ಹೈಲೈಟ್ಸ್:
- ‘ವಿಕ ವೆಬ್’ ವತಿಯಿಂದ ನಡೆದ ‘ಸ್ಯಾಂಡಲ್‌ವುಡ್ ಚಿತ್ರೋತ್ಸವ ಆನ್‌ಲೈನ್ ಪೋಲ್’
- ‘ವಿಜಯ ಕರ್ನಾಟಕ ವೆಬ್ ಸಿನಿಮಾ ಅವಾರ್ಡ್ಸ್-2021’ ಫಲಿತಾಂಶ ಇಲ್ಲಿದೆ
- ಪುನೀತ್ ರಾಜ್‌ಕುಮಾರ್ ಅವರ ‘ಯುವರತ್ನ’ ಚಿತ್ರಕ್ಕೆ ‘ಅತ್ಯುತ್ತಮ ಸಿನಿಮಾ’ ಪ್ರಶಸ್ತಿ
ಏಪ್ರಿಲ್ 1ರಂದು ತೆರೆಕಂಡಿದ್ದ ‘ಯುವರತ್ನ’
ಪುನೀತ್ ರಾಜ್‌ಕುಮಾರ್ ಮತ್ತು ಸಾಯೇಶಾ ಸೈಗಲ್ ಅಭಿನಯದ ‘ಯುವರತ್ನ’ ಸಿನಿಮಾವು ಏಪ್ರಿಲ್ 1ರಂದು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ತೆರೆಗೆ ಬಂದಿತ್ತು. ಚಿತ್ರದಲ್ಲಿ ಶಿಕ್ಷಣದ ಬಗ್ಗೆ ಸಂದೇಶ ಇತ್ತು. ಆದರೆ, ಸಿನಿಮಾ ತೆರೆಕಂಡ ಕೆಲವೇ ದಿನಗಳಲ್ಲಿ ಕೊರೊನಾ ಎರಡನೇ ಅಲೆ ತಾರಕಕ್ಕೇರಿತ್ತು. ಆಗಾಗಿ, ಚಿತ್ರಮಂದಿರಗಳಲ್ಲಿ ಶೇ.50 ಆಸನ ಭರ್ತಿಗೆ ಮಾತ್ರ ಅವಕಾಶ ನೀಡಲಾಗಿತ್ತು. ನಂತರ ಒಂದೇ ವಾರಕ್ಕೆ ಈ ಸಿನಿಮಾ ಓಟಿಟಿಯಲ್ಲಿ ಪ್ರದರ್ಶನ ಕಂಡು ಜನಪ್ರಿಯಗೊಂಡಿತ್ತು. ಇದೀಗ ‘ವಿಜಯ ಕರ್ನಾಟಕ ವೆಬ್ ಸಿನಿಮಾ ಅವಾರ್ಡ್ಸ್-2021’ ಪಟ್ಟಿಯಲ್ಲಿ ‘ಯುವರತ್ನ’ಗೆ ‘ಅತ್ಯುತ್ತಮ ಸಿನಿಮಾ’ ಪ್ರಶಸ್ತಿ ಲಭಿಸಿದೆ.
ಪುನೀತ್ ನಟನೆಯ ಕೊನೆಯ ಸಿನಿಮಾ ಇದಾಗಿತ್ತು
‘ಪವರ್ ಸ್ಟಾರ್’ ಪುನೀತ್ ರಾಜ್‌ಕುಮಾರ್ ನಿಧನರಾಗುವುದಕ್ಕೂ ಮುನ್ನ ತೆರೆಕಂಡ ಕೊನೆಯ ಚಿತ್ರ ಇದಾಗಿದೆ. ಈ ಚಿತ್ರದಲ್ಲಿ ಪುನೀತ್ ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದರು. ಕಾಲೇಜ್ ವಿದ್ಯಾರ್ಥಿಯಾಗಿ ಮತ್ತು ಕಾಲೇಜ್ ಪ್ರೊಫೆಸರ್ ಆಗಿ ನಟಿಸಿದ್ದರು ಅಪ್ಪು. ಅವರ ನಟನೆಗೆ ಎಲ್ಲರಿಗೂ ಇಷ್ಟವಾಗಿತ್ತು. ‘ವಿಜಯ ಕರ್ನಾಟಕ ವೆಬ್ ಸಿನಿಮಾ ಅವಾರ್ಡ್ಸ್-2021’ ಪಟ್ಟಿಯಲ್ಲಿ ಅವರ ನಟನೆಗಾಗಿ ‘ಅತ್ಯುತ್ತಮ ನಟ’ ಪ್ರಶಸ್ತಿಗೆ ಅವರ ಹೆಸರು ಅಂತಿಮಗೊಂಡಿತ್ತು.
‘ವಿಕ ವೆಬ್ ಸಿನಿಮಾ ಅವಾರ್ಡ್ಸ್-2021’; ಪುನೀತ್ ರಾಜ್‌ಕುಮಾರ್ ‘ಅತ್ಯುತ್ತಮ ನಟ’
‘ಯುವರತ್ನ’ ಜೊತೆಗೆ ‘ರಾಬರ್ಟ್’ ಪೈಪೋಟಿ
ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ‘ರಾಬರ್ಟ್’, ‘ಯುವರತ್ನ’, ‘ಕೋಟಿಗೊಬ್ಬ 3’, ‘ಗರುಡ ಗಮನ ವೃಷಭ ವಾಹನ’, ‘ಸಲಗ, ‘ಪೊಗರು’, ‘ಭಜರಂಗಿ 2’ ಚಿತ್ರಗಳು ನಾಮನಿರ್ದೇಶನಗೊಂಡಿದ್ದವು. ಅಂತಿಮವಾಗಿ ‘ಯುವರತ್ನ’ ಚಿತ್ರಕ್ಕೆ ಶೇ.61ರಷ್ಟು ಮತಗಳು ಬಂದಿವೆ. ‘ರಾಬರ್ಟ್’ ಚಿತ್ರಕ್ಕೆ ಶೇ.34 ಮತ ಸಿಕ್ಕಿವೆ. ಆರಂಭದಲ್ಲಿ ‘ರಾಬರ್ಟ್’ ಚಿತ್ರವು ಮಿಕ್ಕ ಸಿನಿಮಾಗಳಿಗಿಂತ ಮುಂದಿತ್ತು. ಅಂತಿಮವಾಗಿ ‘ಯುವರತ್ನ’ ಅದನ್ನು ಬೀಟ್ ಮಾಡಿದೆ. ಹಾಗೆಯೇ, ಕಿಚ್ಚ ಸುದೀಪ್ ನಟನೆಯ ‘ಕೋಟಿಗೊಬ್ಬ 3’ ಚಿತ್ರಕ್ಕೆ 3%, ‘ಗರುಡ ಗಮನ ವೃಷಭ ವಾಹನ’, ‘ಸಲಗ’, ‘ಪೊಗರು’ ಮತ್ತು ‘ಭಜರಂಗಿ 2’ ಚಿತ್ರಗಳಿಗೆ ತಲಾ 1% ವೋಟ್‌ಗಳು ಲಭಿಸಿವೆ.
ವಿಕ ವೆಬ್ ಸಿನಿಮಾ ಅವಾರ್ಡ್ಸ್ 2021: ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ‘ರಾಬರ್ಟ್’ ಲೀಡಿಂಗ್!
‘ಸ್ಯಾಂಡಲ್‌ವುಡ್ ಚಿತ್ರೋತ್ಸವ ಆನ್‌ಲೈನ್ ಪೋಲ್’ನಲ್ಲಿ ನೀವು ನೀಡಿದ ಮತಗಳ ಆಧಾರದ ಮೇಲೆ 2021ರ ‘ವಿಜಯ ಕರ್ನಾಟಕ ವೆಬ್ ಸಿನಿಮಾ ಅವಾರ್ಡ್ಸ್’ ಘೋಷಿಸಲಾಗಿದೆ.
Read more
[wpas_products keywords=”deal of the day party wear dress for women stylish indian”]