ಹೈಲೈಟ್ಸ್:
- ಧನುಷ್ – ಐಶ್ವರ್ಯ ವೈವಾಹಿಕ ಜೀವನ ಅಂತ್ಯ
- ಆಘಾತಗೊಂಡ ಧನುಷ್ ಮತ್ತು ರಜನಿಕಾಂತ್ ಅಭಿಮಾನಿಗಳು
- ಧನುಷ್ – ಐಶ್ವರ್ಯ ಒಟ್ಟಿಗಿದ್ದ ವಿಡಿಯೋಗಳನ್ನು ಹಂಚಿಕೊಂಡ ಫ್ಯಾನ್ಸ್
‘‘ನಾವಿಬ್ಬರು ದೂರ ದೂರಾಗುತ್ತಿದ್ದೇವೆ’’ ಎಂದು ನಟ ಧನುಷ್ ಹಾಗೂ ಐಶ್ವರ್ಯ ಮಾಡಿರುವ ಟ್ವೀಟ್ ಕಂಡು ಅಭಿಮಾನಿಗಳು ಆಘಾತಗೊಂಡಿದ್ದಾರೆ. ಲವ್ಲಿ ಕಪಲ್ ಅಂತಲೇ ಕರೆಯಿಸಿಕೊಳ್ಳುತ್ತಿದ್ದ ಧನುಷ್ ಹಾಗೂ ಐಶ್ವರ್ಯ ಇದೀಗ ವಿಚ್ಛೇದನ ಪಡೆಯುತ್ತಿರುವುದು ಫ್ಯಾನ್ಸ್‌ಗೆ ಅಕ್ಷರಶಃ ಶಾಕ್ ಆಗಿದೆ. ಹೀಗಾಗಬಾರದಿತ್ತು ಅಂತ ಕೆಲವರು ಮರುಗುತ್ತಿದ್ದಾರೆ. ಈ ಮಧ್ಯೆ ಕೆಲ ಅಭಿಮಾನಿಗಳು ಧನುಷ್ ಹಾಗೂ ಐಶ್ವರ್ಯ ಅವರ ಸ್ಪೆಷಲ್ ಮೊಮೆಂಟ್ಸ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಒಂದು ವಿಡಿಯೋ ಅಂತೂ ಕೆಲವೇ ತಿಂಗಳುಗಳ ಹಿಂದೆಯಷ್ಟೇ ರೆಕಾರ್ಡ್ ಮಾಡಲಾಗಿದ್ದು, ಅದರಲ್ಲಿ ಪತ್ನಿ ಐಶ್ವರ್ಯಗಾಗಿ ಮಾವ ರಜನಿಕಾಂತ್ ಅವರ ‘ಪೇಟಾ’ ಚಿತ್ರದ ಹಾಡನ್ನು ಧನುಷ್ ಹಾಡುತ್ತಿರುವುದು… ಪತ್ನಿಯನ್ನ ಧನುಷ್ ಅಪ್ಪಿಕೊಳ್ಳುತ್ತಿರುವುದು.. ಐಶ್ವರ್ಯ ನಾಚಿ ನೀರಾಗುತ್ತಿರುವುದು ಸೆರೆಯಾಗಿದೆ. ಈ ವಿಡಿಯೋವನ್ನು ಕಂಡ ಅಭಿಮಾನಿಗಳ ಹೃದಯ ಛಿದ್ರಗೊಂಡಿದೆ. ಇಷ್ಟು ಅನ್ಯೋನ್ಯವಾಗಿದ್ದ ಜೋಡಿ ಇದೀಗ ದೂರಾಗಿರುವುದು ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸಿದೆ.
ರಜನಿಕಾಂತ್‌ಗೆ ಧೈರ್ಯ ಹೇಳುತ್ತಿರುವ ಅಭಿಮಾನಿಗಳು
‘’ಧನುಷ್ ಹಾಗೂ ಐಶ್ವರ್ಯ ವಿಚ್ಛೇದನ ಘೋಷಿಸಿರುವುದು ಅನಿರೀಕ್ಷಿತ ಹಾಗೂ ಆಘಾತಕಾರಿ. ಅವರಿಬ್ಬರ ಭವಿಷ್ಯ ಚೆನ್ನಾಗಿರಲಿ’’ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ. ಇದೇ ವೇಳೆ ಕೆಲ ಅಭಿಮಾನಿಗಳು ರಜನಿಕಾಂತ್‌ಗೆ ಧೈರ್ಯ ಹೇಳುತ್ತಿದ್ದಾರೆ. ‘’ತಲೈವಾ.. ರಜನಿಕಾಂತ್ ದಯವಿಟ್ಟು ಸ್ಟ್ರಾಂಗ್ ಆಗಿರಿ..’’, ‘’ರಜನಿಕಾಂತ್ ಎಷ್ಟೇ ಪಾಸಿಟಿವ್ ಆಗಿದ್ದರೂ, ಅವರ ವಯಕ್ತಿಕ ಜೀವನದಲ್ಲಿ ತುಂಬಾ ನೆಗೆಟಿವ್ ಜರುಗಿದೆ’’, ‘’ರಜನಿಕಾಂತ್ ಅವರ ಇನ್ನೋರ್ವ ಪುತ್ರಿ ಸೌಂದರ್ಯ ಅವರ ವಿಚ್ಛೇದನ ಆದಾಗಲೂ ರಜನಿಕಾಂತ್ ನೊಂದಿದ್ದರು. ಈಗ ಮತ್ತೊಮ್ಮೆ ಅವರಿಗೆ ಇಂಥದ್ದೇ ಪರಿಸ್ಥಿತಿ ಉಂಟಾಗಿದೆ’’ ಅಂತೆಲ್ಲಾ ಫ್ಯಾನ್ಸ್ ಟ್ವೀಟ್ ಮಾಡುತ್ತಿದ್ದಾರೆ.
ದೂರಾಗುತ್ತಿರುವ ಬಗ್ಗೆ ಟ್ವೀಟ್ ಮಾಡಿದ್ದ ಧನುಷ್
‘’18 ವರ್ಷಗಳ ಕಾಲ ಸ್ನೇಹಿತರಂತೆ, ದಂಪತಿಗಳಂತೆ, ಪೋಷಕರಂತೆ ಮತ್ತು ಪರಸ್ಪರ ಹಿತೈಷಿಗಳಾಗಿದ್ದೆವು. ನಮ್ಮ ಪ್ರಯಾಣವು ಬೆಳವಣಿಗೆ, ತಿಳುವಳಿಕೆ, ಹೊಂದಾಣಿಕೆ ಮತ್ತು ಹೊಂದಿಕೊಳ್ಳುವಿಕೆಯಿಂದ ಕೂಡಿದೆ. ಇಂದು ನಾವು ನಮ್ಮ ಮಾರ್ಗಗಳನ್ನು ಪ್ರತ್ಯೇಕಗೊಳಿಸುವಿಕೆಯ ಜಾಗದಲ್ಲಿ ಬಂದು ನಿಂತಿದ್ದೇವೆ. ಜೋಡಿಯಾಗಿದ್ದ ನಾವು ಬೇರೆಯಾಗಲು ಮತ್ತು ನಮ್ಮನ್ನು ನಾವು ಇನ್ನಷ್ಟು ಚೆನ್ನಾಗಿ ಅರ್ಥೈಸಿಕೊಳ್ಳಲು, ಸಮಯ ಕೊಡಲು ನಾನು ಮತ್ತು ಐಶ್ವರ್ಯ ನಿರ್ಧರಿಸಿದ್ದೇವೆ. ದಯವಿಟ್ಟು ನಮ್ಮ ನಿರ್ಧಾರವನ್ನು ಗೌರವಿಸಿ ಮತ್ತು ಇದನ್ನು ನಿಭಾಯಿಸಲು ನಮಗೆ ಬೇಕಿರುವ ಗೌಪ್ಯತೆಯನ್ನು ನೀಡಿ. ಓಂ ನಮಃ ಶಿವಾಯ” ಎಂದು ಬರೆದುಕೊಂಡು ನಟ ಧನುಷ್ ಟ್ವೀಟ್ ಮಾಡಿದ್ದರು.
ಹಾಗ್ನೋಡಿದ್ರೆ, ಐಶ್ವರ್ಯ ಮತ್ತು ಧನುಷ್ ಪ್ರೀತಿಸಿ ಮದುವೆಯಾದವರು. 2004ರ ನವೆಂಬರ್ ತಿಂಗಳಿನಲ್ಲಿ ಐಶ್ವರ್ಯ ಮತ್ತು ಧನುಷ್ ವಿವಾಹ ನೆರವೇರಿತ್ತು. ಈ ದಂಪತಿಗೆ ಯಾತ್ರ ಮತ್ತು ಲಿಂಗಾ ಎಂಬ ಇಬ್ಬರು ಮಕ್ಕಳಿದ್ದಾರೆ.
Read more
[wpas_products keywords=”deal of the day party wear dress for women stylish indian”]