ಹೈಲೈಟ್ಸ್:
- ಜಿಲ್ಲಾಡಳಿತಕ್ಕೆ ಪೋಷಕರಿಂದ ಮನವಿ ಸಲ್ಲಿಕೆ
- ಮಕ್ಕಳ ವಿದ್ಯಾಭ್ಯಾಸ ಕುಂಠಿತಗೊಳ್ಳಲಿದೆ ಎಂದು ಪೋಷಕರ ಆತಂಕ
- ಈಗಾಗಲೇ ಲಾಕ್‌ಡೌನ್‌ನಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆ ಉಂಟಾಗಿದೆ ಎಂದು ಬೇಸರ
ಈ ನಡುವೆ ಕೊಡಗಿನಲ್ಲಿ ಹೊಸ ಸಮಸ್ಯೆಯೊಂದು ತಲೆದೋರಿದ್ದು, ಜಿಲ್ಲಾ ಕೇಂದ್ರದಲ್ಲಿನ ಕೋವಿಡ್ ಆಸ್ಪತ್ರೆಗಳ 500 ಬೆಡ್‌ಗಳು ಭರ್ತಿಯಾದರೆ ನಂತರ ಹೊಸ ಕೋವಿಡ್ ಕೇರ್ ಸೆಂಟರ್ ತೆರೆಯುವ ಕುರಿತು ಜಿಲ್ಲಾಡಳಿತ ಈಗಾಗಲೇ ಮಡಿಕೇರಿಯ ಗಾಳಿಬೀಡು ನವೋದಯ ವಿದ್ಯಾಲಯವನ್ನು ಗುರುತಿಸಿದೆ.
ಈ ನಡುವೆ ಕೊಡಗು ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿಯ ಗಾಳಿ ಬೀಡು ನವೋದಯ ವಿದ್ಯಾಲಯವನ್ನು ಕೋವಿಡ್ ಆರೈಕೆ ಕೇಂದ್ರವಾಗಿ ಪರಿವರ್ತಿಸದಂತೆ ವಿದ್ಯಾರ್ಥಿಗಳ ಪೋಷಕರು ಒತ್ತಾಯಿಸಿದ್ದಾರೆ. ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ಪೋಷಕರು, ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸೋಂಕಿತರ ಸುಧಾರಣೆಗಾಗಿ ಗಾಳಿಬೀಡು ನವೋದಯ ವಿದ್ಯಾಲಯವನ್ನು ಮತ್ತೆ ಓಮಿಕ್ರಾನ್‌ನಿಂದ ಕೋವಿಡ್ ಆರೈಕೆ ಕೇಂದ್ರವಾಗಿ ಪರಿವರ್ತಿಸಿದರೆ ಮಕ್ಕಳ ವಿದ್ಯಾಭ್ಯಾಸ ಕುಂಠಿತಗೊಳ್ಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೋವಿಡ್ ಲಾಕ್‌ಡೌನ್‌ನಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಪೋಷಕರು, ಜಿಲ್ಲಾಧಿಕಾರಿಗಳು ಮಕ್ಕಳ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಕೊಡಗು ಜಿಲ್ಲಾಧಿಕಾರಿ ಡಾ. ಬಿ. ಸಿ. ಸತೀಶ ಅವರಿಗೆ ಮನವಿ ಮಾಡಿದರು.
ಇನ್ನು ಈ ಬಗ್ಗೆ ಪ್ರತಿಕ್ರಿಸಿರುವ ಕೊಡಗು ಜಿಲ್ಲಾಧಿಕಾರಿ ಡಾ. ಬಿ. ಸಿ. ಸತೀಶ ಅವರು, ನವೋದಯ ವಿದ್ಯಾಲಯದಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲು ಪೋಷಕರ ವಿರೋಧ ಕಂಡು ಬಂದಿದೆ. ಸದ್ಯಕ್ಕೆ ಕೋವಿಡ್ ಕೇರ್ ಸೆಂಟರ್ ಗುರುತು ಮಾಡಿರುತ್ತೇವೆ. ಅಷ್ಟೇ ಹೊರತು ಈಗಲೇ ನವೋದಯದಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯುವುದಿಲ್ಲ ಎಂದರು.
ಕೋವಿಡ್ ಜಾಸ್ತಿಯಾದಲ್ಲಿ ಎಲ್ಲಾ ಶಾಲೆಗಳನ್ನು ಮುಚ್ಚಬೇಕಾಗುತ್ತದೆ. ಆಗ ನವೋದಯ ಶಾಲೆಯನ್ನೂ ಮುಚ್ಚುತ್ತೇವೆ. ಕೋವಿಡ್ ಆಸ್ಪತ್ರೆಗಳ 500 ಬೆಡ್‌ಗಳು ಫುಲ್ ಆದಲ್ಲಿ ನಂತರ ಕೋವಿಡ್ ಕೇರ್ ಸೆಂಟರ್ ತೆರೆಯುತ್ತೇವೆ. ಅಲ್ಲಿಯವರೆಗೆ ಶಾಲೆಗೆ ಯಾವುದೇ ಸಮಸ್ಯೆ ಇಲ್ಲ ಎಂದರು. ಇದು ರಾಷ್ಟ್ರೀಯ ವಿಪತ್ತು ನಿರ್ವಹಣೆ ಕೆಲಸ ಆಗಿದೆ. ಇದಕ್ಕೆ ಪೋಷಕರು ವಿರೋಧ ಮಾಡುವುದು ಸರಿಯಲ್ಲ ಎಂದು ಕೊಡಗು ಜಿಲ್ಲಾಧಿಕಾರಿ ಡಾ ಬಿ. ಸಿ. ಸತೀಶ್ ಹೇಳಿದ್ದಾರೆ.
Read more
[wpas_products keywords=”deal of the day sale today offer all”]