Karnataka news paper

ಮುಖ್ಯಮಂತ್ರಿಯ ಮನೆ ಭದ್ರತೆಗಿದ್ದ ಪೊಲೀಸರಿಂದಲೇ ಗಾಂಜಾ ಮಾರಾಟ!


ಬೆಂಗಳೂರು: ಮುಖ್ಯಮಂತ್ರಿಗಳ ಮನೆ ಭದ್ರತೆಗೆ ನಿಯೋಜನಗೊಂಡಿದ್ದ ಇಬ್ಬರು ಪೊಲೀಸ್‌ ಕಾನ್‌ಸ್ಟೇಬಲ್‌ ಗಾಂಜಾ ಮಾರಾಟ ಮಾಡುವಾಗ ಸಿಕ್ಕಿಬಿದ್ದಿದ್ದಾರೆ. ಈ ಪ್ರಕರಣದಲ್ಲಿಒಟ್ಟಾರೆ ಏಳು ಮಂದಿಯನ್ನು ಬಂಧಿಸಲಾಗಿದೆ.

ಸಿಎಂ ಅವರ ಬೆಂಗಳೂರು ಆರ್‌.ಟಿ. ನಗರ ನಿವಾಸದ ಭದ್ರತೆಗೆ ನಿಯೋಜನೆಗೊಂಡಿದ್ದ ಕೋರಮಂಗಲ ಠಾಣೆಯ ಶಿವಕುಮಾರ್‌ ಹಾಗೂ ಸಂತೋಷ್‌ ಸೇರಿ ಐವರು ಆರೋಪಿಗಳನ್ನು ಬಂಧಿಸಿದ್ದು, ಇವರಿಂದ 500 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಆರ್‌.ಟಿ.ನಗರ ಪೊಲೀಸರು ತಿಳಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೆ ಭದ್ರತೆಗೆ ನಿಯೋಜನೆಗೊಂಡ ಪೊಲೀಸರೇ ಯಾವುದೇ ಭಯವಿಲ್ಲದೆ ಡ್ರಗ್ಸ್‌ ಪೆಡ್ಲರ್‌ಗಳ ಜತೆ ಶಾಮೀಲಾಗಿ ಮಾದಕ ವಸ್ತು ಮಾರಾಟದಲ್ಲಿ ತೊಡಗಿರುವುದು ಚರ್ಚೆಗೆ ಕಾರಣವಾಗಿದೆ.

ಕರ್ನಾಟಕದಲ್ಲಿ ಮಂಗಳವಾರ 41,457 ಕೊರೊನಾ ಹೊಸ ಕೇಸ್..! ಬೆಂಗಳೂರಲ್ಲೇ 25 ಸಾವಿರ ಪ್ರಕರಣ..!

ಡ್ರಗ್‌ ಪೆಡ್ಲರ್ಸ್‌ ಜತೆ ನಂಟು

ಬಂಧಿತ ಇಬ್ಬರು ಕಾನ್‌ಸ್ಟೇಬಲ್‌ ಹಲವು ದಿನಗಳಿಂದಲೂ ಡೆಂಜೊ ಮೂಲಕ ಡ್ರಗ್‌ ಪೆಡ್ಲರ್‌ಗಳಿಂದ ಗಾಂಜಾ ತರಿಸಿಕೊಂಡು ಮಾರಾಟ ಮಾಡಿ ಹೆಚ್ಚಿನ ಹಣಗಳಿಸುತ್ತಿದ್ದರು. ಕಳೆದ ಎರಡು ದಿನಗಳ ಹಿಂದೆ ಗಾಂಜಾ ತರಿಸಿಕೊಳ್ಳುತ್ತಿದ್ದಾಗ ಈ ಇಬ್ಬರು, ಗಸ್ತಿನಲ್ಲಿದ್ದ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ವಿಚಾರಣೆಗೊಳಪಡಿಸಿದಾಗ ಇಬ್ಬರು ಸಿಎಂ ನಿವಾಸದ ಭದ್ರತೆಗಾಗಿ ನಿಯೋಜನೆಗೊಂಡಿರುವ ಪೊಲೀಸರು ಎಂದು ಗೊತ್ತಾಗಿದೆ. ಬಂಧಿತರಿಬ್ಬರನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಅಖಿಲ್‌ ರಾಜ್‌ ಹಾಗೂ ಅಮ್ಜದ್‌ ಖಾನ್‌ ಬಳಿ ಗಾಂಜಾ ಖರೀದಿಸುತ್ತಿದ್ದರು ಎಂಬುವುದು ಗೊತ್ತಾಗಿದೆ. ಈ ಸಂಬಂಧ ಇತರೆ ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಪ್ರಕರಣ ಪತ್ತೆ ಹೇಗೆ?

ಗಾಂಜಾ ಮಾರಾಟ ಹಾಗೂ ಸಾಗಾಟದ ಬಗ್ಗೆ ಕೆಲವು ಸ್ಥಳೀಯರು ಹೊಯ್ಸಳ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧರಿಸಿ ಹೊಯ್ಸಳ ವಾಹನ ಚಾಲಕ ಕುಮಾರ್‌ ಹಾಗೂ ಸಿಬ್ಬಂದಿ ಶಿವಪ್ಪ ಅನುಮಾನಸ್ಪದಾವಾಗಿ ಹೋಗುತ್ತಿದ್ದ ಆಟೊವೊಂದನ್ನು ತಡೆದಿದ್ದಾರೆ. ಇದರಲ್ಲಿದ್ದ 500 ಗ್ರಾಂ ಗಾಂಜಾ ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರ ಪೈಕಿ ಒಬ್ಬ ಡೆಲಿವರಿ ಸರ್ವೀಸ್‌ ಬಾಯ್‌ ಕೂಡ ಇದ್ದು, ಈತನೇ ಮನೆ ಮನೆಗೆ ಆಹಾರ ಪೂರೈಸುವಾಗ ಮಾದಕ ವಸ್ತು ಸೇವನೆ ಮಾಡುವವರ ಗುರುತಿಸಿ ಡ್ರಗ್‌ ಪೆಡ್ಲರ್‌ಗಳಿಗೆ ತಿಳಿಸುತ್ತಿದ್ದ.

ಮದ್ಯ, ಡ್ರಗ್ಸ್‌ ಖರೀದಿಗೆ ವರದಕ್ಷಿಣೆ ತರುವಂತೆ ಪತಿಯಿಂದ ಪತ್ನಿಗೆ ಬ್ಲ್ಯಾಕ್‌ಮೇಲ್‌..!

ಪೆಡ್ಲರ್‌ಗಳು ಈ ಡೆಲಿವರಿ ಬಾಯ್‌ ಮೂಲಕವೇ ಮಾದಕ ವಸ್ತು ರವಾನಿಸುತ್ತಿದ್ದರು. ಇದನ್ನು ಹೊಯ್ಸಳ ಚಾಲಕ ಕುಮಾರ್‌ ಮತ್ತು ಸಿಬ್ಬಂದಿ ಶಿವಪ್ಪ ಪತ್ತೆಹಚ್ಚಿ ಇಲಾಖೆಗೆ ಹೆಮ್ಮೆ ತಂದಿದ್ದಾರೆ. ಇವರ ಕಾರ್ಯಾಚರಣೆ ಮೆಚ್ಚಿ ಸೂಕ್ತ ಬಹುಮಾನ ನೀಡಲಾಗುವುದು. ಅಲ್ಲದೇ, ಈ ಪ್ರಕರಣದಲ್ಲಿಇನ್ನು ಯಾರಾರ‍ಯರು ಭಾಗಿಯಾಗಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಬಂಧಿಸಲಾಗುವುದು ಎಂದು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ತಿಳಿಸಿದರು.



Read more

[wpas_products keywords=”deal of the day sale today offer all”]