Karnataka news paper

ಸಿದ್ದರಾಮಯ್ಯರನ್ನು ಸೈಡ್‌ಲೈನ್‌ ಮಾಡಲು ಡಿಕೆಶಿ ಪಾದಯಾತ್ರೆ: ಸಚಿವ ಅಶ್ವತ್ಥ ನಾರಾಯಣ್‌ ಟಾಂಗ್


ಹೈಲೈಟ್ಸ್‌:

  • ಸಿದ್ದರಾಮಯ್ಯ ಅವರನ್ನು ಸೈಡ್‌ಲೈನ್ ಮಾಡಲು ಡಿಕೆಶಿ ಯತ್ನ
  • ತಾವು ಮುಂದೆ ಬರಲು ಡಿಕೆಶಿ ಪ್ರಯತ್ನಿಸ್ತಿದ್ದಾರೆ
  • ಡಿ. ಕೆ. ಶಿವಕುಮಾರ್‌ ಹೇಳಿಕೆಯಲ್ಲಿ ಎಲ್ಲ ರೀತಿಯ ದೌರ್ಬಲ್ಯ ಇದೆ: ಅಶ್ವತ್ಥ ನಾರಾಯಣ್‌

ಬೆಂಗಳೂರು:ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಏನೆಲ್ಲಾ ಅಡೆ ತಡೆ ಇದೆ ಎನ್ನುವುದು ಡಿ. ಕೆ. ಶಿವಕುಮಾರ್‌ ಅವರಿಗೆ ಗೊತ್ತಿಲ್ಲ. ಆದ್ರೆ, ಸಿದ್ದರಾಮಯ್ಯ ಅವರನ್ನು ಸೈಡ್‌ಲೈನ್ ಮಾಡಿ, ಮುಂದೆ ಬರಲು ಪ್ರಯತ್ನಿಸ್ತಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ ಸಿಎನ್‌ ಅಶ್ವತ್ಥ ನಾರಾಯಣ್‌ ಹೇಳಿದರು.

ಬೆಂಗಳೂರಿನ ವಿಕಾಸಸೌಧದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರಿಗೆ ಮೇಕೆದಾಟು ಯೋಜನೆ ಆರಂಭಿಸಲು ಎಳ್ಳಷ್ಟೂ ಕಾಳಜಿ ಇಲ್ಲ. ಐದು ವರ್ಷ ಅಧಿಕಾರದಲ್ಲಿ ಫಿಜಿಬಲಿಟಿ ಆಗಲಿ, ಡಿಪಿಆರ್ ಕೂಡ ಮಾಡಲಿಲ್ಲ. ಯೋಜನೆಯನ್ನು ಬಿಜೆಪಿ ಮಾತ್ರವೇ ಅನುಷ್ಠಾನಕ್ಕೆ ತರಲು ಸಾಧ್ಯ. ಡಿ. ಕೆ. ಶಿವಕುಮಾರ್‌ ಹೇಳಿಕೆಯಲ್ಲಿ ಎಲ್ಲ ರೀತಿಯ ದೌರ್ಬಲ್ಯ ಇದೆ. ನಾನು ನಾಡಿನ ಹೆಮ್ಮೆಯ ಮಗನಾಗಿ, ನೆಲ, ಜಲಕ್ಕಾಗಿ ಪರಿಶ್ರಮ ಮಾಡ್ತೀನಿ ಎಂದರು.

ಮೇಕೆದಾಟು: ಪರಿಸರವಾದಿಗಳಿಂದ ವಿರೋಧ; ಯೋಜನೆ ಜಾರಿಗೆ ಬೀರುತ್ತಾ ಪರಿಣಾಮ?
ರಾಮನಗರದಲ್ಲಿ ಕೆಲಸ ಮಾಡಿ ತೋರಿಸಿ. ನಾನು ಬಹಳ ದಿನ ಅಧಿಕಾರದಲ್ಲಿ ಇಲ್ಲ, ಅವರು ತುಂಬಾ ವರ್ಷಗಳಿಂದ ಅಧಿಕಾರದಲ್ಲಿದ್ದಾರೆ. ಅವರು ಅಭಿವೃದ್ಧಿ ವಿಚಾರವಾಗಿ ಕೆಲಸ ಮಾಡಿ ತೋರಿಸಲಿ ಎಂದು ಅಶ್ವತ್ಥ ನಾರಾಯಣ್‌ ಸವಾಲೆಸೆದರು.

ಇನ್ನು, ಮಲ್ಲೇಶ್ವರಂ ಮೂಲಕ ಮೇಕೆದಾಟು ಪಾದಯಾತ್ರೆ ವಿಚಾರವಾಗಿ ಪ್ರತಿಕ್ರಿಯಿಸಿದ ಅಶ್ವತ್ಥ ನಾರಾಯಣ್, ಅವರು ಏನು ಮಾತನಾಡಿದ್ದಾರೆ ನನಗೆ ಗೊತ್ತಿಲ್ಲ. ಅವರ ಪಕ್ಷಕ್ಕೆ ಮತ್ತು ಅವರ ಪರಿಸ್ಥಿತಿಗೆ ಬಿಟ್ಟಿದ್ದು. ಯಾವ ಪರಿಸ್ಥಿತಿಯಲ್ಲಿ ಹೇಗೆ ಅನುಕೂಲ ಇದೆಯೋ ಬರಲಿ, ಅವರಿಗೆ ಸ್ವಾಗತ. ಅವರಿರುವ ಸದಾಶಿವನಗರವೂ ನಮ್ಮ ಕ್ಷೇತ್ರ ವ್ಯಾಪ್ತಿಗೇ ಬರಲಿದೆ ಎಂದು ಸಚಿವರು ಹೇಳಿದರು.

ವೀಕೆಂಡ್‌ ಕರ್ಫ್ಯೂ: ಒತ್ತಡಕ್ಕೆ ಮಣಿಯಲ್ಲ, ತಜ್ಞರ ಸಲಹೆಯಂತೆ ನಡೆಯುತ್ತೇವೆ; ಆರ್‌. ಅಶೋಕ್
ಎಚ್‌ಡಿ ರೇವಣ್ಣ ಅವರ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಹೊಳೆನರಸೀಪುರದಲ್ಲಿ 8 ಡಿಗ್ರಿ ಕಾಲೇಜು, 6 ಪಿಜಿ ಕಾಲೇಜು, 4 ಪಾಲಿಟೆಕ್ನಿಕ್‌ ಕಾಲೇಜು, ಒಂದು ಇಂಜಿನಿಯರಿಂಗ್‌ ಕಾಲೇಜು ಇದೆ. ಆದರೂ, ನಮಗೆ ದುಡ್ಡು ಕೊಟ್ಟಿಲ್ಲ ಅಂತ ಹೇಳಿದ್ದಾರೆ. 68.40 ಕೋಟಿ ರೂ. ಹಣ ನೀಡಲಾಗಿದೆ. ಎಕ್ಯುಪ್‌ಮೆಂಟಿಗೆ 96 ಲಕ್ಷ ರೂ. ಕೊಡಲಾಗಿದೆ. 1,786 ಕೋಟಿ ರೂ. ಖರ್ಚು ಮಾಡಿದ್ದು, 132 ಕೋಟಿ‌ ರೂ. ಅನ್ನು ಹಾಸನಕ್ಕೆ, ಹೊಳೆನರಸೀಪುರಕ್ಕೆ 65 ಕೋಟಿ ರೂ. ನೀಡಲಾಗಿದೆ. ಶೇ.5ರಷ್ಟು ಹಣವನ್ನು ಒಂದೇ ಕ್ಷೇತ್ರಕ್ಕೆ ನೀಡಲಾಗಿದೆ ಎಂದರು.

ಹೋಟೆಲ್ ಮಾಲೀಕರ ಭೇಟಿ ವಿಚಾರವಾಗಿ ಮಾತನಾಡಿದ ಸಚಿವರು, ಕರ್ಪ್ಯೂ ವಿಚಾರವಾಗಿ ಅವರೆಲ್ಲರೂ ಮನವಿ ಮಾಡಿದ್ದಾರೆ. ಶುಕ್ರವಾರ ಸಿಎಂ ಬಸವರಾಜ ಬೊಮ್ಮಾಯಿ ಅವರು ರಿವ್ಯೂ ಮಾಡಲಿದ್ದಾರೆ. ಆ ಬಳಿಕ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

ಪಾದಯಾತ್ರೆಯಲ್ಲಿ ಪಾಲ್ಗೊಂಡವರ ವಿರುದ್ಧ ಕೇಸ್; ಬಸವರಾಜ ಬೊಮ್ಮಾಯಿ ಭೇಟಿ ಮಾಡಲಿರುವ ಕಾಂಗ್ರೆಸ್ ಮುಖಂಡರು



Read more

[wpas_products keywords=”deal of the day sale today offer all”]