Karnataka news paper

ಮಾರ್ಚ್ ನಿಂದ ದೇಶಾದ್ಯಂತ ೧೨-೧೫ ವರ್ಷದ ಮಕ್ಕಳಿಗೂ ಕೋವಿಡ್ ಲಸಿಕೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ


Online Desk

ಹುಬ್ಬಳ್ಳಿ: ಬರುವ ಮಾರ್ಚ್ ತಿಂಗಳಲ್ಲಿ ದೇಶದ್ಯಾಂತ ೧೨-೧೫ ವರ್ಷದ ಮಕ್ಕಳಿಗೂ ಸಹ ಕೋವಿಡ್ ಲಸಿಕಾ ನೀಡುವ ಪ್ರಕ್ರಿಯೆ ಆರಂಭವಾಗಲಿದ್ದು, ಮುಂದಿನ ಎಂಟು ತಿಂಗಳಲ್ಲಿ ದೇಶದ ಎಲ್ಲ ನಾಗರಿಕರಿಗೆ ಸಂಪೂರ್ಣವಾಗಿ ಲಸಿಕೆ ನೀಡುವ ಮೂಲಕ ಬೃಹತ್ ಸಾಧನೆ ಮಾಡಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರು ಮಂಗಳವಾರ ಹೇಳಿದ್ದಾರೆ.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಹಾಗೂ ಕೇಶ್ವಾಪೂರದ ಪಾತಿಮಾ ಪ್ರೌಢ ಶಾಲೆ ಸಹಯೋಗದಲ್ಲಿ ೧೫- ೧೮ ವರ್ಷದ ಮಕ್ಕಳ ಲಸಿಕಾಕರಣಕ್ಕೆ ಚಾಲನೆ ನೀಡಿ ಪಹ್ಲಾದ್ ಜೋಶಿ ಮಾತನಾಡಿದರು.

ಇದನ್ನು ಓದಿ: ಮಾರ್ಚ್‌ನಿಂದ 12-14 ವರ್ಷದವರಿಗೆ ಲಸಿಕೆ ಹಾಕುವ ಸಾಧ್ಯತೆ: ಸರ್ಕಾರದ ಉನ್ನತ ತಜ್ಞ​

ದೇಶದಲ್ಲಿ ಈವರೆಗೆ ೧೫೮ ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಅಂದಾಜು ೬೬ ಕೋಟಿಗೂ ಹೆಚ್ಚು ಮಂದಿ ಎರಡು ಡೋಸ್ ಲಸಿಕೆ ಪಡೆದಿದ್ದಾರೆ. ಭಾರತ ದೇಶ ಬೇರೆ ದೇಶಗಳಿಗೆ ಹೋಲಿಸಿದರೆ ೧೦ ಪಟ್ಟು ಹೆಚ್ಚು ಲಸಿಕೆ ನೀಡಿ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದೆ. ಜನವರಿ ೩ ರಿಂದ ೧೫ರಿಂದ ೧೮ ವರ್ಷದ ಕಿರಿಯರಗೆ ಲಸಿಕೆ ನೀಡಲು ಪ್ರಾರಂಭಿಸಿದ್ದು, ಈವರೆಗೆ ದೇಶದಲ್ಲಿ ೩.೩೧ ಕೋಟಿಗೂ ಹೆಚ್ಚು ಕಿರಿಯರಿಗೆ ಲಸಿಕೆ ನೀಡಿ ಯಶಸ್ವಿಯಾಗಿದ್ದೇವೆ ಎಂದರು.

ಅದೇ ರೀತಿ ಕೊರೋನಾ ಸಂದಿಗ್ಧ ಸಮಯದಲ್ಲಿ ವಿಶ್ವದಲ್ಲಿ ಅತೀ ಹೆಚ್ಚು ಉಚಿತ ಪಡಿತರ ನೀಡಿದ ಹೆಗ್ಗಳಿಕೆ ಭಾರತದ್ದು, ಇಲ್ಲಿಯ ವರೆಗೆ ಮೂರು ಲಕ್ಷ ಕೋಟಿ ರೂ. ಉಚಿತ ಪಡಿತರ ಜನಸಾಮಾನ್ಯರಿಗೆ ನೀಡಲಾಗಿದೆ ಎಂದು ವಿವರಿಸಿದರು.

ಜಿಲ್ಲೆಯಾದ್ಯಂತ ಅತೀ ಹೆಚ್ಚು ಜನರು ಲಸಿಕೆ ಪಡೆದಿದ್ದಾರೆ. ಇದಕ್ಕೆ ಮೂಲ ಕಾರಣ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಕಾರ್ಯಕರ್ತರ ಶ್ರಮ. ಸರ್ಕಾರದ ಪರವಾಗಿ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.



Read more

[wpas_products keywords=”deal of the day”]