Karnataka news paper

ರಾಜ್ಯದ 14 ಜಿಲ್ಲೆಗಳಲ್ಲಿ ಶಿಶುಗಳ ಜನನ ಲಿಂಗ ಅನುಪಾತದಲ್ಲಿ ಕುಸಿತ!


The New Indian Express

ಬೆಂಗಳೂರು: ಭ್ರೂಣಲಿಂಗ ಪತ್ತೆ ಪರೀಕ್ಷೆ ಮಾಡುತ್ತಿದ್ದ ಮಂಡ್ಯದ ಸ್ಕ್ಯಾನಿಂಗ್ ಕೇಂದ್ರದ ಟೆಕ್ನಿಷಿಯನ್ ನನ್ನು ಇತ್ತೀಚೆಗೆ ರೆಡ್ ಹ್ಯಾಂಡ್ ಆಗಿ ಹಿಡಿಯಲಾಗಿತ್ತು. ಈತ ರೇಡಿಯಾಲಜಿಸ್ಟ್ ಆಗಿರಲಿಲ್ಲ, ಕೇವಲ ಸ್ಕ್ಯಾನಿಂಗ್ ಮಾಡಲು ಕಲಿತು ತನ್ನದೇ ಕೇಂದ್ರವನ್ನು ತೆರೆದ ಸಾಮಾನ್ಯ ತಂತ್ರಜ್ಞ. ಅಕ್ರಮವಾಗಿ ಗರ್ಭಪಾತ ಮಾಡಿಸಲು ಕೆಲವು ವೈದ್ಯರನ್ನು ದಂಪತಿಗೆ ಈತ ಪರಿಚಯ ಮಾಡಿಸಿ ಕೊಡುತ್ತಿದ್ದ.

ಈತನಿಂದ ಮಾಹಿತಿ ಸಿಕ್ಕಿದ ನಂತರ ಕೆಲವು ತಿಂಗಳ ಹಿಂದೆ ಆರೋಗ್ಯ ಇಲಾಖೆಯ ಪ್ರಸವಪೂರ್ವ ರೋಗನಿರ್ಣಯ ತಂತ್ರಗಳ ವಿಭಾಗದ (ಪಿಸಿ & ಪಿಎನ್‌ಡಿಟಿ) ಉಪನಿರ್ದೇಶಕಿ ಡಾ.ಚಂದ್ರಕಲಾ ಅವರ ನೇತೃತ್ವದಲ್ಲಿ ಕೇಂದ್ರದ ಮೇಲೆ ದಾಳಿ ನಡೆಸಿ ಅಲ್ಲಿರುವ ಸಾಧನಗಳನ್ನು ವಶಕ್ಕೆ ತೆಗೆದುಕೊಂಡು ಕೇಂದ್ರವನ್ನು ಮುಚ್ಚಿಸಲಾಯಿತು. ನ್ಯಾಯಾಲಯದಲ್ಲಿ ಇಂತಹ ಪ್ರಕರಣಗಳ ಇತ್ಯರ್ಥಕ್ಕೆ ಬಹಳ ಸಮಯ ತೆಗೆದುಕೊಳ್ಳುವುದರಿಂದ ಆರೋಪಿಗಳು ಸುಲಭವಾಗಿ ತಪ್ಪಿಸಿಕೊಂಡು ಬಿಡುತ್ತಾರೆ ಎಂದು ಹೇಳುತ್ತಾರೆ.

ಹೀಗೆ ಭ್ರೂಣಲಿಂಗ ಪತ್ತೆ ಮಾಡಿ ಗರ್ಭಪಾತ ಮಾಡಿಸಿಕೊಳ್ಳುವುದರಿಂದ ರಾಜ್ಯದ 14 ಜಿಲ್ಲೆಗಳಲ್ಲಿ ಶಿಶುಗಳ ಜನನದಲ್ಲಿ ಲಿಂಗ ಅನುಪಾತದಲ್ಲಿ ಕುಸಿತಕ್ಕೆ ಕಾರಣವಾಗಿದೆ. ಒಟ್ಟಾರೆಯಾಗಿ, 2015-16 ರಲ್ಲಿ 979 ರಿಂದ 2019-20 ರಲ್ಲಿ 1,034 2019-20 ಕ್ಕೆ ರಾಜ್ಯದಲ್ಲಿ ಜನನದ ಲಿಂಗ ಅನುಪಾತದಲ್ಲಿ (ಪ್ರತಿ 1,000 ಪುರುಷರಿಗೆ ) ಹೆಣ್ಣು ಶಿಶುವಿನ ಜನನ ಸಂಖ್ಯೆ ಸುಧಾರಿಸಿದೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ(ಳಇಫಏ) ತೋರಿಸುತ್ತದೆ.

ಬೆಳಗಾವಿ, ಬೀದರ್, ವಿಜಯಪುರ, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ದಾವಣಗೆರೆ, ಹಾಸನ, ಹಾವೇರಿ, ಕೊಡಗು, ಕೊಪ್ಪಳ, ರಾಯಚೂರು, ರಾಮನಗರ, ಉತ್ತರ ಕನ್ನಡ, ಯಾದಗಿರಿ ಮತ್ತು ಬೆಂಗಳೂರು ಗ್ರಾಮಾಂತರ 14 ಜಿಲ್ಲೆಗಳಲ್ಲಿ ಲಿಂಗ ಅನುಪಾತ ಕಡಿಮೆಯಾಗಿದೆ. 2015-16 ರಲ್ಲಿ ಹಾಸನವು 1,140 ರ ಅನುಪಾತವನ್ನು ದಾಖಲಿಸಿದೆ ಎಂದು NFHS ಹೇಳುತ್ತದೆ, ಆದರೆ ಇದು 2019-20 ರಲ್ಲಿ 872 ಕ್ಕೆ ಕುಸಿದಿದೆ. ಅದೇ ರೀತಿ, 2015-16ರಲ್ಲಿ 1,075 ಬೀದರ್ ನಲ್ಲಿ ದಾಖಲಾದರೆ 2019-20ರಲ್ಲಿ 898 ದಾಖಲಾಗಿದೆ.

ಈ ಬಗ್ಗೆ ಹೆಸರು ಬಹಿರಂಗಪಡಿಸಲಿಚ್ಛಿಸದ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ಕೇಂದ್ರ ಸರ್ಕಾರವು ನಡೆಸುವ NFHS ಮಾದರಿ ಆಧಾರಿತ ಸಮೀಕ್ಷೆಯಾಗಿದೆ, ಆದರೆ ರಾಜ್ಯ ಸರ್ಕಾರವು ಹೆಚ್ಚು ಸಮಗ್ರ ಡೇಟಾವನ್ನು ನೀಡುವ ಆರೋಗ್ಯ ನಿರ್ವಹಣಾ ಮಾಹಿತಿ ವ್ಯವಸ್ಥೆ (HMIS) ಅನ್ನು ಅನುಸರಿಸುತ್ತದೆ. “ಆದರೆ ಕರ್ನಾಟಕದ ಹಲವು ಜಿಲ್ಲೆಗಳು ಈ ಅಂಕಿಅಂಶ ಸಂಗ್ರಹಣೆಯಲ್ಲಿ ಹಿಂದುಳಿದಿವೆ ಎನ್ನುತ್ತಾರೆ.

ಏಪ್ರಿಲ್ 1, 2021 ರಿಂದ ಡಿಸೆಂಬರ್ 31, 2021 ರ ನಡುವೆ ನಡೆಸಿದ ಸಮೀಕ್ಷೆಯು ಪ್ರತಿ 1,000 ಗಂಡು ಮಕ್ಕಳಿಗೆ 935 ಹೆಣ್ಣು ಮಕ್ಕಳನ್ನು ತೋರಿಸಿದೆ. 2018-19ರಲ್ಲಿ ಇದು 976 ಮತ್ತು 2019-20ರಲ್ಲಿ 956 ಆಗಿತ್ತು. ಯಾವುದೇ ಹೆಣ್ಣು ಭ್ರೂಣಹತ್ಯೆ ವರದಿಯಾಗಿಲ್ಲವಾದರೂ, ಹೆಚ್ಚು ಮಕ್ಕಳನ್ನು ಹೊಂದಲು ಹಲವು ದಂಪತಿ ಬಯಸದಿರುವುದು ಲಿಂಗಾನುಪಾತ ಕುಸಿತಕ್ಕೆ ಕಾರಣವಾಾಗಿರಲೂಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ. 

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಹೆಣ್ಣು ಮಕ್ಕಳ ಮಹತ್ವದ ಕುರಿತು ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಗೀತಾಲಕ್ಷ್ಮಿ ಹೇಳುತ್ತಾರೆ.



Read more

[wpas_products keywords=”deal of the day”]