Karnataka news paper

‘ರೋಹಿತ್‌, ರಾಹುಲ್‌ ನಾಯಕತ್ವಕ್ಕೆ ಲಾಯಕ್ಕಿಲ್ಲ’ ಕೊಹ್ಲಿಯೇ ಸ್ಟಾರ್ ಎಂದ ಲತಿಫ್‌!


ಹೈಲೈಟ್ಸ್‌:

  • ಭಾರತ ಟೆಸ್ಟ್‌ ತಂಡದ ನಾಯಕತ್ವಕ್ಕೆ ರೋಹಿತ್‌, ರಾಹುಲ್‌ ಸೂಕ್ತರಲ್ಲ: ಲತಿಫ್‌
  • ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರು ಪಂದ್ಯಗಳ ಓಡಿಐ ಸರಣಿ.
  • ವಿರಾಟ್‌ ಕೊಹ್ಲಿ ಟೆಸ್ಟ್ ನಾಯಕತ್ವಕ್ಕೆ ವಿದಾಯ ಹೇಳಬಾರದಿತ್ತೆಂದ ರಶೀದ್‌ ಲತಿಫ್‌.

ಹೊಸದಿಲ್ಲಿ: ಭಾರತ ಟೆಸ್ಟ್‌ ತಂಡದ ನಾಯಕತ್ವದಿಂದ ವಿರಾಟ್‌ ಕೊಹ್ಲಿ ಕೆಳಗಿಳಿದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪಾಕಿಸ್ತಾನ ತಂಡದ ಮಾಜಿ ನಾಯಕ ರಶೀದ್‌ ಲತಿಫ್‌, ದೀರ್ಘಾವಧಿ ಸ್ವರೂಪದ ನಾಯಕತ್ವಕ್ಕೆ ರೋಹಿತ್‌ ಶರ್ಮಾ ಹಾಗೂ ಕೆ.ಎಲ್‌ ರಾಹುಲ್‌ ಸೂಕ್ತ ಅಭ್ಯರ್ಥಿಗಳಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಳೆದ ಶನಿವಾರ ವಿರಾಟ್‌ ಕೊಹ್ಲಿ ಭಾರತ ಟೆಸ್ಟ್‌ ತಂಡದ ನಾಯಕತ್ವದಿಂದ ಕೆಳಗೆ ಇಳಿಯುತ್ತಿರುವ ನಿರ್ಧಾರ ಪ್ರಕಟಿಸಿದ್ದರು. ಇದರ ಬೆನ್ನಲ್ಲೆ ಕೊಹ್ಲಿ ನಾಯಕತ್ವದ ಸಾಧನೆಯನ್ನು ಹಲವು ಮಾಜಿ ಹಾಗೂ ಹಾಲಿ ಆಟಗಾರರು ಮುಕ್ತಕಂಠದಿಂದ ಗುಣಗಾನ ಮಾಡಿದ್ದರು ಹಾಗೂ ಅಭಿನಂದನೆ ಸಲ್ಲಿಸಿದ್ದರು.

ಅದರಂತೆ ರೋಹಿತ್‌ ಶರ್ಮಾ, “ನನಗೆ ಶಾಕ್‌ ಆಗಿದೆ…ಆದರೆ ಭಾರತ ತಂಡದ ನಾಯಕನಾಗಿ ನಿಮ್ಮ ಯಶಸ್ಸಿಗೆ ಅಭಿನಂದನೆ. ಮುಂದಿನ ನಿಮ್ಮ ಪಯಣಕ್ಕೆ ಶುಭವಾಗಲಿ,” ಎಂದು ಟ್ವೀಟ್‌ ಮಾಡಿದ್ದರು. ನಂತರ ಕೆ.ಎಲ್‌ ರಾಹುಲ್, “ಪ್ರತಿಯೊಂದು ಅರ್ಥದಲ್ಲಿಯೂ ನಾಯಕ. ನಾಯಕನಾಗಿ ನೀವು ಮಾಡಿರುವ ಸಾಧನೆಗೆ ಎಷ್ಟೇ ಧನ್ಯವಾದ ಹೇಳಿದರೂ ಸಾಲದು, ವೆಲ್‌ ಡನ್‌ ನಾಯಕ ಕೊಹ್ಲಿ,” ಎಂದು ಟ್ವೀಟ್‌ ಮಾಡಿದ್ದರು.

ರಾಹುಲ್‌-ಧವನ್‌ ಓಪನರ್ಸ್‌! ಮೊದಲನೇ ಓಡಿಐಗೆ ಭಾರತ ಸಂಭಾವ್ಯ ಪ್ಲೇಯಿಂಗ್‌ XI ಇಂತಿದೆ..

“ವಿರಾಟ್‌ ಕೊಹ್ಲಿ ಜಾಗತಿಕ ಸ್ಟಾರ್‌. ಯಾರನ್ನು ನಾಯಕನನ್ನಾಗಿ ಮಾಡುತ್ತೀರಿ? ರೋಹಿತ್‌ ಫಿಟ್‌ ಇಲ್ಲ. ಈ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಸಂಪೂರ್ಣವಾಗಿ ಹೊರಗುಳಿದಿದ್ದಾರೆ. ಕೆ.ಎಲ್‌ ರಾಹುಲ್‌ಗೆ ನಾಯಕತ್ವದ ಸಾಮರ್ಥ್ಯವಿಲ್ಲ. ಕೊಹ್ಲಿ ನಾಯಕತ್ವ ತ್ಯಜಿಸಿದ ಬಳಿಕ ಪ್ರತಿಯೊಬ್ಬರ ಪ್ರತಿಕ್ರಿಯೆಗಳನ್ನು ನಾನು ಗಮನಿಸಿದ್ದೇನೆ. ರೋಹಿತ್‌, ರಾಹುಲ್‌ ಎಲ್ಲರೂ ಸ್ವೀಕರಿಸಿದ್ದಾರೆ. ನಾಯಕನಾಗಿ ಇಷ್ಟೊಂದು ಸಾಧನೆ ಮಾಡಿರುವ ಅಟಗಾರನ ವಿದಾಯವನ್ನು ಹೇಗೆ ಸ್ವೀಕರಿಸುತ್ತೀರಿ. ಹಾಗಾದರೆ ವಿರಾಟ್‌ ಕೊಹ್ಲಿ ನಾಯಕತ್ವ ತೊರೆಯುವುದಕ್ಕಾಗಿ ನೀವೆಲ್ಲಾ ಕಾಯುತ್ತಿದ್ದೀರಾ?” ಎಂದು ತಮ್ಮ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಲತಿಫ್‌ ಪ್ರಶ್ನಿಸಿದ್ದಾರೆ.

IND vs SA: ಮೊದಲನೇ ಓಡಿಐಗೆ ಭಾರತ ಪ್ಲೇಯಿಂಗ್‌ XI ಆರಿಸಿದ ಜಾಫರ್‌!

ವಿರಾಟ್‌ ಕೊಹ್ಲಿ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಅವರ ನಡುವಿನ ಘಟನೆ ನಡೆಯಬಾರದಿತ್ತೆಂದ ಲತಿಫ್‌, ಇದೀಗ ವಿರಾಟ್‌ ಕೊಹ್ಲಿ ದೀರ್ಘಾವಧಿ ನಾಯಕನಾಗಿ ಉಳಿಯಲಿಲ್ಲ. ಇದೀಗ ಮುಕ್ತವಾಗಿ ಬ್ಯಾಟಿಂಗ್‌ ಪ್ರದರ್ಶನ ತೋರಲು ವಿರಾಟ್‌ ಕೊಹ್ಲಿ ಸ್ವತಂತ್ರ ಸಿಕ್ಕಿದೆ. ಇದೀಗ ಅವರು ತಮ್ಮ ಸಾಮರ್ಥ್ಯವೇನೆಂದು ಬ್ಯಾಟಿಂಗ್‌ನಲ್ಲಿ ತೋರಿಸಬೇಕೆಂಬುದು ಪಾಕ್‌ ಮಾಜಿ ನಾಯಕನ ಅಭಿಪ್ರಾಯ.

“ವಿರಾಟ್‌ ಕೊಹ್ಲಿ, ಭಾರತೀಯ ಕ್ರಿಕೆಟ್‌ ಹಾಗೂ ಸೌರವ್‌ ಗಂಗೂಲಿ ನಡುವೆ ಏನು ತಪ್ಪು ನಡೆದಿದೆ. ಇದು ನಡೆಯಬಾರದಿತ್ತು. ಸಾಲು-ಸಾಲು ಸೋಲುಗಳು ಎದುರಾಗುತ್ತಿದ್ದರೆ, ಸರಣಿ ಮೇಲೆ ಸರಣಿಗಳಲ್ಲಿ ಸೋಲು ಅನುಭವಿಸುತ್ತಿದ್ದರೆ, ನಾಯಕತ್ವದಿಂದ ಕೆಳಗೆ ಇಳಿಯುವುದರಲ್ಲಿ ಅರ್ಥವಿದೆ. ಆದರೆ ವಿರಾಟ್‌ ಕೊಹ್ಲಿಯೇ ನಾಯಕತ್ವದಿಂದ ಕೆಳಗೆ ಇಳಿಯುತ್ತಿದ್ದಾರೆಂದರೆ ಅವರು ತಿರುಗೇಟು ನೀಡುತ್ತಿದ್ದಾರೆಂಬುದು ಇದರರ್ಥ. ಸೌರವ್‌ ಗಂಗೂಲಿ ಅಥವಾ ಬೇರೆ ಯಾರಾದರೂ ಇದನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ,” ಎಂದು ಲತಿಫ್‌ ತಿಳಿಸಿದ್ದಾರೆ.

ಹಲವು ಘಟಾನುಘಟಿಗಳ ಓಡಿಐ ದಾಖಲೆ ಮುರಿಯುವ ಸನಿಹದಲ್ಲಿ ಕೊಹ್ಲಿ!

“ನೀವು ಬೇರೆ ಯಾರನ್ನಾದರೂ ನಾಯಕತ್ವಕ್ಕೆ ಕರೆ ತನ್ನಿ, ವಿರಾಟ್‌ ಕೊಹ್ಲಿ ಗಿಂತ ದೊಡ್ಡ ಆಟಗಾರ ಈ ವಿಶ್ವದಲ್ಲಿಯೇ ಇಲ್ಲ. ಯಾವಾಗ ಅವರು ದೊಡ್ಡ ಮೊತ್ತದ ರನ್‌ ಗಳಿಸುತ್ತಾರೆ, ಅಂದು ಅವರು ನಿಮಗೆ ಸರಿಯಾಗಿ ತಿರುಗೇಟು ನೀಡುತ್ತಿದ್ದಾರೆ ಎಂದರ್ಥ. ಇದು ಪ್ರದರ್ಶನಕ್ಕೆ ಸಂಬಂಧಿಸಿದ ವಿಷಯವಲ್ಲ. ಆದರೆ ಈ ಎಲ್ಲಾ ಅಂಶಗಳು ಅಹಂಗೆ ಸಂಬಂಧಿಸಿದ ವಿಷಯವಾಗಿದೆ. ಒಂದೇ ಒಂದು ಟೈಟಾನಿಕ್‌ ಇದೆ ಎಂದಾದರೆ ಅದು ವಿರಾಟ್‌ ಕೊಹ್ಲಿ ಮಾತ್ರ,” ಎಂದು ರಶೀದ್‌ ಲತಿಫ್‌ ಟೀಮ್ ಇಂಡಿಯಾ ನಾಯಕನ ಪರ ಬ್ಯಾಟ್‌ ಬೀಸಿದ್ದಾರೆ.

‘ದ್ರಾವಿಡ್‌ ಜೊತೆ ಹೊಂದಾಣಿಕೆ ಸಮಸ್ಯೆ’ ಕೊಹ್ಲಿ ನಾಯಕತ್ವ ತೊರೆಯಲು ಕಾರಣ ತಿಳಿಸಿದ ಬಟ್‌!



Read more

[wpas_products keywords=”deal of the day gym”]