Karnataka news paper

ಬ್ಯಾಂಕ್ ರಾಬರಿ ಪ್ರಕರಣ: ಮದುವೆಗೆ ಸಿದ್ಧವಾಗಿದ್ದ ಆರೋಪಿ ಪೊಲೀಸರ ವಶಕ್ಕೆ


The New Indian Express

ಹುಬ್ಬಳ್ಳಿ: ಬ್ಯಾಂಕ್ ನಿಂದ 6.39 ಲಕ್ಷ ರೂ. ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದ 20 ನಿಮಿಷಗಳಲ್ಲಿ ಈ ಬಂಧನ ನಡೆದಿದೆ ಎನ್ನುವುದು ವಿಶೇಷ. 

ಇದನ್ನೂ ಓದಿ: ಹಾವೇರಿ: ಸಾಲ ನೀಡದ್ದಕ್ಕೆ ಬ್ಯಾಂಕ್’ಗೆ ಬೆಂಕಿ ಇಟ್ಟ ಭೂಪ!

ಮಂಕಿ ಕ್ಯಾಪ್ ಧರಿಸಿದ ಕಳ್ಳ ಕೊಪ್ಪಿಕರ್ ರಸ್ತೆಯಲ್ಲಿನ ಎಸ್ ಬಿ ಐ ಬ್ಯಾಂಕಿಗೆ ನುಗ್ಗಿದ್ದ. ಕೈಯ್ಯಲ್ಲಿ ಚಾಕು ಹಿಡಿದಿದ್ದ ಕಳ್ಳ ಕ್ಯಾಷಿಯರ್ ಗೆ ಬೆದರಿಕೆ ಒಡ್ಡಿ ಹಣ ಪಡೆದಿದ್ದ.

ಇದನ್ನೂ ಓದಿ: 2022 ಹಣಕಾಸು ವರ್ಷದ ಮೊದಲಾರ್ಧದಲ್ಲಿ 36,342 ಕೋಟಿ ರೂ. ಮೊತ್ತದ 4,071 ಬ್ಯಾಂಕ್ ವಂಚನೆ ಪ್ರಕರಣ: ಆರ್ ಬಿ ಐ

ಕಳ್ಳ ಪರಾರಿಯಾದ ನಂತರ ಸಾರ್ವಜನಿಕರು ಪೊಲಿಸರಿಗೆ ಸುದ್ದಿ ಮುಟ್ಟಿಸಿದ್ದರು. ಹುಬ್ಬಳ್ಳಿ ಟ್ರಾಫಿಕ್ ಪೊಲೀಸ್ ಕಾನ್ ಸ್ಟೇಬಲ್ ಉಮೇಶ್ ಬಂಗಾರಿ ಮತ್ತು ಪೊಲೀಸ್ ಪೇದೆ ಮಂಜುನಾಥ್ ಹಲವರ್ ಅವರು ಕಳ್ಳನ ಬೆನ್ನಟ್ಟಿ ಹಿಡಿದಿದ್ದಾರೆ. ಕಳ್ಳನ ಹಿಡಿದ ಪೊಲೀಸ್ ಪೇದೆಗಳಿಗೆ ಡಿಜಿ ಪ್ರವೀಣ್ ಸೂದ್ ಅವರು 25,000 ರೂ. ಬಹುಮಾನ ಘೋಷಿಸಲಾಗಿದೆ.

ಇದನ್ನೂ ಓದಿ: ಮುಸ್ಲಿಮರ ಹತ್ಯಾಕಾಂಡಕ್ಕೆ ಕರೆ ನೀಡಿದ್ದ ಫೆಡರಲ್ ಬ್ಯಾಂಕ್ ಅಧಿಕಾರಿ ವಿರುದ್ಧ ಕೇಸ್ ದಾಖಲು

ಆರೋಪಿ ಪ್ರವೀಣ್ ಕುಮಾರ್ ಪಾಟೀಲ್ ಎಂದು ತಿಳಿದುಬಂದಿದೆ. ಆರೋಪಿ ವಿಜಯಪುರ ಮೂಲದವನಾಗಿದ್ದು, ಮೈಸೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಇನ್ನು ಎರಡು ದಿನಗಳಲ್ಲಿ ಆತನಿಗೆ ಮದುವೆ ನಡೆಯುವುದರಲ್ಲಿತ್ತು. ಅದಕ್ಕೆ ಮುಂಚೆಯೇ ಬ್ಯಾಂಕ್ ರಾಬರಿ ಕೆಲಸಕ್ಕೆ ಕೈ ಹಾಕಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ.

ಇದನ್ನೂ ಓದಿ: ಲಾಂಗ್ ತೋರಿಸಿ ಹಣ ವಸೂಲಿ: ಖಾಕಿ ಖೆಡ್ಡಾಗೆ ಬಿದ್ದ ಬರ್ನಲ್ ಸಿದ್ದಿಕಿ; ಬಂಧನ ವೇಳೆ ಹೈ ಡ್ರಾಮಾ, ಬ್ಲೇಡ್ ನುಂಗಿದ್ದೇನೆ ಎಂದ ಆರೋಪಿ!



Read more

[wpas_products keywords=”deal of the day”]