Source : The New Indian Express
ನವದೆಹಲಿ. ಅಮೆರಿಕದ ಬೆಟರ್.ಕಾಂ ಸಂಸ್ಥೆಯ ಸಿಇಒ, ಭಾರತೀಯ ಮೂಲದ ಗಾರ್ಗ್ ಕಡೆಗೂ ತಮ್ಮ ಕೃತ್ಯಕ್ಕೆ ಕ್ಷಮೆಯಾಚಿಸಿದ್ದಾರೆ. 900 ಮಂದಿ ಸಂಸ್ಥೆಯ ಉದ್ಯೋಗಿಗಳನ್ನು 3 ನಿಮಿಷ ಅವಧಿಯ ಜೂಮ್ ಕಾಲ್ ಮೂಲಕ ಕಿತ್ತು ಹಾಕಿದ್ದರು.
ಇದನ್ನೂ ಓದಿ: ಜೂಮ್ ಕಾಲ್ ನಲ್ಲೇ 900 ಕ್ಕೂ ಹೆಚ್ಚು ನೌಕರರನ್ನು ವಜಾಗೊಳಿಸಿದ ಭಾರತೀಯ ಮೂಲದ ಸಿಇಒ!

ಈ ಜೂಂ ಕಾಲ್ ವಿಡಿಯೊ ಜಗತ್ತಿನಾದ್ಯಂತ ವೈರಲ್ ಆಗಿತ್ತು. ಸಿಇಒ ಗಾರ್ಗ್ ಅವರಿಗೆ ಕೊಂಚವೂ ಮಾನವೀಯತೆಯೇ ಇಲ್ಲ ಎನ್ನುವ ಆರೋಪವನ್ನು ಅಸಂಖ್ಯ ಮಂದಿ ಮಾಡಿದ್ದರು.
ಇದನ್ನೂ ಓದಿ: ಬೆತ್ತಲೆ ವಿಡಿಯೊ ಕಾಲ್ ಮಾಡಿ ಬ್ಲ್ಯಾಕ್ ಮೇಲ್ ಮಾಡುವ ಪ್ರಕರಣಗಳ ಹೆಚ್ಚಳ: ಸೈಬರ್ ಕ್ರೈಮ್ ಪೊಲೀಸರ ಎಚ್ಚರಿಕೆ
ಇದೀಗ ಗಾರ್ಗ್ ತಮ್ಮ ತಪ್ಪಿಗೆ ಕ್ಷಮೆ ಯಾಚಿಸಿದ್ದಾರೆ. ಸಂಸ್ಥೆಯ ಏಳಿಗೆಗಾಗಿ ದುಡಿದ ಮಂದಿಯನ್ನು ತಾವು ಚೆನ್ನಾಗಿ ನಡೆಸಿಕೊಳ್ಳಬೇಕಿತ್ತು. ಕನಿಷ್ಟ ಪಕ್ಷ ಕೆಲಸದಿಂದ ತೆಗೆದುಹಾಕುವ ವೇಳೆ ಬೇರೆ ರೀತಿಯ ಮಾನವೀಯ ದಾರಿಯನ್ನು ಹಿಡಿಯಬಹುದಾಗಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ವಾಟ್ಸಪ್ ವಿಡಿಯೋ ಕಾಲ್‌ನಲ್ಲಿ ಮಹಿಳೆ ಮುಂದೆ ಬೆತ್ತಲಾದ ವ್ಯಕ್ತಿ, ಕಳೆದುಕೊಂಡಿದ್ದು ಎಷ್ಟು ಗೊತ್ತ?