PTI
ನವದೆಹಲಿ: ಪೋರ್ನ್ ಚಿತ್ರ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಹಾಟ್ ನಟಿ ಪೂನಂ ಪಾಂಡೆ ಅವರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಬಂಧನದಿಂದ ರಕ್ಷಣೆ ನೀಡಿದೆ.
ತಮಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬಾಂಬೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಪೂನಂ ಪಾಂಡೆ ಸಲ್ಲಿಸಿದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿನೀತ್ ಸರಣ್ ಮತ್ತು ಬಿ ವಿ ನಾಗರತ್ನ ಅವರ ಪೀಠ, ಈ ಸಂಬಂಧ ಮಹಾರಾಷ್ಟ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ ಮತ್ತು ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳಬಾರದು ಎಂದು ಹೇಳಿದೆ.
ಇದನ್ನು ಓದಿ: ನಾನೆಂದೂ ಅಶ್ಲೀಲ ಚಿತ್ರ ತಯಾರಿಕೆಯಲ್ಲಿ ತೊಡಗಿರಲಿಲ್ಲ: ಮೊದಲ ಬಾರಿಗೆ ರಾಜ್ ಕುಂದ್ರಾ ಹೇಳಿಕೆ
ಪೋರ್ನ್ ಚಿತ್ರ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶೆರ್ಲಿನ್ ಚೋಪ್ರಾ ಜೊತೆಗೆ ಪಾಂಡೆ ಅವರನ್ನು ಆರೋಪಿಯನ್ನಾಗಿ ಮಾಡಲಾಗಿದೆ.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರು ಭಾಗಿಯಾಗಿರುವ ಅಶ್ಲೀಲ ಚಿತ್ರಗಳ ತಯಾರಿಕೆ ಮತ್ತು ಅವುಗಳನ್ನು ಕೆಲವು ಆಪ್‌ಗಳ ಮೂಲಕ ಹರಿಬಿಡುವ ಪ್ರಕರಣದಲ್ಲಿ ಪೂನಂ ಪಾಂಡೆ ಸಹ ಆರೋಪಿಯಾಗಿದ್ದಾರೆ.
ನವೆಂಬರ್ 25, 2021 ರಂದು ಪೂನಂ ಪಾಂಡೆಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು.
Read more…
[wpas_products keywords=”party wear dress for women stylish indian”]