Online Desk
ಬೆಂಗಳೂರು: ಮಾಜಿ ಡಿಸಿಎಂ ಹಾಗೂ ಕಂದಾಯ ಸಚಿವ ಆರ್.ಅಶೋಕ್ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹರಿಹಾಯ್ದಿದೆ. ಡಿಸಿಎಂ ಹುದ್ದೆಯಿಂದ ಹಿಂಬಡ್ತಿ ಪಡೆದು ಹತಾಶಾರಾಗಿದ್ದಾರೆ ಎಂದು ಕಾಂಗ್ರೆಸ್ ಕಾಲೆಳೆದಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಮೇಕೆದಾಟು ಯೋಜನೆ’ ನಮ್ಮ ದೃಷ್ಟಿಯಲ್ಲಿ ಬೆಟ್ಟದಂತಹ ಆಘಾದವಾದ ಮಹತ್ವ ಉಳ್ಳದ್ದು. ಬಿಜೆಪಿಗರು ಅದನ್ನು ‘ಇಲಿ’ಯನ್ನು ಕಂಡಷ್ಟೇ ತಾತ್ಸಾರದಿಂದ ಕಾಣುತ್ತಾರೆ ಎನ್ನುವುದು ಆರ್ ಅಶೋಕ್ ಅವರ ಇಂದಿನ ಮಾತಿನ ಅರ್ಥ ಎಂದು ಚಾಟಿ ಬೀಸಿದೆ.
ಯೋಜನೆಯ ಬಗೆಗೆ ಬಿಜೆಪಿಗೆ ಇರುವ ನಿರ್ಲಕ್ಷ್ಯ, ಉದಾಸಿನತೆ ಅವರ ಮಾತು ಹಾಗೂ ಕ್ರಿಯೆಯಿಂದಲೇ ತಿಳಿಯುತ್ತದೆ. ಬಿಜೆಪಿಯ ವಿದೂಷಕರಾದ ಅಶೋಕ್ ಅವರೇ, ಕಾಂಗ್ರೆಸ್‌ನ ಹೊಲಗಳಿಗೆ ನೀರು ಕೊಡುವ ಹೇಳಿಕೆಯಿಂದ ಹಿನ್ನಡೆಯಾಗುತ್ತದೆ ಎಂಬ ನಿಮ್ಮ ಹೇಳಿಕೆ ಹಾಸ್ಯಾಸ್ಪದ ಎಂದಿದೆ.
ಡಿಸಿಎಂನಿಂದ ಹಿಂಬಡ್ತಿ ಪಡೆದು ಮೂಲೆಗುಂಪಾದ @RAshokaBJP ಅವರು ಹತಾಶೆಯಲ್ಲಿ ಏನೇನೋ ಮಾತಾಡುತ್ತಿದ್ದಾರೆ!
ತಮಗೆ ಕರೋನಾ ಪಾಸಿಟಿವ್ ಆಗಿದ್ದೇಕೆ? ಕದ್ದುಮುಚ್ಚಿ ನಮ್ಮ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಿರಾ?!
ಕೋವಿಡ್ ನಿಯಮ ಮುರಿದು ಕಾರ್ಯಕ್ರಮಗಳನ್ನು ಮಾಡುತ್ತಿರುವ ನಿಮ್ಮವರಿಂದ ಎಷ್ಟು ಊರಿಗೆ ಸೋಂಕು ಹಬ್ಬಿದೆ ಎಂಬುದನ್ನ ಅರಿಯಿರಿ.
3/3— Karnataka Congress (@INCKarnataka) January 17, 2022
ಇದನ್ನೂ ಓದಿ: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯಿಂದ ತಮಿಳುನಾಡಿಗೆ ಅನುಕೂಲ ಸಾಧ್ಯತೆ: ಆರ್ ಅಶೋಕ
ಕೋರ್ಟ್ ಸರ್ಕಾರದ ವಾದ ಆಲಿಸುತ್ತದೆಯೇ ಹೊರತು ವಿಪಕ್ಷಗಳ ಹೇಳಿಕೆಯಲ್ಲ. ಇಂತಹ ಪಲಾಯನವಾದ ಬಿಟ್ಟು, ನಿಮ್ಮಿಂದ ಮೇಕೆದಾಟು ಯೋಜನೆ ಜಾರಿಗೊಳಿಸಲು ಯೋಗ್ಯತೆ ಇಲ್ಲವೆಂದು ಘೋಷಿಸಿಕೊಳ್ಳಿ. ಡಿಸಿಎಂ ಹುದ್ದೆಯಿಂದ ಹಿಂಬಡ್ತಿ ಪಡೆದು ಮೂಲೆಗುಂಪಾದ ಅಶೋಕ್ ಅವರು ಹತಾಶೆಯಲ್ಲಿ ಏನೇನೋ ಮಾತಾಡುತ್ತಿದ್ದಾರೆ! ತಮಗೆ ಕರೋನಾ ಪಾಸಿಟಿವ್ ಆಗಿದ್ದೇಕೆ? ಕದ್ದುಮುಚ್ಚಿ ನಮ್ಮ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಿರಾ?! ಕೋವಿಡ್ ನಿಯಮ ಮುರಿದು ಕಾರ್ಯಕ್ರಮಗಳನ್ನು ಮಾಡುತ್ತಿರುವ ನಿಮ್ಮವರಿಂದ ಎಷ್ಟು ಊರಿಗೆ ಸೋಂಕು ಹಬ್ಬಿದೆ ಎಂಬುದನ್ನ ಅರಿಯಿರಿ ಎಂದು ಟ್ವಿಟ್ಟರ್ ನಲ್ಲಿ ಟೀಕಿಸಿದೆ.
‘ಮೇಕೆದಾಟು ಯೋಜನೆ’ ನಮ್ಮ ದೃಷ್ಟಿಯಲ್ಲಿ ಬೆಟ್ಟದಂತಹ ಆಘಾದವಾದ ಮಹತ್ವ ಉಳ್ಳದ್ದು.
ಬಿಜೆಪಿಗರು ಅದನ್ನು ‘ಇಲಿ’ಯನ್ನು ಕಂಡಷ್ಟೇ ತಾತ್ಸಾರದಿಂದ ಕಾಣುತ್ತಾರೆ ಎನ್ನುವುದು @RAshokaBJP ಅವರ ಇಂದಿನ ಮಾತಿನ ಅರ್ಥ.
ಯೋಜನೆಯ ಬಗೆಗೆ ಬಿಜೆಪಿಗೆ ಇರುವ ನಿರ್ಲಕ್ಷ್ಯ, ಉದಾಸಿನತೆ ಅವರ ಮಾತು ಹಾಗೂ ಕ್ರಿಯೆಯಿಂದಲೇ ತಿಳಿಯುತ್ತದೆ.
1/3— Karnataka Congress (@INCKarnataka) January 17, 2022
Read more
[wpas_products keywords=”deal of the day”]