Karnataka news paper

ಅಯ್ಯೋ.. 3 ತಿಂಗಳ ಹಿಂದೆಯಷ್ಟೇ ‘ಇವರು ನನ್ನವರು’, ‘ಹೆಮ್ಮೆಯ ಪತ್ನಿ’ ಅಂತ ಬೀಗಿದ್ದ ಐಶ್ವರ್ಯ!


ಹೈಲೈಟ್ಸ್‌:

  • ಐಶ್ವರ್ಯ-ಧನುಷ್ ದಾಂಪತ್ಯ ಜೀವನ ಅಂತ್ಯ
  • ಮೂರು ತಿಂಗಳ ಹಿಂದೆಯಷ್ಟೇ ‘ಹೆಮ್ಮೆಯ ಪತ್ನಿ’ ಎಂದಿದ್ದ ಐಶ್ವರ್ಯ
  • ಮೂರು ತಿಂಗಳಲ್ಲಿ ದಂಪತಿ ಮಧ್ಯೆ ಬಿರುಕು ಮೂಡಲು ಕಾರಣವೇನು?

ಬಾಲಿವುಡ್‌ನಲ್ಲೂ ಮಿಂಚುತ್ತಿರುವ ತಮಿಳಿನ ಪ್ರಖ್ಯಾತ ನಟ ಧನುಷ್ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದೆ. ನಟ ಧನುಷ್ ಮತ್ತು ಐಶ್ವರ್ಯ ರಜನಿಕಾಂತ್ ಬಾಳಲ್ಲಿ ಬಿರುಕು ಮೂಡಿದೆ. 18 ವರ್ಷಗಳ ಕಾಲ ಜೊತೆಯಾಗಿ, ಹಿತವಾಗಿ ಸಂಸಾರ ನಡೆಸಿದ್ದ ಐಶ್ವರ್ಯ ಮತ್ತು ಧನುಷ್ ಇದೀಗ ಬೇರೆ ಬೇರೆಯಾಗಲು ನಿರ್ಧರಿಸಿದ್ದಾರೆ. ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆಯಲು ಐಶ್ವರ್ಯ ಮತ್ತು ಧನುಷ್ ಮುಂದಾಗಿದ್ದಾರೆ. ತಮ್ಮ ಈ ನಿರ್ಣಯವನ್ನು ಧನುಷ್ ಹಾಗೂ ಐಶ್ವರ್ಯ ಸಾಮಾಜಿಕ ಜಾಲತಾಣದ ಮುಖಾಂತರ ಘೋಷಿಸಿದ್ದಾರೆ.

ಬೇರೆ ಬೇರೆಯಾಗುವ ನಿರ್ಧಾರವನ್ನು ಧನುಷ್ ಹಾಗೂ ಐಶ್ವರ್ಯ ಏಕಾಏಕಿ ತೆಗೆದುಕೊಂಡಿದ್ದು ಯಾಕೆ ಎಂಬುದರ ಬಗ್ಗೆ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಹೀಗಿರುವಾಗಲೇ ಮೂರು ತಿಂಗಳ ಹಿಂದೆಯಷ್ಟೇ ಐಶ್ವರ್ಯ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಾಕಿಕೊಂಡಿದ್ದ ಒಂದು ಪೋಸ್ಟ್ ವೈರಲ್ ಆಗುತ್ತಿದೆ.

Dhanush Divorce: ರಜನಿಕಾಂತ್‌ ಪುತ್ರಿ ಜೊತೆಗಿನ ದಾಂಪತ್ಯ ಬದುಕಿಗೆ ವಿದಾಯ ಹೇಳಿದ ನಟ ಧನುಷ್!
ಐಶ್ವರ್ಯ ಹಾಕಿಕೊಂಡಿದ್ದ ಪೋಸ್ಟ್ ಏನು?
ಮೂರು ತಿಂಗಳ ಹಿಂದೆ.. ಅಂದ್ರೆ, ಅಕ್ಟೋಬರ್ 25 ರಂದು ಐಶ್ವರ್ಯ ಒಂದು ಪೋಸ್ಟ್‌ಅನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಆಗಷ್ಟೇ ತಂದೆ ರಜನಿಕಾಂತ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಅದೇ ಪ್ರಶಸ್ತಿ ಪ್ರದಾನ ಸಮಾರಂಭದಲ್ಲೇ ಪತಿ ಧನುಷ್ ‘ಅಸುರನ್’ ಚಿತ್ರದ ನಟನೆಗಾಗಿ ‘ಅತ್ಯುತ್ತಮ ನಟ’ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ್ದರು. ಮಾವ ಹಾಗೂ ಅಳಿಯ ಒಟ್ಟಿಗೆ ರಾಷ್ಟ್ರೀಯ ಪ್ರಶಸ್ತಿ ಪಡೆದು ಇತಿಹಾಸ ಸೃಷ್ಟಿಸಿದ್ದರು. ಇದೇ ಖುಷಿಯಲ್ಲಿ ತಂದೆ ರಜನಿಕಾಂತ್ ಹಾಗೂ ಪತಿ ಧನುಷ್ ಜೊತೆಗೆ ಐಶ್ವರ್ಯ ಫೋಟೋ ಕ್ಲಿಕ್ ಮಾಡಿಕೊಂಡಿದ್ದರು. ಅದೇ ಫೋಟೋಗಳ ಜೊತೆಗೆ ‘’ಇವರು ನನ್ನವರು.. ಇದು ಇತಿಹಾಸ’’ ಎಂದು ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ, ಹೆಮ್ಮೆಯ ಪುತ್ರಿ ಹಾಗೂ ಹೆಮ್ಮೆಯ ಪತ್ನಿ ಎಂಬ ಹ್ಯಾಶ್‌ಟ್ಯಾಗ್‌ಅನ್ನೂ ಐಶ್ವರ್ಯ ಹಾಕಿದ್ದರು.

ಕಿರಿಯ ಪುತ್ರಿ ಸೌಂದರ್ಯ ವಿಚ್ಛೇದನ ಪಡೆದಾಗ ರಜನಿಕಾಂತ್ ಪಟ್ಟ ಸಂಕಟ ಅಷ್ಟಿಷ್ಟಲ್ಲ! ಇನ್ನು ಈಗ…
ಈ ಖುಷಿ ಹಂಚಿಕೊಂಡ ಮೂರು ತಿಂಗಳಲ್ಲಿ ಧನುಷ್ ಹಾಗೂ ಐಶ್ವರ್ಯ ಬೇರೆ ಬೇರೆಯಾಗಿದ್ದಾರೆ. ಹೀಗಾಗಿ, ‘’ಮೂರು ತಿಂಗಳಿನಲ್ಲಿ ಅಂಥದ್ದೇನಾಯ್ತು?’’, ‘’ಬೇರೆ ಬೇರೆಯಾಗುವ ಕುರಿತು ಮತ್ತೊಮ್ಮೆ ಯೋಚಿಸಿ’’, ‘’ನೀವಿಬ್ಬರು ಒಟ್ಟಾಗಿರುವುದೇ ನಮ್ಮ ಆಸೆ’’, ‘’ನೀವಿಬ್ಬರು ಮತ್ತೆ ಜೊತೆಯಾಗಬೇಕು’’ ಅಂತೆಲ್ಲಾ ಇದೇ ಪೋಸ್ಟ್‌ಗೆ ಅಭಿಮಾನಿಗಳು ಕಾಮೆಂಟ್ ಹಾಕುತ್ತಿದ್ದಾರೆ.

ಅಂದು ಅಣ್ಣ, ಇಂದು ತಮ್ಮ; ನಟ ಧನುಷ್ ಫ್ಯಾಮಿಲಿಯಲ್ಲಿ ವಿಚ್ಛೇದನ ಇದೇ ಮೊದಲಲ್ಲ!
ಐಶ್ವರ್ಯರಿಂದ ದೂರಾಗುವ ಕುರಿತು ಧನುಷ್ ಟ್ವೀಟ್
ಐಶ್ವರ್ಯರಿಂದ ದೂರಾಗುವ ಕುರಿತು ನಟ ಧನುಷ್ ಟ್ವೀಟ್ ಮಾಡಿ, ‘’18 ವರ್ಷಗಳ ಕಾಲ ಸ್ನೇಹಿತರಂತೆ, ದಂಪತಿಗಳಂತೆ, ಪೋಷಕರಂತೆ ಮತ್ತು ಪರಸ್ಪರ ಹಿತೈಷಿಗಳಾಗಿದ್ದೆವು. ನಮ್ಮ ಪ್ರಯಾಣವು ಬೆಳವಣಿಗೆ, ತಿಳುವಳಿಕೆ, ಹೊಂದಾಣಿಕೆ ಮತ್ತು ಹೊಂದಿಕೊಳ್ಳುವಿಕೆಯಿಂದ ಕೂಡಿದೆ. ಇಂದು ನಾವು ನಮ್ಮ ಮಾರ್ಗಗಳನ್ನು ಪ್ರತ್ಯೇಕಗೊಳಿಸುವಿಕೆಯ ಜಾಗದಲ್ಲಿ ಬಂದು ನಿಂತಿದ್ದೇವೆ. ಜೋಡಿಯಾಗಿದ್ದ ನಾವು ಬೇರೆಯಾಗಲು ಮತ್ತು ನಮ್ಮನ್ನು ನಾವು ಇನ್ನಷ್ಟು ಚೆನ್ನಾಗಿ ಅರ್ಥೈಸಿಕೊಳ್ಳಲು, ಸಮಯ ಕೊಡಲು ನಾನು ಮತ್ತು ಐಶ್ವರ್ಯ ನಿರ್ಧರಿಸಿದ್ದೇವೆ. ದಯವಿಟ್ಟು ನಮ್ಮ ನಿರ್ಧಾರವನ್ನು ಗೌರವಿಸಿ ಮತ್ತು ಇದನ್ನು ನಿಭಾಯಿಸಲು ನಮಗೆ ಬೇಕಿರುವ ಗೌಪ್ಯತೆಯನ್ನು ನೀಡಿ. ಓಂ ನಮಃ ಶಿವಾಯ’’ ಎಂದು ಬರೆದುಕೊಂಡಿದ್ದರು.

Dhanush Divorce: ಈ ವಿಡಿಯೋ ನೋಡಿದ್ರೆ ಧನುಷ್ ಅಭಿಮಾನಿಗಳ ಕಣ್ಣು ಒದ್ದೆಯಾಗದೇ ಇರದು!
ಹಾಗ್ನೋಡಿದ್ರೆ, ಐಶ್ವರ್ಯ ಹಾಗೂ ಧನುಷ್ ಪ್ರೀತಿಸಿ ಮದುವೆಯಾದವರು. 2004ರಲ್ಲಿ ಐಶ್ವರ್ಯ ಹಾಗೂ ಧನುಷ್ ಅವರ ಮದುವೆ ನಡೆದಿತ್ತು. ಈ ದಂಪತಿಗೆ ಯಾತ್ರ ಮತ್ತು ಲಿಂಗಾ ಎಂಬ ಇಬ್ಬರು ಮಕ್ಕಳಿದ್ದಾರೆ.

Dhanush-Aishwaryaa Divorce: ರಜನಿಕಾಂತ್ ಪುತ್ರಿಯನ್ನ ಧನುಷ್ ಮೊದಲು ಭೇಟಿ ಆಗಿದ್ದೆಲ್ಲಿ?





Read more

[wpas_products keywords=”deal of the day party wear dress for women stylish indian”]