The New Indian Express
ಜನಪ್ರಿಯ ಛಾಯಾಗ್ರಾಹಕ ಸತ್ಯ ಹೆಗಡೆ ನಿರ್ಮಾಪಕರಾಗಿ ಬಡ್ತಿ ಹೊಂದುತ್ತಿದ್ದಾರೆ, ಸತ್ಯ ಹೆಗಡೆ ಸ್ಟುಡಿಯೋಸ್ ಯೂಟ್ಯೂಬ್ ಚಾನೆಲ್ ನಲ್ಲಿ ದಿ ಕ್ರಿಟಿಕ್ ಎಂಬ ಶಾರ್ಟ್ ಫಿಲ್ಮ್ ನಿರ್ಮಾಣ ಮಾಡುತ್ತಿದ್ದಾರೆ.
ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮನ್ಸೋರೆ ನಿರ್ದೇಶಿಸಿರುವ ದಿ ಕ್ರಿಟಿಕ್ ಶಾರ್ಟ್ ಫಿಲ್ಮ್ ನಲ್ಲಿ ಹಿರಿಯ ನಟ ನಾಗಾಭರಣ ಮತ್ತು ಶಿಲ್ಪ ಹೆಗಡೆ ನಟಿಸಿದ್ದಾರೆ. ಸತ್ಯ ಹೆಗಡೆ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಬಿ.ಎಂ ಬಶೀರ್ ಅವರ ಕಥೆ ಆಧರಿಸಿ 10 ನಿಮಿಷಗಳ ಕಿರುಚಿತ್ರ ನಿರ್ಮಿಸಲಾಗಿದೆ.
ಬಿಗ್ ಸ್ಕ್ರೀನ್‌ನಲ್ಲಿ ತರಲಾಗದ ವಿಷಯವನ್ನು ಕಿರುಚಿತ್ರಗಳನ್ನು ಬಳಸಿ ಮಾಡಬಹುದು. ನನ್ನ ಯೂಟ್ಯೂಬ್ ಚಾನೆಲ್ ಸತ್ಯ ಹೆಗ್ಡೆ ಸ್ಟುಡಿಯೋಸ್‌ನಲ್ಲಿ ಪ್ರತಿ ತಿಂಗಳ ಎರಡನೇ ಭಾನುವಾರದಂದು ಕೆಲವು ಅತ್ಯುತ್ತಮ ಕಿರುಚಿತ್ರಗಳನ್ನು ಹೊರತರಲು ನಾನು ಯೋಜಿಸುತ್ತೇನೆ. ತಾನು ನಿರ್ಮಾಪಕನಾಗಿ ಮಾತ್ರ ಉಳಿಯುತ್ತೇನೆ ಮತ್ತು ಯಾವುದೇ ಕಿರುಚಿತ್ರಗಳಿಗೆ ಕ್ಯಾಮೆರಾ ವರ್ಕ್ ನಿರ್ವಹಿಸುವುದಿಲ್ಲ ಎಂದು ಸತ್ಯ ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ರಾಜಕೀಯ ಕುರಿತು ಮನ್ಸೋರೆ ಸಿನಿಮಾ: ಪೊಲಿಟಿಕಲ್ ಥ್ರಿಲ್ಲರ್ ನಲ್ಲಿ ಸಾಯಿಪಲ್ಲವಿ!
ಯಾರು ಕಿರುಚಿತ್ರಗಳನ್ನು ಮಾಡಲು ಆಸಕ್ತಿ ಹೊಂದಿರುತ್ತಾರೋ ಅವರಿಗೆ ನಾವು ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳನ್ನು ಒದಗಿಸುತ್ತೇವೆ, ಅದನ್ನು ಅವರು ಬಳಸಿಕೊಳ್ಳಬಹುದು” ಎಂದು ಅವರು ಹೇಳುತ್ತಾರೆ. ತಮ್ಮ ಬ್ಯಾನರ್‌ಗಾಗಿ ಡಿಒಪಿ ಅಭಿಷೇಕ್ ಕಾಸರಗೋಡು ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ. ಪಪ್ಪೆಟ್ ಎಂಬ ಹೆಸರಿನ ಈ ಕಿರುಚಿತ್ರ ಫೆಬ್ರವರಿ 13ರಂದು ರಿಲೀಸ್ ಆಗಲಿದೆ.
Read more…
[wpas_products keywords=”party wear dress for women stylish indian”]