
ಬಾಡಿಗೆ ಆದಾಯಕ್ಕೂ ಕಟ್ಟಬೇಕು ಟ್ಯಾಕ್ಸ್
ಬಾಡಿಗೆಯಿಂದ ಬರುವ ಆದಾಯದ ಮೇಲೆ ಬಾಡಿಗೆ ಆದಾಯ ತೆರಿಗೆಯನ್ನು ವಿಧಿಸಲಾಗುತ್ತದೆ. ‘ವಾಸದ ಮನೆಯಿಂದ ಬರುವ ಆದಾಯ’ ಎಂಬ ಶೀರ್ಷಿಕೆಯಡಿ ಇದನ್ನು ವರ್ಗೀಕರಿಸಲಾಗಿದೆ. ವಾಸದ ಮನೆ ಆಸ್ತಿ, ಕಟ್ಟಡದಲ್ಲಿ ನಡೆಯುತ್ತಿರುವ ವಾಣಿಜ್ಯ ಸಂಸ್ಥೆ ಅಥವಾ ಉತ್ಪಾದನಾ ಘಟಕದಿಂದ ಬರುವ ಬಾಡಿಗೆ ಹೀಗೆ ಎಲ್ಲದಕ್ಕೂ ಬಾಡಿಗೆ ಆದಾಯ ತೆರಿಗೆ ಅನ್ವಯವಾಗುತ್ತದೆ.

ಬಾಡಿಗೆ ಆದಾಯದ ತೆರಿಗೆ ವಿನಾಯಿತಿ ಕ್ಲೇಮ್ ಹೀಗೆ ಮಾಡಿ
ಪಡೆದುಕೊಂಡ ಬಾಡಿಗೆಯ ಒಟ್ಟು ವಾರ್ಷಿಕ ಮೌಲ್ಯ (GAV)ವನ್ನು ಆದಾಯ ತೆರಿಗೆ ಉದ್ದೇಶಗಳಿಗಾಗಿ ಮಾತ್ರ ಗುರುತಿಸಲಾಗುತ್ತದೆ. ಅಂದರೆ ಮಾಲೀಕರು ಬಾಡಿಗೆ ಆದಾಯವನ್ನು ಪಡೆಯದಿದ್ದಲ್ಲಿ ಅವರು ಆ ಬಾಡಿಗೆಯ ಮೊತ್ತದ ಮೇಲೆ ಆದಾಯ ತೆರಿಗೆ ಕಡಿತವನ್ನು ಪಡೆಯಬಹುದು. ಇದನ್ನು ಬಿಟ್ಟು, ನಿರ್ದಿಷ್ಟ ಸಂದರ್ಭಗಳಲ್ಲಿ ಮನೆಯನ್ನು 14 ದಿನಗಳಿಗಿಂತ ಕಡಿಮೆ ಅವಧಿಗೆ ಬಾಡಿಗೆಗೆ ನೀಡಿದ್ದರೆ, ಮಾಲೀಕರು ಆಸ್ತಿಯ GAV ಯಿಂದ ವೆಚ್ಚವನ್ನು ಕಡಿತಗೊಳಿಸಬಹುದು. ಮನೆ ಖಾಲಿ ಉಳಿದಾಗ ಅಥವಾ ಬಾಡಿಗೆ ಪಾವತಿ ಆಗದಿದ್ದಾಗ ಸಂಭವಿಸುವ ಯಾವುದೇ ನಷ್ಟವನ್ನು ವಾಸ್ತವಿಕವಾಗಿ ಬರಬಹುದಾದ ಬಾಡಿಗೆ ಆದಾಯಕ್ಕೆ ಸರಿಹೊಂದಿಸಿದಲ್ಲಿ ಆಸ್ತಿಯ ಒಟ್ಟು ವಾರ್ಷಿಕ ಮೌಲ್ಯವನ್ನು ನಿರ್ಧರಿಸಬಹುದು.

ಮುನ್ಸಿಪಲ್ ಟ್ಯಾಕ್ಸ್ ಡಿಡಕ್ಷನ್
ಪ್ರತಿ ವರ್ಷ ಆಸ್ತಿ ಮೌಲ್ಯದ ಮೇಲೆ ಸ್ಥಳೀಯ ಮುನ್ಸಿಪಲ್ ಕಾರ್ಪೊರೇಶನ್‌ಗಳಿಗೆ ಪಾವತಿಸಲಾಗುವ ತೆರಿಗೆಯನ್ನು ಮುನ್ಸಿಪಲ್ ಟ್ಯಾಕ್ಸ್ ಎಂದು ಕರೆಯಲಾಗುತ್ತದೆ. ಒಟ್ಟು ವಾರ್ಷಿಕ ಮೌಲ್ಯದಲ್ಲಿ ಮುನ್ಸಿಪಲ್ ಟ್ಯಾಕ್ಸ್ ಕಡಿತಗೊಳಿಸಿದಲ್ಲಿ ನಿವ್ವಳ ವಾರ್ಷಿಕ ಮೌಲ್ಯವನ್ನು (NAV) ವನ್ನು ಕಂಡುಹಿಡಿಯಬಹುದು. ಆಯಾ ಆರ್ಥಿಕ ವರ್ಷದಲ್ಲಿ ಮನೆ ಮಾಲೀಕನು ಮುನ್ಸಿಪಲ್ ಟ್ಯಾಕ್ಸ್ ಕಟ್ಟಿದ್ದಲ್ಲಿ ಮಾತ್ರ ಇಂಥ ತೆರಿಗೆ ಕಡಿತವನ್ನು ಪಡೆಯಬಹುದು. ಒಳಚರಂಡಿ ಶುಲ್ಕ, ಆಸ್ತಿ ತೆರಿಗೆ ಮುಂತಾದುವುಗಳ ಮೊತ್ತವನ್ನು ಬಾಡಿಗೆ ಆದಾಯ ತೆರಿಗೆಯಿಂದ ಕಡಿತಗೊಳಿಸಬಹುದು. ಆದರೆ, ಎಲ್ಲ ಮುನ್ಸಿಪಲ್ ಟ್ಯಾಕ್ಸ್‌ಗಳನ್ನು ಮನೆ ಮಾಲೀಕನೇ ಕಟ್ಟಿರಬೇಕು, ಬಾಡಿಗೆದಾರ ಕಟ್ಟಿರಬಾರದು. ಇಂಥ ಪಾವತಿಗಳು ನಿಮ್ಮ ಬಾಡಿಗೆ ಆದಾಯವನ್ನು ಕಡಿಮೆ ಮಾಡುವ ಮೂಲಕ ಅದರ ಮೇಲಿನ ತೆರಿಗೆಯನ್ನೂ ಕಡಿಮೆ ಮಾಡುತ್ತವೆ.

30 ಪರ್ಸೆಂಟ್ ಸ್ಟ್ಯಾಂಡರ್ಡ್ ಡಿಡಕ್ಷನ್
ಆದಾಯ ತೆರಿಗೆ ಕಾಯ್ದೆ 1961 ರ ಸೆಕ್ಷನ್ 24 (ಎ) ಪ್ರಕಾರ ಆಸ್ತಿಯ ನಿವ್ವಳ ವಾರ್ಷಿಕ ಮೌಲ್ಯದ ಮೇಲೆ ಶೇಕಡಾ 30 ರಷ್ಟು ಸ್ಟ್ಯಾಂಡರ್ಡ್ ಡಿಡಕ್ಷನ್ ವಿನಾಯಿತಿ ಸಿಗುತ್ತದೆ. ಇತರೆ ಖರ್ಚುಗಳಾದ ಪೇಂಟಿಂಗ್, ರಿಪೇರಿ ಮುಂತಾದುವುಗಳ ಲೆಕ್ಕದಲ್ಲಿ ಈ ಸ್ಟ್ಯಾಂಡರ್ಡ್ ಡಿಡಕ್ಷನ್‌ನಲ್ಲಿ ಶೇ 30 ಕ್ಕಿಂತ ಹೆಚ್ಚು ಕ್ಲೇಮ್ ಮಾಡಲು ಸಾಧ್ಯವಿಲ್ಲ.

ಷರತ್ತುಬದ್ಧ ಕಡಿತ
ಮಾಲೀಕರು ಅಥವಾ ಅವರ ಕುಟುಂಬವು ಮನೆಯಲ್ಲಿ ವಾಸಿಸುತ್ತಿದ್ದರೆ ಅಂಥ ಆಸ್ತಿಯ ಮೇಲೆ ಮಾಲೀಕರು ಅಥವಾ ಅವರ ಕುಟುಂಬವು ಸೆಕ್ಷನ್ 24(ಬಿ) ಅಡಿಯಲ್ಲಿ ತಮ್ಮ ಗೃಹ ಸಾಲದ ಬಡ್ಡಿಯ ಮೇಲೆ ರೂ 2 ಲಕ್ಷದವರೆಗೆ ಕಡಿತವನ್ನು ಪಡೆಯಬಹುದು. ಮನೆ ಖಾಲಿಯಾದಾಗ ಸಹ ಇದೇ ತಂತ್ರವನ್ನು ಬಳಸಲಾಗುತ್ತದೆ. ಒಂದು ವೇಳೆ ನೀವು ಮನೆಯನ್ನು ಬಾಡಿಗೆಗೆ ನೀಡಿದರೆ, ನೀವು ಗೃಹ ಸಾಲದ ಸಂಪೂರ್ಣ ಬಡ್ಡಿಯನ್ನು ಕ್ಲೇಮ್ ಮಾಡಬಹುದು. ಈ ಕಡಿತವು ಸ್ವಯಂ-ಬಳಸುವ ಆಸ್ತಿಯ ಮೇಲೆ ಸಹ ಲಭ್ಯವಿದೆ.
ಆದಾಗ್ಯೂ, ಈ ಕೆಳಗೆ ತೋರಿಸಲಾದ ಮೂರು ನಿರ್ದಿಷ್ಟ ಷರತ್ತುಗಳಲ್ಲಿ ಯಾವುದೇ ಒಂದನ್ನು ಪೂರೈಸದಿದ್ದರೆ, ನಿಮ್ಮ ಬಡ್ಡಿ ಕಡಿತವು 2 ಲಕ್ಷ ರೂಪಾಯಿಗಳ ಬದಲಿಗೆ 30 ಸಾವಿರ ರೂಪಾಯಿಗಳಿಗೆ ಸೀಮಿತವಾಗುತ್ತದೆ.
ಷರತ್ತುಗಳು ಹೀಗಿವೆ:
1. ವಾಸಿಸುವ ಮನೆ ಕಟ್ಟಲು ಅಥವಾ ವಾಸದ ಮನೆ ಖರೀದಿಸಲು 01-04-1999 ಕ್ಕೂ ಮುಂಚೆ ಸಾಲ ಪಡೆದಿದ್ದರೆ;
2. ಮನೆ ಪುನರ್ ನಿರ್ಮಾಣ, ರಿಪೇರಿ ಅಥವಾ ನವೀಕರಣಕ್ಕಾಗಿ 01-04-1999 ರಂದು ಅಥವಾ ಅದರ ನಂತರ ಸಾಲ ಪಡೆದಿದ್ದರೆ;
3. 01-04-1999 ರಂದು ಅಥವಾ ಅದರ ನಂತರ ಮನೆ ಸಾಲ ಪಡೆದು, ಸಾಲ ಪಡೆದ ವರ್ಷದ ಹಿಂದಿನ ವರ್ಷದಿಂದ 5 ವರ್ಷಗಳಾದರೂ ಮನೆ ನಿರ್ಮಾಣ ಕಾಮಗಾರಿ ಪೂರ್ಣವಾಗಿರದಿದ್ದರೆ;
Read more…
[wpas_products keywords=”deal of the day”]