Karnataka news paper

ಖ್ಯಾತ ತಮಿಳು ಚಿತ್ರನಟ ಧನುಷ್- ಐಶ್ವರ್ಯಾ ರಜನಿಕಾಂತ್ ವಿಚ್ಚೇದನ: ಹೆಚ್ಚೇನೂ ಹೇಳುವುದಿಲ್ಲ ಪ್ರೀತಿ ಇರಲಿ ಎಂದ ಐಶ್ವರ್ಯಾ


Online Desk

ಚೆನ್ನೈ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಸೆಲಬ್ರಿಟಿ ದಂಪತಿಯಾದ ಧನುಷ್- ಐಶ್ವರ್ಯಾ ರಜನಿಕಾಂತ್ ಅವರು ವಿಚ್ಛೇದನ ಘೋಷಿಸಿದ್ದಾರೆ. ಇದರೊಂದಿಗೆ ಅವರಿಬ್ಬರ 18 ವರ್ಷಗಳ ದಾಂಪತ್ಯ ಕೊನೆಗೊಂಡಂತಾಗಿದೆ.

ಇದನ್ನೂ ಓದಿ: ಸಮಂತಾ ಜೊತೆಗಿನ ವಿಚ್ಛೇದನ ಬಳಿಕ ನಟ ನಾಗ ಚೈತನ್ಯ ಮೊದಲ ಪ್ರತಿಕ್ರಿಯೆ ಹೀಗಿದೆ!

ಖ್ಯಾತ ತಮಿಳು ಸಿನಿಮಾ ನಟರಾಗಿರುವ ಧನುಷ್ ಮತ್ತು ರಜನಿಕಾಂತ್ ಪುತ್ರಿ ಐಶ್ವರ್ಯಾ ತಮ್ಮ ವಿಚ್ಚೇದನ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಸಂಭ್ರಮಿಸಬೇಕಾಗಿರುವುದು ಮದುವೆಯನ್ನಲ್ಲ, ವಿಚ್ಛೇದನವನ್ನು: ರಾಮ್ ಗೋಪಾಲ್ ವರ್ಮಾ ಟ್ವೀಟ್

ಧನುಷ್ ಮತ್ತು ಐಶ್ವರ್ಯಾ ಅವರು 2004ರಲ್ಲಿ ವಿವಾಹವಾಗಿದ್ದರು. ಐಶ್ವರ್ಯಾ ಅವರು ರಜನಿಕಾಂತ್ ಅವರ ಹಿರಿಯ ಪುತ್ರಿಯಾಗಿದ್ದಾರೆ. ವಿವಾಹವಾದಾಗ ಧನುಷ್ ಅವರಿಗೆ 21 ವರ್ಷವಾಗಿದ್ದರೆ ಐಶ್ವರ್ಯಾ ಅವರಿಗೆ 23 ವರ್ಷ ವಯಸ್ಸು.

ಇದನ್ನೂ ಓದಿ: ಗುಜರಾತ್: ಗಂಡನ ಮನೆಯಲ್ಲಿ ಶೌಚಾಲಯವಿಲ್ಲವೆಂದು ಡಿವೋರ್ಸ್​ ಪಡೆದ ಪತ್ನಿ!

ಧನುಷ್ ತಮ್ಮ ಡಿವೋರ್ಸ್ ಕುರಿತಾಗಿ ಉದ್ದದ ಪೋಸ್ಟ್ ಹಾಕಿಕೊಂಡಿದ್ದರೆ, ಐಶ್ವರ್ಯಾ ಅವರು ಅದನ್ನೇ ರೀಪೋಸ್ಟ್ ಮಾಡಿ  ‘ಹೆಚ್ಚೇನೂ ಹೇಳುವುದಿಲ್ಲ ಅಂಡರ್ ಸ್ಟ್ಯಾಂಡಿಂಗ್ ಮತ್ತು ಪ್ರೀತಿ ಇರಲಿ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಅತ್ಯಂತ ದುಬಾರಿ ವಿಚ್ಛೇದನ: ದುಬೈ ದೊರೆಯಿಂದ ಆರನೇ ಪತ್ನಿಗೆ 5,527 ಕೋಟಿ ರೂ. ಜೀವನಾಂಶ!

 





Read more…

[wpas_products keywords=”party wear dress for women stylish indian”]