ಹೈಲೈಟ್ಸ್:
- ರಜನಿಕಾಂತ್ ಪುತ್ರಿ ಜೊತೆಗಿನ ದಾಂಪತ್ಯ ಬದುಕಿಗೆ ವಿದಾಯ ಹೇಳಿದ ಧನುಷ್
- 18 ವರ್ಷಗಳ ಐಶ್ವರ್ಯಾ ಮತ್ತು ಧನುಷ್ ವೈವಾಹಿಕ ಜೀವನ ಅಂತ್ಯ
- ಈ ಎರಡೂ ಕುಟುಂಬಗಳಲ್ಲಿ ವಿಚ್ಛೇದನ ಅನ್ನೋದು ಇದೇ ಮೊದಲಲ್ಲ!
ಧನುಷ್ ಸಹೋದರ ಸೆಲ್ವರಾಘವನ್
ನಟ ಧನುಷ್ ಖ್ಯಾತ ನಿರ್ದೇಶಕ ಕಸ್ತೂರಿ ರಾಜ ಅವರ ಪುತ್ರ. ಕಸ್ತೂರಿ ರಾಜಗೆ ನಾಲ್ವರು ಮಕ್ಕಳು. ಸೆಲ್ವರಾಘವನ್, ಧನುಷ್, ಕಾರ್ತಿಕಾ ದೇವಿ ಮತ್ತು ವಿಮಲಾ ಗೀತಾ. ಅಪ್ಪನಂತೆಯೇ ಸೆಲ್ವರಾಘವನ್ ನಿರ್ದೇಶಕರಾದರೆ, ಧನುಷ್ ಹೀರೋ ಆಗಿ, ನಂತರ ಬಹುಮುಖ ಪ್ರತಿಭೆಯಾಗಿ ಹೊರಹೊಮ್ಮಿದರು. ಅಣ್ಣನಿಗಿಂತ ಮೊದಲು, ಅಂದರೆ, 2004ರಲ್ಲಿಯೇ ರಜನಿಕಾಂತ್ ಪುತ್ರಿ ಐಶ್ವರ್ಯಾ ಜೊತೆಗೆ ಧನುಷ್ ವಿವಾಹವಾದರೆ, ಸೆಲ್ವರಾಘವನ್ ಮದುವೆಯಾಗಿದ್ದು 2006ರಲ್ಲಿ. ಸೆಲ್ವರಾಘವನ್ ನಿರ್ದೇಶನದ ‘ಕಾಧಲ್ ಕೊಂಡೆನ್’, ‘7ಜಿ ರೈನ್‌ಬೋ ಕಾಲೋನಿ’, ‘ಪುಧುಪೆಟ್ಟೈ’ ಸಿನಿಮಾಗಳಲ್ಲಿ ಬ್ಯಾಕ್ ಟು ಬ್ಯಾಕ್ ನಾಯಕಿಯಾಗಿ ಕಾಣಿಸಿಕೊಂಡವರು ಕನ್ನಡದ ‘ಚಂದು’ ಸಿನಿಮಾ ಖ್ಯಾತಿಯ ಸೋನಿಯಾ ಅಗರ್ವಾಲ್. ನಂತರ ಅವರನ್ನೇ ಪ್ರೀತಿಸಿ 2006ರಲ್ಲಿ ಮದುವೆಯಾದರು ಸೆಲ್ವರಾಘವನ್.
2010ರಲ್ಲಿ ಮುರಿದುಬಿತ್ತು ಮದುವೆ
ಮದುವೆಯಾಗಿ ನಾಲ್ಕೇ ವರ್ಷಗಳಲ್ಲಿ ಸೋನಿಯಾ ಮತ್ತು ಸೆಲ್ವರಾಘವನ್ ಸಂಬಂಧ ಹಳಸಿತು. ಪರಸ್ಪರ ಒಪ್ಪಿಗೆಯ ಮೇರೆಗೆ 2010ರಲ್ಲಿ ಇಬ್ಬರು ಬೇರೆಯಾದರು. ಒಮ್ಮೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸೋನಿಯಾ, ‘ಇದೆಲ್ಲ ದಿಢೀರ್ ಅಂತ ಆಗಲಿಲ್ಲ. ನಮ್ಮಲ್ಲಿ ಸಾಕಷ್ಟು ಹೊಂದಾಣಿಕೆಯ ಕೊರತೆ ಇತ್ತು. ನಮ್ಮಲ್ಲಿ ಭಿನ್ನಾಭಿಪ್ರಾಯ ಹೆಚ್ಚಿತ್ತು. ಅಂತಿಮವಾಗಿ ನಮಗೆ ದೂರವಾಗುವುದು ಬಿಟ್ಟು ಬೇರೆ ಆಯ್ಕೆಗಳಿರಲಿಲ್ಲ’ ಎಂದು ಹೇಳಿದ್ದರು. ಆನಂತರ ಸೆಲ್ವರಾಘವನ್ 2011ರಲ್ಲಿ ಗೀತಾಂಜಲಿ ಎಂಬುವವರನ್ನು ವಿವಾಹವಾದರು. ಅಂದಹಾಗೆ, ಈ ದಂಪತಿಗೆ ಲೀಲಾವತಿ, ಓಂಕಾರ್, ರಿಷಿಕೇಶ್ ಎಂಬ ಮೂವರು ಮಕ್ಕಳಿದ್ದಾರೆ.
Dhanush Divorce: ರಜನಿಕಾಂತ್ ಪುತ್ರಿ ಜೊತೆಗಿನ ದಾಂಪತ್ಯ ಬದುಕಿಗೆ ವಿದಾಯ ಹೇಳಿದ ನಟ ಧನುಷ್!
ಅಂದು ಅಣ್ಣ ಸೆಲ್ವರಾಘವನ್ ಮೊದಲ ಪತ್ನಿಗೆ ವಿಚ್ಛೇದನ ನೀಡಿ, ಮತ್ತೊಂದು ಮದುವೆಯಾದರು. ಇಂದು ತಮ್ಮ ಧನುಷ್ ಕೂಡ ಪತ್ನಿಗೆ ವಿಚ್ಛೇದನ ನೀಡಿದ್ದಾರೆ. ವಿಪರ್ಯಾಸವೆಂದರೆ, ರಜನಿಕಾಂತ್ ಮಕ್ಕಳಿಬ್ಬರೂ ವಿಚ್ಛೇದನ ಪಡೆದಂತಾಗಿದೆ. ರಜನಿಕಾಂತ್ ಅವರ ಕಿರಿಯ ಪುತ್ರಿ ಸೌಂದರ್ಯಾ ಅವರು 2010ರಲ್ಲಿ ಅಶ್ವಿನ್ ರಾಮ್‌ಕುಮಾರ್ ಎಂಬುವವರನ್ನು ಮದುವೆಯಾಗಿದ್ದರು. ಆ ದಂಪತಿಗೆ ವೇದ್ ಕೃಷ್ಣ ಎಂಬ ಗಂಡು ಮಗು ಇದೆ. ಆದರೆ, ಹೊಂದಾಣಿಕೆಯ ಕೊರತೆಯಿಂದ 2017ರಲ್ಲಿ ಸೌಂದರ್ಯಾ ಮತ್ತು ಅಶ್ವಿನ್ ದೂರವಾದರು. ಆ ಬಳಿಕ ವಿಶ್‌ಗನ್ ವನಂಗಮುಡಿ ಅವರನ್ನು 2019ರಲ್ಲಿ ಸೌಂದರ್ಯಾ ಮದುವೆ ಆಗಿದ್ದಾರೆ.
Dhanush-Aishwaryaa Divorce: ರಜನಿಕಾಂತ್ ಪುತ್ರಿಯನ್ನ ಧನುಷ್ ಮೊದಲು ಭೇಟಿ ಆಗಿದ್ದೆಲ್ಲಿ?
Read more
[wpas_products keywords=”deal of the day party wear dress for women stylish indian”]