
ಲಂಡನ್: ಲಂಡನ್‌ನ ಪ್ರಮುಖ ಸ್ಥಳದಲ್ಲಿರುವ ತಮ್ಮ ಐಷಾರಾಮಿ ನಿವಾಸಕ್ಕೆ ಸಂಬಂಧಿಸಿದಂತೆ ಕಾನೂನು ಸಮರದಲ್ಲಿ ಉದ್ಯಮಿ ವಿಜಯ್ ಮಲ್ಯ ಪರಾಭವಗೊಂಡಿದ್ದಾರೆ. ಸ್ವಿಸ್ ಬ್ಯಾಂಕ್ ಯುಬಿಎಸ್ ವಿವಾದಕ್ಕೆ ಸಂಬಂಧಿಸಿದಂತೆ ಈ ಮನೆಯಲ್ಲಿ ವಾಸವಿರಲು ಅವಕಾಶವನ್ನು ಬ್ರಿಟನ್‌ನ ಕೋರ್ಟ್ ನಿರಾಕರಿಸಿದೆ.
ಪ್ರಸ್ತುತ ಮನೆಯಲ್ಲಿ ಮಲ್ಯ ಅವರ ತಾಯಿ, 95 ವರ್ಷದ ಲಲಿತಾ ಅವರು ವಾಸವಿದ್ದಾರೆ. ಲಂಡನ್‌ನಲ್ಲಿ 18/19 ಕಾರ್ನ್‌ವಾಲ್ ಟೆರೆಸ್ ಐಷರಾಮಿ ವಸತಿ ಸಮುಚ್ಚಯವು, ದುಬಾರಿಯಾಗಿದ್ದು, ನೂರಾರು ಮಿಲಿಯನ್ ಪೌಂಡ್‌ಗಳ ಮೌಲ್ಯದ್ದಾಗಿದೆ ಎಂದೂ ಕೋರ್ಟ್ ಅಭಿಪ್ರಾಯಪಟ್ಟಿದೆ.
ವರ್ಚುವಲ್ ಸ್ವರೂಪದಲ್ಲಿ ವಿಚಾರಣೆ ನಡೆಸಿ ತೀರ್ಪು ನೀಡಿದ ಹೈಕೋರ್ಟ್ ಚಾನ್ಸೆರಿ ವಿಭಾಗದ, ಡೆಪ್ಯೂಟಿ ಮಾಸ್ಟರ್ ಮ್ಯಾಥ್ಯೂ ಮಾರ್ಷ್ ಅವರು, ಯುಬಿಎಸ್ ಬ್ಯಾಂಕ್‌ಗೆ ನೀಡಬೇಕಾದ 20.4 ಮಿಲಿಯನ್ ಸಾಲ ಮರುಪಾವತಿಗೆ ಮಲ್ಯ ಮತ್ತು ಕುಟುಂಬ ಸದಸ್ಯರಿಗೆ ಇನ್ನಷ್ಟು ಕಾಲಾವಕಾಶ ನೀಡಲು ಯಾವುದೇ ಸಮರ್ಥನೆಯಿಲ್ಲ ಎಂದು ಹೇಳಿದರು.
Read more from source
[wpas_products keywords=”deals of the day offer today electronic”]