದಿ ಭದ್ರತಾ ಉಲ್ಲಂಘನೆ: ತನಿಖೆಗೆ ಪಂಚ ಸದಸ್ಯರ ಸಮಿತಿ ರಚಿಸಿದ ಸುಪ್ರೀಂ ಕೋರ್ಟ್

ನ್ಯಾಯಕ್ಕಾಗಿ ಸಿಖ್ ಗುಂಪಿನಿಂದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಿಗೆ ಬೆದರಿಕೆ ಮುಂದುವರೆದಿದೆ. ಪಂಜಾಬ್ ನಲ್ಲಿ ಭದ್ರತೆ ಉಲ್ಲಂಘನೆಗೆ ಸಂಬಂಧಿಸದಂತೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ನೇತೃತ್ವದ ಸಮಿತಿ ರಚನೆಗೆ ಸುಪ್ರೀಂಕೋರ್ಟ್ ಗೆ ಅವಕಾಶ ನೀಡುವುದಿಲ್ಲ ಎಂದು ಮೊದಲೇ ರೆಕಾರ್ಡ್ ಮಾಡಲಾದ ಕರೆಗಳಿಂದ ಬೆದರಿಕೆ ಹಾಕಲಾಗಿದೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ. 

ವಕೀಲ ವಿಷ್ಣು ಶಂಕರ್ ಜೈನ್, ವಕೀಲ ಅಪೂರ್ವ ಶುಕ್ಲಾ ಮತ್ತು ನಿಶಾಂತ್ ನಿಶಾಂತ್ ಕಟ್ನೇಶ್ವರ್ಕರ್ ಕೂಡಾ ಮೊದಲೇ  ರೆಕಾರ್ಡ್ ಮಾಡಲಾದ ಅಂತಾರಾಷ್ಟ್ರೀಯ ಕರೆಗಳಿಂದ ಬೆದರಿಕೆ ಹಾಕಿದ್ದಾಗಿ ನ್ಯಾಯಕ್ಕಾಗಿ ಸಿಖ್ ಸಂಘಟನೆ ವಿರುದ್ಧ ದೂರು ದಾಖಲಿಸಲಾಗಿದೆ.



Read more

[wpas_products keywords=”deal of the day”]