PTI
ನವದೆಹಲಿ: ಕೋವಿಡ್ ಸಾಂಕ್ರಾಮಿಕದ ನಡುವೆಯೇ ನಡೆಯುತ್ತಿರುವ ಗಣರಾಜ್ಯೋತ್ಸವ ದಿನಾಚರಣೆಗೆ ಆಟೋ ಚಾಲಕರು, ಆರೋಗ್ಯ ಕಾರ್ಯಕರ್ತರು ಸೇರಿ 8000 ಮಂದಿಗೆ ವಿಶೇಷ ಆಹ್ವಾನ ನೀಡಲಾಗಿದೆ.
ವಿಶೇಷವೆಂದರೆ ಈ ವರ್ಷದ ವಿಶೇಷ ಆಹ್ವಾನಿತರ ಪಟ್ಟಿಯಲ್ಲಿ ಕೋವಿಡ್ ಸಂದರ್ಭದಲ್ಲಿ ಮುಂಚೂಣಿ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸದವರಿಗೆ ಪ್ರಾಶಸ್ತ್ಯ ನೀಡಲಾಗಿದೆ. ಪ್ರಮುಖವಾಗಿ ಆರೋಗ್ಯ ಕಾರ್ಯಕರ್ತರು, ನೈರ್ಮಲ್ಯ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಆಟೋ ಚಾಲಕರು, ಆ್ಯಂಬುಲೆನ್ಸ್ ಚಾಲಕರು ಸೇರಿದಂತೆ ಒಟ್ಟು 8 ಸಾವಿರ ಮಂದಿಗೆ ವಿಶೇಷ ಆಹ್ವಾನ ನೀಡಲಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
ಅಂತೆಯೇ ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಅವಕಾಶ ಕಲ್ಪಿಸುವುದು ಇದರ ಉದ್ದೇಶ. ಆಹ್ವಾನಿತರು ಸಂಪೂರ್ಣವಾಗಿ ಲಸಿಕೆಯನ್ನು ಹೊಂದಿರಬೇಕು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಗಣರಾಜ್ಯೋತ್ಸಕ್ಕೆ ಇನ್ನು ಒಂದೇ ವಾರ ಬಾಕಿ: ದೆಹಲಿಯ ರಾಜಪಥ್ ನಲ್ಲಿ ಪರೇಡ್ ಪೂರ್ವಾಭ್ಯಾಸ ಪ್ರಾರಂಭ
COVID-19 ನಿರ್ಬಂಧಗಳ ಕಾರಣದಿಂದಾಗಿ, ಈ ವರ್ಷ ಸಂದರ್ಶಕರ ಸಂಖ್ಯೆಯನ್ನು ಗಣನೀಯವಾಗಿ ಕಡಿತಗೊಳಿಸಲಾಗಿದ್ದು, ನಾವು 5000 ರಿಂದ 8000 ಜನರಿಗೆ ಮಾತ್ರ ಆಹ್ವಾನಕ್ಕೆ ಆಯ್ಕೆ ಮಾಡಿದ್ದೇವೆ, ಆದರೆ ನಾವು ಅದನ್ನು ಇನ್ನೂ ಅಂತಿಮಗೊಳಿಸಿಲ್ಲ. ಕಳೆದ ವರ್ಷ 25,000 ಸಂದರ್ಶಕರು ಇದರಲ್ಲಿ ಭಾಗವಹಿಸಿದ್ದರು ಎಂದು ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಹಾಲಿ ವರ್ಷದ ಕಾರ್ಯಕ್ರಮದಲ್ಲಿ ಒಟ್ಟು 600 ಯುವ ಕಲಾವಿದರು ರಾಜಪಥದಲ್ಲಿ ಪ್ರದರ್ಶನ ನೀಡಲಿದ್ದಾರೆ. ದೇಶಾದ್ಯಂತದ ಜನರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಪ್ರತಿಭಾವಂತ ನೃತ್ಯಗಾರರನ್ನು ಪ್ರೋತ್ಸಾಹಿಸಲು MoD ಮತ್ತು ಸಂಸ್ಕೃತಿ ಸಚಿವಾಲಯ ಆಯೋಜಿಸಿದ ರಾಷ್ಟ್ರವ್ಯಾಪಿ ಸ್ಪರ್ಧೆ ‘ವಂದೇ ಭಾರತಂ’ ಮೂಲಕ ಅವರನ್ನು ಆಯ್ಕೆ ಮಾಡಲಾಗಿದೆ.
COVID-19 ಕಾರಣದಿಂದಾಗಿ ಈ ವರ್ಷದ ಗಣರಾಜ್ಯೋತ್ಸವದಂದು ಮಧ್ಯ ಏಷ್ಯಾದ ದೇಶಗಳಿಂದ ಯಾವುದೇ ವಿದೇಶಿ ಮುಖ್ಯ ಅತಿಥಿ ಇರುವುದಿಲ್ಲ. ಸರ್ಕಾರವು ಐದು ಮಧ್ಯ ಏಷ್ಯಾ ರಾಷ್ಟ್ರಗಳ ಮುಖ್ಯಸ್ಥರಿಗೆ ಆಹ್ವಾನಗಳನ್ನು ಕಳುಹಿಸಿತ್ತು ಆದರೆ ಈಗ ಕೋವಿಡ್ ಕಾರಣದಿಂದಾಗಿ ಯೋಜನೆಗಳನ್ನು ರದ್ದುಗೊಳಿಸಲಾಗಿದೆ.
ಇದನ್ನೂ ಓದಿ: ಗಣರಾಜ್ಯೋತ್ಸವ ಪರೇಡ್ ನಲ್ಲಿ 5 ರಫೇಲ್ ಸೇರಿ 75 ಯುದ್ಧ ವಿಮಾನಗಳಿಂದ ಶಕ್ತಿ ಪ್ರದರ್ಶನ
“ಗಣರಾಜ್ಯೋತ್ಸವದ ಪರೇಡ್‌ನಲ್ಲಿ ತಮ್ಮ ಟ್ಯಾಬ್ಲಾಕ್ಸ್ ಅನ್ನು ಮರುಪರಿಶೀಲಿಸುವಂತೆ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನ ವಿನಂತಿಗಳನ್ನು ಮರುಪರಿಶೀಲಿಸಲಾಗುವುದಿಲ್ಲ. ಕಾರಣಗಳ ಬಗ್ಗೆ (ಅವುಗಳನ್ನು ಸೇರಿಸದಿರುವ) ಅವರಿಗೆ ತಿಳಿಸಲಾಗಿದೆ” ಎಂದು MoD ಹೇಳಿದೆ.
ಇನ್ನು ಪ್ರತೀ ವರ್ಷದಂತೆ ಈ ಬಾರಿಯೂ ಪ್ಯಾರಾ-ಗ್ಲೈಡರ್‌ಗಳು, ಪ್ಯಾರಾ-ಮೋಟರ್‌ಗಳು, ಮಾನವರಹಿತ ವೈಮಾನಿಕ ವಾಹನಗಳು, ಮಾನವರಹಿತ ವಿಮಾನ ವ್ಯವಸ್ಥೆಗಳು, ಮೈಕ್ರೋ-ಲೈಟ್ ಏರ್‌ಕ್ರಾಫ್ಟ್‌ಗಳು, ರಿಮೋಟ್ ಪೈಲಟ್ ವಿಮಾನಗಳು, ಸಣ್ಣ ಗಾತ್ರದ ಚಾಲಿತ ವಿಮಾನಗಳು, ಕ್ವಾಡ್‌ಕಾಪ್ಟರ್‌ಗಳು, ಪ್ಯಾರಾ-ಜಂಪಿಂಗ್ ಇತ್ಯಾದಿಗಳ ಬಳಕೆಯನ್ನು ಜನವರಿ 20 ರಿಂದ ಫೆಬ್ರವರಿ 15 ರವರೆಗೆ ದೆಹಲಿಯಲ್ಲಿ ನಿಷೇಧಿಸಲಾಗಿದೆ ಎಂದು ದೆಹಲಿ ಪೊಲೀಸರು ಆಯುಕ್ತ ರಾಕೇಶ್ ಅಸ್ತಾನ ಹೇಳಿದ್ದಾರೆ.
Read more
[wpas_products keywords=”deal of the day”]