
ಹೌದು, ಗೂಗಲ್ ಕ್ರೋಮ್ ಬಳಸುವವರು ಎಚ್ಚರಿಕೆಯನ್ನು ವಹಿಸಬೇಕೆಂದು ಕೇಂದ್ರ ಸರ್ಕಾರ ಹೇಳಿದೆ. ಗೂಗಲ್ ಕ್ರೋಮ್ ಬ್ರೌಸರ್‌ನಲ್ಲಿ ಹಲವಾರು ದೋಷಗಳು ಕಂಡುಬಂದಿದ್ದು ಇದರಿಂದ ಹ್ಯಾಕರ್‌ಗಳು (Hacker) ನಿಮ್ಮ ಪಿಸಿ ಒಳಗಡೆ ಪ್ರವೇಶ ಪಡೆಯುವ ಸಾಧ್ಯತೆ ಇದೆ ಎಂದಿದೆ. ಅಲ್ಲದೆ ಗೂಗಲ್ ಕ್ರೋಮ್‌ನ ಹೊಸ ಅಪ್ಡೇಟ್ ಅನ್ನು ಬಳಸಬೇಕೆಂದು ಸೂಚಿಸಿದೆ. ಹಾಗಾದ್ರೆ ಗೂಗಲ್ ಕ್ರೋಮ್ ಬಳಸುವವರಿಗೆ ಸರ್ಕಾರ ನೀಡಿದ ಎಚ್ಚರಿಕೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗೂಗಲ್ ಕ್ರೋಮ್ ಸಿಸ್ಟಂನಲ್ಲಿ ಅನಿಯಂತ್ರಿತ ಕೋಡ್ ಅನ್ನು ಕಾರ್ಯಗತಗೊಳಿಸಲು ಹ್ಯಾಕರ್‌ಗಳು ಬಳಸಿಕೊಳ್ಳಬಹುದಾದ ಹಲವಾರು ದೋಷಗಳು ಪತ್ತೆಯಾಗಿದೆ. ಇದರಿಂದ ಹ್ಯಾಕರ್‌ಗಳು ವೈಯಕ್ತಿಕ ವಿವರಗಳಿಗೆ ಪ್ರವೇಶವನ್ನು ಪಡೆಯಬಹುದು. ಅಲ್ಲದೆ ಉದ್ದೇಶಿತ ಪಿಸಿಯಲ್ಲಿ ಸ್ನೂಪ್ ಮಾಡಲು ಮಾಲ್‌ವೇರ್ ಅನ್ನು ಸೇರಿಸಬಹುದು ಎಂದು ಹೇಳಲಾಗಿದೆ. ಈ ದೋಷವನ್ನು ಸರಿಪಡಿಸಲು ಗೂಗಲ್ ಕೂಡ ತ್ವರಿತವಾಗಿ ಕಾರ್ಯನಿರ್ವಹಿಸುತ್ತಿದೆ. ಇದಕ್ಕಾಗಿ ಹೊಸ ಅಪ್ಡೇಟ್ ಅನ್ನು ಸಹ ಬಿಡುಗಡೆ ಮಾಡಿದೆ. ಇದರಿಂದ ಹೊಸ ಸಾಫ್ಟ್‌ವೇರ್ ಅಪ್ಡೇಟ್ ಅನ್ನು ಅಪ್ಡೇಟ್ ಮಾಡಿಕೊಳ್ಳಬೇಕು ಎಂದು ಸರ್ಕಾರ ಹೇಳಿದೆ.

ಇನ್ನು ಗೂಗಲ್ ಕ್ರೋಮ್ ನ ಹೊಸ ಅಪ್ಡೇಟ್ 22 ಭದ್ರತಾ ಪರಿಹಾರಗಳನ್ನು ಒಳಗೊಂಡಿದೆ ಎಂದು ಟೆಕ್ ದೈತ್ಯ ಹೇಳಿದೆ. CERT-In ಪ್ರಕಾರ ಗೂಗಲ್ ಕ್ರೋಮ್‌ನಲ್ಲಿ ಹಲವು ದೋಷಗಳು ಅಸ್ತಿತ್ವದಲ್ಲಿವೆ. ಇದರಲ್ಲಿ ವೆಬ್ ಅಪ್ಲಿಕೇಶನ್‌ಗಳು, UI, ವಿಂಡೋ ಮ್ಯಾನೇಜರ್, ಸ್ಕ್ರೀನ್ ಕ್ಯಾಪ್ಚರ್, ಫೈಲ್ API, ಆಟೋ ಫಿಲ್ ಮತ್ತು ಡೆವಲಪರ್ ಟೂಲ್ಸ್‌ನಲ್ಲಿ ದೋಷ ಕಂಡುಬಂದಿದೆ. ಹಾಗೇ ನೋಡಿದ್ರೆ ಗೂಗಲ್ ಕ್ರೋಮ್‌ನಲ್ಲಿ ದೋಷಪತ್ತೆಯಾಗಿರುವುದು ಇದೇ ಮೊದಲೇನಲ್ಲ.

ಗೂಗಲ್ ಕ್ರೋಮ್‌ನಲ್ಲಿ ವಿಶೇಷವಾಗಿ ರಚಿಸಲಾದ ವೆಬ್ ಪೇಜ್‌ಗೆ ಭೇಟಿ ನೀಡಲು ಹ್ಯಾಕರ್‌ಗಳು ಸಾಕಷ್ಟು ಅಕರ್ಷಕ ಮಾದರಿಯನ್ನು ಅನುಸರಿಸುತ್ತಿದ್ದಾರೆ. ಈ ದುರ್ಬಲತೆಗಳ ಯಶಸ್ವಿ ಶೋಷಣೆಯು ರಿಮೋಟ್ ಆಕ್ರಮಣಕಾರರಿಗೆ ಉದ್ದೇಶಿತ ವ್ಯವಸ್ಥೆಯಲ್ಲಿ ಅನಿಯಂತ್ರಿತ ಕೋಡ್ ಅನ್ನು ಕಾರ್ಯಗತಗೊಳಿಸಲು ಅನುವು ಮಾಡಿಕೊಡುತ್ತದೆ, ಎಂದು CERT-In ಹೇಳಿದೆ. ಸದ್ಯ ಗೂಗಲ್ ಕ್ರೋಮ್‌ನ ಪ್ರೊಗ್ರಾಮ್ ಕಾರ್ಯಾಚರಣೆಯ ಸಮಯದಲ್ಲಿ ಡೈನಾಮಿಕ್ ಮೆಮೊರಿಯ ತಪ್ಪು ಬಳಕೆಯಿಂದ ಈ ಲೋಪದೋಷಗಳು ಕಂಡುಬಂದಿವೆ ಎಂದು ಗೂಗಲ್ ಹೇಳಿದೆ.

ಗೂಗಲ್ ಇದೇ ಕಾರಣಕ್ಕೆ ಹೊಸ ಅಪ್ಡೇಟ್ ಅನ್ನು ಪರಿಚಯಿಸಿದೆ. ಕ್ರೋಮ್ ತನ್ನ ವಿಂಡೋಸ್, ಮ್ಯಾಕ್ ಮತ್ತು ಲೈನಕ್ಸ್ ಬಳಕೆದಾರರಿಗೆ 96.0.4664.93 ಅಪ್ಡೇಟ್ ನೀಡಿದೆ. ಇನ್ನು ಗೂಗಲ್ ಕ್ರೋಮ್ ಬ್ರೌಸರ್‌ನ ಇತ್ತೀಚಿನ ಆವೃತ್ತಿಯನ್ನು ಡೌನ್‌ಲೋಡ್ ಮಾಡಲು, Chrome ಬಳಕೆದಾರರು ಪರದೆಯ ಮೇಲಿನ ಬಲ ಮೂಲೆಯಲ್ಲಿ ನವೀಕರಣ ಆಯ್ಕೆಯನ್ನು ಕಾಣಬಹುದು. ಮುಂದಿನ ಆವೃತ್ತಿಗೆ ಅಪ್‌ಗ್ರೇಡ್ ಮಾಡಲು ಅವರು “ಅಪ್‌ಡೇಟ್” ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗುತ್ತದೆ. ನಂತರ ಕೆಲವೇ ಸೆಕೆಂಡುಗಳಲ್ಲಿ ನಿಮ್ಮ ಗೂಗಲ್ ಕ್ರೋಮ್ ಅಪ್ಡೇಟ್ ಆಗಲಿದೆ.

ಇದಲ್ಲದೆ ನಿಮ್ಮ ಗೂಗಲ್ ಆಗಾಗ ಕೆಲವು ನಕಲಿ ವೆಬ್‌ಸೈಟ್‌ಗಳು ಕಾಣಿಸಿಕೊಳ್ಳುತ್ತಿರುತ್ತವೆ. ಇವುಗಳನ್ನ ಕ್ಲಿಕ್‌ಮಾಡಿದರೆ ಹ್ಯಾಕರ್‌ಗಳ ದಾಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಆದರಿಂದ ಗೂಗಲ್ ಕ್ರೋಮ್‌ನಲ್ಲಿ ವೆಬ್‌ಸೈಟ್‌ಗಳನ್ನು ಬ್ಲಾಕ್ ಮಾಡುವ ಅವಕಾಶವನ್ನು ಸಹ ನೀಡಲಾಗಿದೆ. ಇನ್ನು ನೀವು ಗೂಗಲ್ ಕ್ರೋಮ್‌ನಲ್ಲಿ ವೆಬ್‌ಸೈಟ್ ಬ್ಲಾಕ್ ಮಾಡಬೇಕಾದರೆ ಮೊದಲು ಬ್ಲಾಕ್‌ಸೈಟ್ extension ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ. ನಂತರ ನಿಮ್ಮ ಗೂಗಲ್ ಅಕೌಂಟ್‌ಗೆ ಸೈನ್ ಇನ್ ಮಾಡಿ ಮತ್ತು ಸ್ಕ್ರೀನ್ ಮೇಲ್ಭಾಗದಲ್ಲಿರುವ ನಿಮ್ಮ URL ಸರ್ಚ್ ಬಾರ್ ಅನ್ನು ಕ್ಲಿಕ್ ಮಾಡಬೇಕು. ನಂತರ ವೆಬ್‌ಸೈಟ್‌ಗಳನ್ನು ಬ್ಲಾಕ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕಾಗುತ್ತದೆ.

ಡೆಸ್ಕ್‌ಟಾಪ್‌ನಲ್ಲಿ ಗೂಗಲ್ ಕ್ರೋಮ್‌ನಲ್ಲಿ ವೆಬ್‌ಸೈಟ್‌ಗಳನ್ನು ಬ್ಲಾಕ್ ಮಾಡುವುದು ಹೇಗೆ?
ಹಂತ:1 ಗೂಗಲ್ “ಸೈಟ್ ವಿಸ್ತರಣೆಯನ್ನು ನಿರ್ಬಂಧಿಸಿ”.
ಹಂತ:2 “ಬ್ಲಾಕ್ ಸೈಟ್ – ವೆಬ್‌ಸೈಟ್ ಬ್ಲಾಕರ್ ಫ್ರಮ್ ಕ್ರೋಮ್ – ಗೂಗಲ್ ಕ್ರೋಮ್” ಲಿಂಕ್ ಅನ್ನು ಕ್ಲಿಕ್ ಮಾಡಿ, ಅದು ಮೊದಲ ಅಥವಾ ಎರಡನೆಯ ಹಿಟ್ ಆಗಿರಬಹುದು.
ಹಂತ:3 “ADD TO CHROME” ರಿಡಿಂಗ್ ಸ್ಕ್ರೀನ್ ಮೇಲ್ಭಾಗದಲ್ಲಿರುವ ಬ್ಲೂ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
ಹಂತ:4 ಪಾಪ್ಅಪ್ ಪೆಟ್ಟಿಗೆಯಲ್ಲಿ, “Add extension” ಒತ್ತಿರಿ.
ನಂತರ ಕಾಣಿಸುವ ವಿವರಗಳನ್ನು ಅನುಸರಿಸುವ ಮೂಲಕ ನಿಮ್ಮ ಗೂಗಲ್‌ಕ್ರೋಮ್‌ನಲ್ಲಿ ವೆಬ್‌ಸೈಟ್‌ಗಳನ್ನು ಬ್ಲಾಕ್ ಮಾಡಬಹುದು.