
ಕಾಬೂಲ್: ಅಫ್ಗಾನಿಸ್ತಾನದ ವಾಯುಪಡೆ ಅಮೆರಿಕದ ಅಗತ್ಯದ ನೆರವು ಇಲ್ಲದೆ ಎದ್ದು ನಿಲ್ಲಲು ಸಾಧ್ಯವಿಲ್ಲ, ಹೀಗಾಗಿ ಅಫ್ಗಾನಿಸ್ತಾನದಿಂದ ನಿರ್ಗಮಿಸುವುದಕ್ಕೆ ಮೊದಲು ಅಮೆರಿಕವು ವಾಯುಪಡೆಗೆ ಕಾಯಕಲ್ಪ ಕಲ್ಪಿಸಬೇಕು ಎಂದು ಕಾವಲು ಸಂಸ್ಥೆಯೊಂದು ಮೊದಲೇ ಎಚ್ಚರಿಕೆ ನೀಡಿರುವ ಅಂಶ ಇದೀಗ ಬಹಿರಂಗವಾಗಿದೆ.
ಅಫ್ಗಾನಿಸ್ತಾನ ಪುನರ್‌ನಿರ್ಮಾಣಕ್ಕಾಗಿರುವ ವಿಶೇಷ ಇನ್‌ಸ್ಪೆಕ್ಟರ್ ಜನರಲ್ (ಸಿಗರ್) ಅವರು ಅಮೆರಿಕ ತನ್ನ ಪಡೆಗಳನ್ನು ಹಿಂಪಡೆಯುವುದಕ್ಕೆ ತಿಂಗಳುಗಳ ಮೊದಲೇ ಬೈಡನ್ ಆಡಳಿತಕ್ಕೆ ಎಚ್ಚರಿಕೆ ನೀಡಿರುವ ವರದಿ ಇದೀಗ ಬಹಿರಂಗವಾಗಿದೆ. ವಾಯುಪಡೆಗೆ ಶಕ್ತಿಯೇ ಇಲ್ಲದ ಕಾರಣ ತಾಲಿಬಾನ್ ಹೋರಾಟಗಾರರು ಬಹು ಬೇಗನೆ ಇಡೀ ದೇಶವನ್ನು ತಮ್ಮ ವಶಕ್ಕೆ ಪಡೆಯುವುದು ಸಾಧ್ಯವಾಗಿತ್ತು.
ಅಫ್ಗಾನಿಸ್ತಾನದ ವಾಯುಪಡೆಗೆ ಯುದ್ಧವಿಮಾನ ನಿಬಾಯಿಸುವ ಕೌಶಲ ಇಲ್ಲ, ತಾಂತ್ರಿಕ ಪರಿಣತಿಯೂ ಇಲ್ಲ. ಇದಕ್ಕಾಗಿ ಅಫ್ಗನ್ ವಾಯುಪಡೆ ಸಿಬ್ಬಂದಿಯನ್ನು ತಯಾರುಗೊಳಿಸುವ ಕೆಲಸ ಆಗಬೇಕಿದೆ ಎಂದು ‘ಸಿಗರ್’ ಸಲಹೆ ನೀಡಿತ್ತು. ಆದರೆ ಅಫ್ಗನ್ ವಾಯುಪಡೆಯ ಸಿಬ್ಬಂದಿಗೆ ಅಗತ್ಯದ ತರಬೇತಿ ನೀಡುವ ಕೆಲಸವನ್ನು ಅಮೆರಿಕ ಮಾಡಲಿಲ್ಲ ಎಂಬುದನ್ನು ಬಹಿರಂಗವಾದ ವರದಿ ತೋರಿಸಿಕೊಟ್ಟಿದೆ.
Read more from source
[wpas_products keywords=”deals of the day offer today electronic”]