Online Desk
ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೋನಾ ಆರ್ಭಟ ಹೆಚ್ಚಾಗಿರುವ ಹಿನ್ನೆಲೆ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯು ನಂತಹ ಕಠಿಣ ನಿಯಮಗಳನ್ನ ಜಾರಿ ಮಾಡಲಾಗಿದ್ದು, ಸರ್ಕಾರದ ಈ ನಿರ್ಧಾರಕ್ಕೆ ಸ್ವತಃ ಬಿಜೆಪಿ ಶಾಸಕರೇ ಆಗಿರುವ ಸಿ.ಟಿ ರವಿ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.
ಗೋವಾದ ಪಣಜಿಯಲ್ಲಿ ಮಾತನಾಡಿರುವ ಸಿ.ಟಿ ರವಿ ಅವರು, ರಾಜ್ಯದ ವೀಕೆಂಡ್ ಕರ್ಫ್ಯೂ, ಲಾಕ್‌ಡೌನ್‌ಗೆ ನನ್ನ ವಿರೋಧವಿದೆ. ಕರ್ನಾಟಕ ಅಷ್ಟೇ ಅಲ್ಲ ಮಹಾರಾಷ್ಟ್ರ, ದೆಹಲಿಯಲ್ಲಿ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿಯೂ ದಿನೇದಿನೇ ಸೋಂಕು ಹೆಚ್ಚಾಗುತ್ತಿದೆ. ಸುದೈವವಶಾತ್ ಮೂರನೇ ಅಲೆಯಲ್ಲಿ ಪ್ರಾಣಾಪಾಯ ಕಡಿಮೆ ಇದೆ. ಐಸಿಯು ವೆಂಟಿಲೇಟರ್ ಗೆ ಹೋಗುವವರ ಸಂಖ್ಯೆ ಕಡಿಮೆ ಇದೆ. 3ನೇ ಅಲೆ ಎಫೆಕ್ಟ್ ಕಡಿಮೆ ಇದೆ. ಕರ್ಫ್ಯೂ ಲಾಕ್ ಡೌನ್ ನಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಾಕ್ ಮಾಡಿ ಜನರನ್ನೇಕೆ ಕಷ್ಟಕ್ಕೆ ದೂಡಬೇಕು? ಕರ್ಫ್ಯೂ ಬದಲು ಕೆಲ ನಿಯಮಗಳನ್ನ ಜಾರಿ ಮಾಡಲಿ ಎಂದು ಸಲಹೆ ನೀಡಿದ್ದಾರೆ.
ನಿನ್ನೆಯಷ್ಟೆ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರು ಅಧಿಕಾರಿಗಳು, ತಜ್ಞರ ಜತೆ ತುರ್ತು ಸಭೆ ನಡೆಸಿ ಚರ್ಚೆ ನಡೆಸಿದ್ದು, ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಬಗ್ಗೆ ಶುಕ್ರವಾರ ನಿರ್ಧಾರ ಕೈಗೊಳ್ಳಲಿದ್ದಾರೆ.
Read more
[wpas_products keywords=”deal of the day”]