ಹೈಲೈಟ್ಸ್:
- ‘ಮೆಗಾಸ್ಟಾರ್’ ಚಿರಂಜೀವಿ ಕಿರಿಯ ಪುತ್ರಿ ಶ್ರೀಜಾ
- ಕಲ್ಯಾಣ್ ಎಂಬ ಪತಿ ಹೆಸರನ್ನು ಕೈಬಿಟ್ಟ ಶ್ರೀಜಾ
- ಶ್ರೀಜಾ ಮೊದಲ ಮದುವೆ ಮುರಿದು ಬಿದ್ದ ನಂತರದಲ್ಲಿ ಎರಡನೇ ಮದುವೆಯಾದರು.
ಕಲ್ಯಾಣ್, ಶ್ರೀಜಾ 2016ರಲ್ಲಿ ಮದುವೆಯಾಗಿತ್ತು. 2018ರಲ್ಲಿ ಈ ಜೋಡಿಗೆ ಮಗಳು ಹುಟ್ಟಿದ್ದಳು. ಕಲ್ಯಾಣ್ ಅವರನ್ನು ಮದುವೆಯಾಗುವ ಮುನ್ನವೇ ಸಿರೀಶ್ ಭಾರದ್ವಾಜ್ ಎಂಬುವವರ ಜೊತೆ ಮದುವೆಯಾಗಿತ್ತು. ಯಾರಿಗೂ ತಿಳಿಸದೆ ಓಡಿ ಹೋಗಿ ಸಿರೀಶ್ ಜೊತೆ ಅವರು ಮದುವೆಯಾಗಿದ್ದರು ಎನ್ನಲಾಗಿತ್ತು. ಸಿರೀಶ್, ಶ್ರೀಜಾ ದಂಪತಿಗೂ ಓರ್ವ ಪುತ್ರಿಯಿದ್ದಾಳೆ. 2011ರಲ್ಲಿ ದೌರ್ಜನ್ಯ ಕೇಸ್ ದಾಖಲಿಸುವುದರ ಜೊತೆಗೆ ವಿಚ್ಛೇದನ ಕೂಡ ಪಡೆದಿದ್ದರು.
ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದ ಶ್ರೀಜಾ, ಸಿರೀಶ್ ಎಂಬುವವರ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು. ಪಾಲಕರ ಒಪ್ಪಿಗೆ ಇಲ್ಲದೆ ಶ್ರೀಜಾ ಮದುವೆಯಾಗಿದ್ದರು. ಒಟ್ಟಿನಲ್ಲಿ ಸಿರೀಶ್‌ರನ್ನು ಚಿರಂಜೀವಿ ಕುಟುಂಬ ತುಂಬ ತಿರಸ್ಕಾರದಿಂದ ನೋಡಿತ್ತು. ಮಗಳನ್ನು ಒಪ್ಪುವೆ, ಆದರೆ ಸಿರೀಶ್‌ರನ್ನು ಮನೆಗೆ ಸೇರಿಸಲಾರೆ ಎಂದು ಚಿರಂಜೀವಿ ಆಪ್ತ ಬಳಗ ಈ ಹಿಂದೆ ನೀಡಿದ್ದ ಸಂದರ್ಶನದಲ್ಲಿ ಹೇಳಿಕೆ ನೀಡಿತ್ತು. 2008ರಲ್ಲಿ ಶ್ರೀಜಾ ಹೆಣ್ಣು ಮಗುವಿಗೆ ಜನ್ಮ ನೀಡಿದಾಗ ಆಸ್ಪತ್ರೆಗೆ ಚಿರಂಜೀವಿ ಪತ್ನಿ, ರಾಮ್ ಚರಣ್ ತೇಜ ಮಾತ್ರ ಭೇಟಿ ನೀಡಿದ್ದರು. ಒಟ್ಟಿನಲ್ಲಿ ಶ್ರೀಜಾ, ಸಿರೀಶ್ ಬಾಳಿನಲ್ಲಿ ಏನಾಯ್ತೋ ಏನೋ, ಅವರಿಬ್ಬರೂ ದೂರ ದೂರವಾದರು.
ಬೆಂಗಳೂರಿನಲ್ಲಿ ಚಿರಂಜೀವಿ ಮಗಳ ಮದುವೆ
ಕುಟುಂಬದ ಒಪ್ಪಿಗೆಯ ಮೇರೆಗೆ ಕಲ್ಯಾಣ್ ಎಂಬುವವರನ್ನು ಶ್ರೀಜಾ ಎರಡನೇ ಬಾರಿಗೆ ಮದುವೆಯಾದರು. ಶ್ರೀಜಾ ಮದುವೆಯ ಕಾರ್ಯಕ್ರಮಗಳು ಬೆಂಗಳೂರು ಹೊರವಲಯದ ಕೆಂಪೇಗೌಡ ಏರ್‌ಪೋರ್ಟ್ ಸಮೀಪದ ಹೆಗ್ಗನಹಳ್ಳಿ ಬಳಿಯ ಚಿರಂಜೀವಿ ಪ್ರಕೃತಿ ಫಾರ್ಮ್‌ಹೌಸ್‌ನಲ್ಲಿ ಅದ್ದೂರಿಯಾಗಿ ನಡೆದಿತ್ತು. ಇಡೀ ಕೊನಿಡೆಲ, ಅಲ್ಲು ಕುಟುಂಬ ಈ ಸಮಾರಂಭದಲ್ಲಿ ಭಾಗಿಯಾಗಿತ್ತು. ಇಂದಿಗೂ ಅವರ ಮದುವೆಯ ವಿಡಿಯೋಗಳು ವೈರಲ್ ಆಗುತ್ತವೆ. ಈ ಸಮಾರಂಭಕ್ಕೆ ಕೇವಲ ಸಂಬಂಧಿಕರು, ಗಣ್ಯರು, ಚಿತ್ರ ರಂಗದ ಕೆಲ ನಟರಿಗೆ ಮಾತ್ರ ಆಮಂತ್ರಿಸಲಾಗಿತ್ತು. ಮದುವೆ ನಡೆದ ಫಾರ್ಮ್‌ಹೌಸ್ ಬಳಿ ಬಿಗಿ ಪೊಲೀಸ್ ಬಂದೋ ಬಸ್ತ್ ಒದಗಿಸಲಾಗಿತ್ತು.
ನಟ ಚಿರಂಜೀವಿ ಪುತ್ರಿ ಮದುವೆ ಸಂಭ್ರಮ
ಕಲ್ಯಾಣ್ ಜೊತೆಗಿನ ಖುಷಿಯ ಕ್ಷಣಗಳನ್ನು ಶ್ರೀಜಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ಪತಿಯ ಜೊತೆಗಿನ ಫೋಟೋವನ್ನು ಶ್ರೀಜಾ ಆಗಲೀ, ಕಲ್ಯಾಣ್ ಆಗಲೀ ಹಂಚಿಕೊಂಡಿಲ್ಲ. ಆದರೆ ಇಬ್ಬರು ಮಕ್ಕಳ ಜೊತೆ ಕ್ರಿಸ್‌ಮಸ್‌ನ್ನು ಕಲ್ಯಾಣ್ ಆಚರಿಸಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈಗ ಶ್ರೀಜಾ ನಡೆ ಅನುಮಾನ ಮೂಡಿಸಿದೆ. ಈ ಅನುಮಾನಕ್ಕೆ ಶ್ರೀಜಾ ದಂಪತಿ ಸ್ಪಷ್ಟನೆ ನೀಡಬೇಕಿದೆ.
ರಚಿತಾ ರಾಮ್ ನಟನೆಯ ‘ಸೂಪರ್ ಮಚ್ಚಿ’ ಸಿನಿಮಾ ಇತ್ತೀಚೆಗಷ್ಟೇ ರಿಲೀಸ್ ಆಗಿತ್ತು. ಆ ಚಿತ್ರದ ಬಗ್ಗೆ ಸಿನಿಮಾ ತಂಡ ಸೇರಿ ಯಾರೂ ಕೂಡ ಪ್ರಚಾರ ಮಾಡದಿರೋದು ಯಾಕೆ ಅಂತ ಇನ್ನೂ ರಿವೀಲ್ ಆಗಿಲ್ಲ.
Read more
[wpas_products keywords=”deal of the day party wear dress for women stylish indian”]