Karnataka news paper

ಕೋವಿಡ್-19 ಸಾಂಕ್ರಾಮಿಕದಿಂದ 16 ಕೋಟಿ ಮಂದಿ ಬಡತನಕ್ಕೆ!


PTI

ನವದೆಹಲಿ: ಕೋವಿಡ್-19 ನ ಮೊದಲ ಎರಡು ವರ್ಷಗಳಲ್ಲಿ ಮನುಕುಲದಲ್ಲಿ ಶೇ.99 ರಷ್ಟು ಮಂದಿಯ ಆದಾಯ ಕಡಿಮೆಯಾಗಿದ್ದು, 16 ಕೋಟಿ ಮಂದಿ ಬಡತನದ ದವಡೆಗೆ ಸಿಲುಕಿದ್ದಾರೆ. ಹೊಸ ಅಧ್ಯಯನ ವರದಿಯ ಪ್ರಕಾರ, ವಿಶ್ವದ 10 ಶ್ರೀಮಂತರ ಆಸ್ತಿ, ಸಂಪತ್ತು 1.5 ಟ್ರಿಲಿಯನ್ ಡಾಲರ್ ಗೆ ದ್ವಿಗುಣಗೊಂಡಿದೆ.

ಇನಿಕ್ವಾಲಿಟಿ ಕಿಲ್ಸ್ ಎಂಬ ಶೀರ್ಷಿಕೆಯಡಿ ವರದಿ ಪ್ರಕಟವಾಗಿದ್ದು, ವಿಶ್ವದ ಆರ್ಥಿಕ ವೇದಿಕೆಯಾಗಿರುವ ಡಾವೋಸ್ ಅಜೆಂಡಾ ಶೃಂಗಸಭೆಯಲ್ಲಿ ಬಿಡುಗಡೆಯಾಗಿದ್ದು, ಪ್ರತಿ ನಿತ್ಯ ಬಡತನದಿಂದ 21,000 ಜನರು ಸಾವನ್ನಪ್ಪುತ್ತಿದ್ದಾರೆ ಪ್ರತಿ ನಾಲ್ಕು ಸೆಕೆಂಡ್ ಗೆ ಓರ್ವರು ಸಾವನ್ನಪ್ಪುತ್ತಿದ್ದಾರೆ ಎಂದು ಹೇಳಿದೆ.

ಆರೋಗ್ಯ ಸೇವೆಗಳ ಅಲಭ್ಯತೆ, ಲಿಂಗ ತಾರತಮ್ಯ, ಹಸಿವು, ಹವಾಮಾನ ಬದಲಾವಣೆಯ ಕಾರಣದಿಂದಾಗಿ ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿ ಹೇಳಿದೆ.

ಆದರೆ ಇದಕ್ಕೆ ತದ್ವಿರುದ್ಧವಾಗಿ ಇದೇ ಕೋವಿಡ್-19 ನ ಎರಡು ವರ್ಷಗಳ ಅವಧಿಯಲ್ಲಿ ಜಗತ್ತಿನ 10 ಶ್ರೀಮಂತ ವ್ಯಕ್ತಿಗಳು ತಮ್ಮ ಸಂಪತ್ತಿನಲ್ಲಿ ಪ್ರತಿ ಸೆಕೆಂಡ್ ಗೆ 15,000 ಡಾಲರ್ ನಷ್ಟು ಏರಿಕೆ ಕಂಡಿತ್ತು. ಈ 10 ಮಂದಿ ನಾಳೆಯೇ ತಮ್ಮ ಸಂಪತ್ತಿನ ಶೇ.99.999 ರಷ್ಟು ಕಳೆದುಕೊಂಡರೂ ಈ ಪ್ರಪಂಚದಲ್ಲಿನ ಮಂದಿಯ ಪೈಕಿ ಶೇ.99 ರಷ್ಟು ಮಂದಿಗಿಂತಲೂ ಶ್ರೀಮಂತರಾಗಿರುತ್ತಾರೆ ಎಂದು ಆಕ್ಸ್ಫಾಮ್ ಇಂಟರ್ನ್ಯಾಷನಲ್ಸ್ ನ ಕಾರ್ಯನಿರ್ವಾಹಕ ನಿರ್ದೇಶಕ ಗೇಬ್ರಿಯೆಲಾ ಬುಚರ್ ಹೇಳಿದ್ದಾರೆ. ಆಕ್ಸ್ಫಾಮ್ ನ ಪ್ರಕಾರ ಬಿಲಿಯನೇರ್ ಗಳ ಆಸ್ತಿ ಕಳೆದ 14 ವರ್ಷಗಳಿಗೆ ಹೋಲಿಕೆ ಮಾಡಿದರೆ ಕೋವಿಡ್-19 ಪ್ರಾರಂಭವಾದಾಗಿನಿಂದಲೂ ಏರಿಕೆಯಾಗಿದೆ.



Read more…

[wpas_products keywords=”deal of the day”]