Karnataka news paper

‘ಕಾಲರ್ ವಾಲಿ’: 29 ಮರಿಗಳಿಗೆ ಜನ್ಮ ನೀಡಿದ್ದ ‘ಮಹಾತಾಯಿ’ ಹೆಣ್ಣು ಹುಲಿ ನಿಧನ


PTI

ಭೋಪಾಲ್:  ತನ್ನ ಜೀವಿತಾವಧಿಯಲ್ಲಿ ಬರೊಬ್ಬರಿ 29 ಹುಲಿಮರಿಗಳಿಗೆ ಜನ್ಮ ನೀಡಿದ್ದ ಹೆಣ್ಣು ಹುಲಿಯೊಂದು ನಿಧನವಾಗಿದೆ.

ಕಾಲರ್ ವಾಲಿ ಮಾರತರಂ ಎಂದೇ ಪ್ರಸಿದ್ಧಿ ಪಡೆದಿದ್ದ ಮಧ್ಯಪ್ರದೇಶದ ಪೆಂಚ್ ಹುಲಿ ಸಂರಕ್ಷಿತ ಪ್ರದೇಶ(ಪಿಟಿಆರ್)ದಲ್ಲಿ ವಾಸವಿದ್ದ ಸುಮಾರು 16 ವರ್ಷದ  ಹೆಣ್ಣು ಹುಲಿ ಶನಿವಾರ ವಯೋ ಸಹಜ ಅನಾರೋಗ್ಯಕ್ಕೀಡಾಗಿ ಸಾವಿಗೀಡಾಗಿದೆ.

ಈ ಕುರಿತಂತೆ ಮಧ್ಯಪ್ರದೇಶದ ಸಚಿವ ಡಾ.ನರೋತ್ತಮ್ ಮಿಶ್ರಾ ಅವರು ಟ್ವೀಟ್ ಮಾಜಿ ಸಂತಾಪ ಸೂಚಿಸಿದ್ದು, ಸೂಪರ್ ಮಾಮ್ ನಿಧನಕ್ಕೆ ಟ್ವಿಟ್ಟರ್‌ನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. ಸೂಪರ್ ಮಾಮ್‌ಗೆ ಕೊನೆಯ ನಮಸ್ಕಾರ. 29 ಮರಿಗಳಿಗೆ ಜನ್ಮ ನೀಡಿದ ಪೆಂಚ್ ಟೈಗರ್ ರಿಸರ್ವ್ನ  ಕಾಲರ್ ವಾಲಿ ಹುಲಿ ಸಾವಿನ ಸುದ್ದಿ ದುಃಖಕರವಾಗಿದೆ. ಈ ಸೂಪರ್ ಅಮ್ಮನ ಕೊಡುಗೆಯಿಂದಾಗಿ ಇಂದು ಮಧ್ಯಪ್ರದೇಶ ಹುಲಿಗಳ ರಾಜ್ಯ ಎಂದು ಗುರುತಿಸಿಕೊಂಡಿದೆ ಎಂದು ತಿಳಿಸಿದ್ದಾರೆ.

ಅರಣ್ಯ ಇಲಾಖೆ ಈ ಸೂಪರ್ ಅಮ್ಮನಿಗೆ ಟಿ-15 ಎಂದು ಅಧಿಕೃತವಾದ ಹೆಸರು ನೀಡಲಾಗಿತ್ತು. ಆದರೂ ಸ್ಥಳೀಯರು ಅವಳನ್ನು ಪ್ರೀತಿಯಿಂದ ಕಾಲರ್ ವಾಲಿ ಎಂದು ಕರೆಯುತ್ತಿದ್ದರು. 
 





Read more

[wpas_products keywords=”deal of the day”]