Karnataka news paper

ಸಮಸ್ಯೆ ಬಗೆಹರಿಸುವ ಭರವಸೆ ಕೊಟ್ಟ ಬಸವರಾಜ ಬೊಮ್ಮಾಯಿ; ಧರಣಿ ವಾಪಸ್ ಪಡೆದ ಎಚ್‌ಡಿ ರೇವಣ್ಣ


ಹೈಲೈಟ್ಸ್‌:

  • 12 ಸ್ನಾತಕೋತ್ತರ ಕೋರ್ಸ್‌ಗಳ ಮಂಜೂರು ಮಾಡುವ ಬೇಡಿಕೆ ಇಟ್ಟು ಧರಣಿಗೆ ಮುಂದಾದ ಎಚ್‌ಡಿ ರೇವಣ್ಣ
  • ಬಸವರಾಜ ಬೊಮ್ಮಾಯಿಯಿಂದ ಭರವಸೆ ಹಿನ್ನೆಲೆಯಲ್ಲಿ ಧರಣಿ ವಾಪಸ್
  • ಬೇಡಿಕೆ ಈಡೇರದಿದ್ದರೆ ಮತ್ತೆ ಹೋರಾಟ ನಡೆಸುವ ಎಚ್ಚರಿಕೆ

ಬೆಂಗಳೂರು: ಹೊಳೆನರಸಿಪುರದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಹೊಸದಾಗಿ ಎಂ.ಎಸ್ಸಿ ಸೈಕಾಲಜಿ ಮತ್ತು ಎಂಎಸ್ಸಿ ಫುಡ್ & ನ್ಯೂಟ್ರಿಷನ್ ಸೇರಿದಂತೆ 12 ಸ್ನಾತಕೋತ್ತರ ಕೋರ್ಸಗಳನ್ನು ಮಂಜೂರು ಮಾಡುವ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಾಜಿ ಸಚಿವ ಎಚ್‌ಡಿ ರೇವಣ್ಣ ಧರಣಿಗೆ ಮುಂದಾಗಿದ್ದರು. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಏಕಾಂಗಿಯಾಗಿ ಕುಳಿತುಕೊಂಡು ಬೇಡಿಕೆ ಈಡೇರಿಕೆಗೆ ಆಗ್ರಹಿಸಿದ್ದರು. ಇದೀಗ ಸಿಎಂ ಬಸವರಾಜ ಬೊಮ್ಮಾಯಿಯಿಂದ ಭರವಸೆ ಹಿನ್ನೆಲೆಯಲ್ಲಿ ರೇವಣ್ಣ ಧರಣಿ ವಾಪಸ್ ಪಡೆದಿದ್ದಾರೆ.

ಹೊಳೆನರಸೀಪುರ ಸರ್ಕಾರಿ ಮಹಿಳಾ ಗೃಹ ವಿಜ್ಞಾನ ಕಾಲೇಜಿಗೆ 2022-23ನೇ ಶೈಕ್ಷಣಿಕ ಸಾಲಿಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಹೊಸದಾಗಿ ಎಂ.ಎಸ್ಸಿ ಸೈಕಾಲಜಿ ಮತ್ತು ಎಂಎಸ್ಸಿ ಫುಡ್ & ನ್ಯೂಟ್ರಿಷನ್ ಸೇರಿದಂತೆ 12 ಸ್ನಾತಕೋತ್ತರ ಕೋರ್ಸಗಳನ್ನು ಮಂಜೂರು ಮಾಡಲು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಉನ್ನತ ಶಿಕ್ಷಣ ಇಲಾಖೆಗೆ ಶಿಫಾರಸ್ಸು ಮಾಡಿದ್ದರು.

ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಕೇಂದ್ರದ ಗಣರಾಜ್ಯೋತ್ಸವ ಸಮಿತಿ ತಿರಸ್ಕಾರ; ಎಚ್‌ಡಿಕೆ ಆಕ್ಷೇಪ

ಮೈಸೂರು ವಿಶ್ವವಿದ್ಯಾಲಯದ ಶಿಫಾರಸ್ಸನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಎಂ.ಎಸ್ಸಿ ಸೈಕಾಲಜಿ ಮತ್ತು ಎಂಎಸ್ಸಿ ಫುಡ್ . ನ್ಯೂಟ್ರಿಷನ್ ಸೇರಿದಂತೆ 62 ಸ್ನಾತಕೋತ್ತರ ಕೋರ್ಸಗಳನ್ನು ಮಂಜೂರು ಮಾಡಲು ಉನ್ನತ ಶಿಕ್ಷಣ ಸಚಿವರಿಗೆ ಶಿಫಾರಸ್ಸು ಮಾಡಿದ್ದರೂ ಸಹ ಉನ್ನತ ಶಿಕ್ಷಣ ಸಚಿವರು ಪ್ರಸ್ತಾವನೆಯನ್ನು ತಿರಸ್ಕರಿಸಿರುವುದು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಆರೋಪಿಸಿ ಧರಣಿಗೆ ಮುಂದಾದರು.

ಈ ವೇಳೆ ಸಿಎಂ ಕಚೇರಿ ಸಿಬ್ಬಂದಿ ಧರಣಿಗೆ ಅವಕಾಶ ನೀಡದೆ ಕಚೇರಿಯೊಳಗೆ ಕರೆದೊಯ್ದು ಸಿಎಂ ಬೊಮ್ಮಾಯಿ ಜೊತೆ ದೂರವಾಣಿ ಮೂಲಕ ಮಾತುಕತೆಗೆ ವ್ಯವಸ್ಥೆ ಕಲ್ಪಿಸಿದರು. ನಂತರ ಶುಕ್ರವಾರ ಸಭೆ ನಡೆಸಿ ಸಮಸ್ಯೆ ಪರಿಹರಿಸುವ ಕುರಿತು ಸಿಎಂ ಭರವಸೆ ನೀಡಿದ್ದರಿಂದ ಧರಣಿಯನ್ನು ರೇವಣ್ಣ ತಾತ್ಕಾಲಿಕವಾಗಿ ಕೈಬಿಟ್ಟಿದ್ದಾರೆ.

ಬಳಿಕ ಮಾತನಾಡಿದ ರೇವಣ್ಣ, ನನ್ನ ಕ್ಷೇತ್ರದ ಶೈಕ್ಷಣಿಕ ಹಿತದೃಷ್ಟಿಯಿಂದ ಇದನ್ನು ಪ್ರತಿಭಟಿಸುವ ಸಲುವಾಗಿ ಮುಖ್ಯಮಂತ್ರಿಯವರ ಗೃಹಕಚೇರಿ ಕೃಷ್ಣಾದ ಆವರಣದಲ್ಲಿ ಕೊರೊನಾ ನಿಯಮ ಪಾಲಿಸಿ ಏಕಾಂಗಿಯಾಗಿ ಧರಣಿ ನಡೆಸಲು ನಿರ್ಧರಿಸಿದ್ದೆ, ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕೋರ್ಸ್ ಗಳನ್ನು ಕೇಳುತ್ತಿದ್ದೇನೆ, ನಾನೇನು ನನ್ನ ಕ್ಷೇತ್ರದ ಗುತ್ತಿಗೆ ಕಾಮಗಾರಿಗಳಿಗೆ ಬಂದಿಲ್ಲ, ನಮ್ಮ ಮಕ್ಕಳೇನು ಅಲ್ಲಿ ಓದಬೇಕಿಲ್ಲ, ಬಡ ಮಕ್ಕಳು ಓದುತ್ತಾರೆ ಅವರ ಅನುಕೂಲಕ್ಕೆ ಕೋರ್ಸ್ ಕೇಳುತ್ತಿದ್ದೇನೆ ಎಂದರು.

ಸರ್ಕಾರದ ಬಳಿ ಹೊಸ ಕೋರ್ಸ್ ಆರಂಭಿಸಲು ಬೋಧಕ,ಬೋಧಕೇತರ ಸಿಬ್ಬಂದಿಗೆ ವೇತನ ಪಾವತಿಸಲಾಗದ ಸ್ಥಿತಿ ಇದ್ದರೆ, ಸರ್ಕಾರವೇನಾದರೂ ಪಾಪರ್ ಚಿಟ್ ಆಗಿದ್ದರೆ ತಾತ್ಕಾಲಿಕವಾಗಿ ನಾನೇ ವೇತನ ನೀಡಲು ಸಿದ್ದನಿದ್ದೇನೆ, ನಮಗೆ ಎಸ್ಸಿ ಸೈಕಾಲಜಿ ಮತ್ತು ಎಂಎಸ್ಸಿ ಫುಡ್ ನ್ಯೂಟ್ರಿಷನ್ ಕೋರ್ಸ್ ಕೊಡಿ ಎಂದು ಆಗ್ರಹಿಸಿದರು.

ಮುಖ್ಯಮಂತ್ರಿಗಳ ಭರವಸೆ ಹಿನ್ನಲೆಯಲ್ಲಿ ಇಂದಿನ ಧರಣಿ ಕೈಬಿಟ್ಟಿದ್ದೇನೆ, ಸಿಎಂ ಸಮಯ ಕೇಳಿದಾಗ ಇಲ್ಲ‌ ಎನ್ನಲು ಸಾಧ್ಯವಿಲ್ಲ,ಒಂದು ವೇಳೆ ಬೇಡಿಕೆ ಈಡೇರಿಕೆಯಾಗದೇ ಇದ್ದಲ್ಲಿ ಮುಂದಿನ ಹೋರಾಟದ ಕುರಿತು ನಿರ್ಧರಿಸಲಾಗುತ್ತದೆ ಎಂದರು.



Read more

[wpas_products keywords=”deal of the day sale today offer all”]