Karnataka news paper

ಶೀತ ಮಾರುತ ಅಲರ್ಟ್: ಮುಂದಿನ ಎರಡು ದಿನ ದೇಶದ ಏಳು ರಾಜ್ಯಗಳಲ್ಲಿ ಭರ್ಜರಿ ಶೀತಗಾಳಿ


Online Desk

ನವದೆಹಲಿ: ಮುಂದಿನ ಎರಡು ದಿನಗಳಲ್ಲಿ ವಾಯುವ್ಯ ಭಾರತದ ರಾಜ್ಯಗಳಲ್ಲಿ ಚಳಿಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.

ಇದನ್ನೂ ಓದಿ: ಆರೋಪ-ಪ್ರತ್ಯಾರೋಪದಿಂದ ಕೊರೋನಾ ನಿರ್ಮೂಲನೆ ಆಗಲ್ಲ: ದೆಹಲಿ ಸಿಎಂ ಕೇಜ್ರಿವಾಲ್

ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಚಳಿಗಾಳಿ ಉಂಟಾಗಲಿದೆ. ಎರಡು ದಿನಗಳ ನಂತರ ಶೀತಗಾಳಿ ತೀವ್ರತೆ ಕಡಿಮೆಯಾಗಬಹುದು ಎಂದು ಐಎಂಡಿ ಹೇಳಿದೆ.

ಇದನ್ನೂ ಓದಿ: ಪೋಪ್‌ ಅವರನ್ನು ಭಾರತಕ್ಕೆ ಆಹ್ವಾನಿಸಿರುವುದು ಪ್ರಶಂಸೆಗಾಗಿಯೋ? ಅಥವಾ ಕೀಳರಿಮೆಯಿಂದಲೋ?

ಏತನ್ಮಧ್ಯೆ, ಭಾನುವಾರ ಬೆಳಿಗ್ಗೆ 7 ಗಂಟೆಗೆ ದೆಹಲಿಯಲ್ಲಿ ಕನಿಷ್ಠ ತಾಪಮಾನ 8 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ದೆಹಲಿ ಮತ್ತು ಉತ್ತರ ಭಾರತದಲ್ಲಿ ಶೀತ ಹವಾಮಾನವು ಚಾಲ್ತಿಯಲ್ಲಿದ್ದು, ಭಾನುವಾರ ಬೆಳಿಗ್ಗೆ ದೆಹಲಿಯು ದಟ್ಟವಾದ ಮಂಜಿನಿಂದ ಆವರಿಸಲ್ಪಟ್ಟಿತ್ತು. 

ಇದನ್ನೂ ಓದಿ: ಗಣರಾಜ್ಯೋತ್ಸವ ಪರೇಡ್ ನಲ್ಲಿ 5 ರಫೇಲ್ ಸೇರಿ 75 ಯುದ್ಧ ವಿಮಾನಗಳಿಂದ ಶಕ್ತಿ ಪ್ರದರ್ಶನ



Read more

[wpas_products keywords=”deal of the day”]