Karnataka news paper

ಬೆಂಗಳೂರು ನಗರದಲ್ಲಿ 700 ಮಂದಿ ಪೊಲೀಸರಲ್ಲಿ ಕೊರೋನಾ ಪಾಸಿಟಿವ್!


The New Indian Express

ಬೆಂಗಳೂರು: ಕೋವಿಡ್ -19 ಸಾಂಕ್ರಾಮಿಕ ರೋಗದ ಮೂರನೇ ಅಲೆಯು ನಗರ ಪೊಲೀಸರನ್ನು ತೀವ್ರವಾಗಿ ಕಾಡುತ್ತಿದ್ದು, ನಗರದಲ್ಲಿ 700ಕ್ಕೂ ಹೆಚ್ಚು ಪೊಲೀಸರಲ್ಲಿ ಕೊರೋನಾ ಪಾಸಿಟಿವ್ ಬಂದಿದೆ ಎಂದು ತಿಳಿದುಬಂದಿದೆ. 

ಸಿಬ್ಬಂದಿಗಳಲ್ಲಿ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸ್ ಇಲಾಖೆಯು ಅಧಿಕಾರಿಗಳಿಗೆ ಸೂಚಿನೆ ನೀಡಿದೆ. 

ಭಾನುವಾರದವರೆಗೆ ನಗರದಲ್ಲಿ 731 ಪೊಲೀಸರು ಸೋಂಕಿಗೊಳಗಾಗಿದ್ದು, 731 ಮಂದಿ ಸೋಂಕಿತರ ಪೈಕಿ 38 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನೂ 693 ಸಕ್ರಿಯ ಪ್ರಕರಣಗಳು ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಇಂದು ಕೊರೋನಾದಿಂದ 14 ಸಾವು, ಬೆಂಗಳೂರಿನಲ್ಲಿ 15,947 ಸೇರಿ 27,156 ಮಂದಿಗೆ ಪಾಸಿಟಿವ್

ಕೇಂದ್ರ ಅಪರಾಧ ವಿಭಾಗ ಸೇರಿದಂತೆ ಎಲ್ಲಾ ವಿಭಾಗಗಳು ಮತ್ತು ಘಟಕಗಳಲ್ಲಿ ಸೋಂಕು ಪ್ರಕರಣಗಳು ವರದಿಯಾಗಿವೆ. ಪಶ್ಚಿಮ ವಿಭಾಗದಲ್ಲಿಯೇ ಅತೀ ಹೆಚ್ಚು ಪೊಲೀಸ್ (180 ಕ್ಕೂ ಹೆಚ್ಚು) ಸಿಬ್ಬಂದಿ ಸೋಂಕಿಗೊಳಗಾಗಿದ್ದಾರೆ. 

ಪೊಲೀಸ್ ಪಡೆಯಲ್ಲಿ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಹಠಾತ್ ಹೆಚ್ಚಳವಾಗಿರುವುದು ಕಳವಳಕ್ಕೆ ಕಾರಣವಾಗಿದ್ದು, ಈ ಪರಿಸ್ಥಿತಿಯು ಇದೀಗ ಹಿರಿಯ ಅಧಿಕಾರಿಗಳು ಸಿಬ್ಬಂದಿಯ ಆರೋಗ್ಯಕ್ಕೆ ಆದ್ಯತೆ ನೀಡಲು ಒತ್ತಾಯಿಸುತ್ತಿದೆ. 

ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತೀನಿತ್ಯ ಪೊಲೀಸ್ ಠಾಣೆಗಳು ಮತ್ತು ಪೊಲೀಸ್ ವಾಹನಗಳ ನೈರ್ಮಲ್ಯೀಕರಣ, ಪೊಲೀಸ್ ಸಿಬ್ಬಂದಿ ಮಾಸ್ಕ್ ಧರಿಸುವುದು ಮತ್ತು ಠಾಣೆಗೆ ಭೇಟಿ ನೀಡುವ ವೇಳೆ ದೈಹಿಕ ಅಂತರವನ್ನು ಕಾಯ್ದುಕೊಳ್ಳುವುದು ಸೇರಿದಂತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಸೂಚನೆ ನೀಡಿದ್ದಾರೆ.

ಇದಲ್ಲದೆ, ಯುವಕರಿಗೆ ಗಸ್ತು ಕರ್ತವ್ಯಕ್ಕೆ ಮತ್ತು ಹಿರಿಯರಿಗೆ ಠಾಣೆ ಕರ್ತವ್ಯಗಳನ್ನು ನೀಡಬೇಕು ಎಂದು ಸೂಚನೆ ನೀಡಲಾಗಿದೆ. 

ಯಾವುದೇ ಸಿಬ್ಬಂದಿಯಲ್ಲಿ ಸೋಂಕು ಪತ್ತೆಯಾದರೆ, ಅವರನ್ನು ಐಸೋಲೇಷನ್ ಗೊಳಪಡಿಸಿ, ಇತರೆ ಸಿಬ್ಬಂದಿಗಳನ್ನು ಪರೀಕ್ಷೆಗೊಳಪಡಿಸಬೇಕು. ಸಿಬ್ಬಂದಿಗಳು ಹಾಗೂ ಅವರ ಕುಟುಂಬ ಸದಸ್ಯರ ಆರೋಗ್ಯವನ್ನು ಇನ್ಸ್‌ಪೆಕ್ಟರ್ ಮತ್ತು ಅದಕ್ಕಿಂತ ಹೆಚ್ಚಿನ ಶ್ರೇಣಿಯ ಅಧಿಕಾರಿಗಳು ವಿಚಾರಿಸಬೇಕು. 

ಇದನ್ನೂ ಓದಿ: ಕೋವಿಡ್ ವಿರುದ್ಧದ ಹೋರಾಟಕ್ಕೆ ಸಜ್ಜಾಗಿ: ಬಿಬಿಎಂಪಿ ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ

ಈ ನಡುವೆ ಪ್ರಕರಣಗಳ ಹೆಚ್ಚಳದ ಹೊರತಾಗಿಯೂ, ಕರ್ತವ್ಯ ನಿರ್ವಹಣೆ ಮೇಲೆ ಪರಿಣಾಮ ಬೀರಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಹೆಚ್ಚುವರಿ ಪೊಲೀಸ್ ಕಮಿಷನರ್ (ಪೂರ್ವ) ಎ ಸುಬ್ರಹ್ಮಣ್ಯೇಶ್ವರ ರಾವ್ ಅವರು ಮಾತನಾಡಿ, ಸಿಬ್ಬಂದಿಗಳು ಎರಡೂ ಡೋಸ್ ಲಸಿಕೆಯನ್ನು ಪಡೆದುಕೊಂಡಿರುವುದರಿಂದ ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ. 

ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ವೇಳೆ ಭದ್ರತೆ ತೀವ್ರವಾಗಿರುವುದರಿಂದ ನಗರದಲ್ಲಿ ಅಪರಾಧ ಪ್ರಕರಣಗಳೂ ಕಡಿಮೆಯಾಗಿವೆ ಎಂದಿದ್ದಾರೆ. 

ಇನ್ನು ಪ್ರಕರಣಗಳ ತನಿಖೆಗೆ ಸಂಬಂಧಿಸಿದಂತೆ, ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುವವರೆಗೆ ರಾಜ್ಯದಿಂದ ಹೊರಗೆ ಹೋಗದಂತೆ ಅಪರಾಧ ಸಿಬ್ಬಂದಿಗೆ ಅಧಿಕಾರಿಗಳಉ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.



Read more

[wpas_products keywords=”deal of the day”]