ಹೈಲೈಟ್ಸ್:
- ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ದಿನಗಳಲ್ಲಿ ಮತ್ತೊಂದು ದಾಳಿ
- ಶ್ರೀನಗರದ ಹೊರವಲಯದಲ್ಲಿ ಪೊಲೀಸ್ ವಾಹನದ ಮೇಲೆ ಗುಂಡು
- ಅಧಿಕ ಭದ್ರತೆಯ ಪ್ರದೇಶದಲ್ಲಿಯೇ ಇಬ್ಬರು ಭಯೋತ್ಪಾದಕರಿಂದ ಕೃತ್ಯ
- ಡಿಸೆಂಬರ್ 10ರಂದು ನಡೆದಿದ್ದ ದಾಳಿಯಲ್ಲಿ ಇಬ್ಬರು ಪೊಲೀಸರ ಸಾವು
ಮೃತರಲ್ಲಿ ಒಬ್ಬರು ಸಹಾಯಕ ಸಬ್ ಇನ್‌ಸ್ಪೆಕ್ಟರ್ ಆಗಿದ್ದರೆ, ಮತ್ತೊಬ್ಬರು ಸೆಕ್ಷನ್ ಗ್ರೇಡ್ ಕಾನ್‌ಸ್ಟೇಬಲ್ ಆಗಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಈ ನಡುವೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಸುರಾಂಕೋಟ್ ವಲಯಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಮಂಗಳವಾರ ಬೆಳಿಗ್ಗೆ ಭಾರಿ ಎನ್‌ಕೌಂಟರ್ ನಡೆಯುತ್ತಿದೆ. ಉಗ್ರರು ಅಡಗಿರುವ ಬಗ್ಗೆ ಬಂದ ವಿಶ್ವಾಸಾರ್ಹ ಮಾಹಿತಿ ಆಧಾರದಲ್ಲಿ ಭಾರತೀಯ ಸೇನೆ, ಸಿಆರ್‌ಪಿಎಫ್ ಮತ್ತು ಪೊಲೀಸರು ಸುರಾಂಕೋಟ್ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ್ದರು. ಶಂಕೆ ಇರುವ ಸ್ಥಳಕ್ಕೆ ಭದ್ರತಾ ಪಡೆಗಳ ತಂಡ ಬಂದಾಗ, ಅಡಗಿ ಕುಳಿತಿದ್ದ ಉಗ್ರರು ಗುಂಡು ಹಾರಿಸಿದ್ದಾರೆ.
ರೈತರಂತೆ ಜಮ್ಮು ಮತ್ತು ಕಾಶ್ಮೀರದ ಜನರೂ ತ್ಯಾಗ ಮಾಡಬೇಕಾಗಬಹುದು: ಫಾರೂಕ್ ಅಬ್ದುಲ್ಲಾ
ವಿವಿಧ ಭದ್ರತಾ ಪಡೆಗಳ ಹಲವು ಶಿಬಿರಗಳು ಇರುವ ಭಾರಿ ಭದ್ರತೆಯ ಪ್ರದೇಶದಲ್ಲಿ ಉಗ್ರರು ಬಸ್ ಮೇಲೆ ನಿರಂತರ ಗುಂಡಿನ ದಾಳಿ ನಡೆಸಿದ್ದಾರೆ. ಏಕಾಏಕಿ ನಡೆದ ಈ ದಾಳಿಗೆ ಪ್ರತಿಕ್ರಿಯೆ ನೀಡಲು ಪೊಲೀಸರಿಗೆ ತಕ್ಷಣಕ್ಕೆ ಸಾಧ್ಯವಾಗಲಿಲ್ಲ. ದಾಳಿ ನಡೆಸಿದ ಬಳಿಕ ಭಯೋತ್ಪಾದಕರು ಅಲ್ಲಿಂದ ಪರಾರಿಯಾಗಿದ್ದಾರೆ. ಇಡೀ ಪ್ರದೇಶದಲ್ಲಿ ನಿರ್ಬಂಧ ವಿಧಿಸಿದ್ದು, ಉಗ್ರರನ್ನು ಪತ್ತೆಹಚ್ಚಲು ವ್ಯಾಪಕ ಕಾರ್ಯಾಚರಣೆ ಆರಂಭಿಸಲಾಗಿದೆ.
ಉಗ್ರ ದಾಳಿಯಲ್ಲಿ ಮೃತಪಟ್ಟವರ ಕುಟುಂಬದವರಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಈ ಘಟನೆ ಬಗ್ಗೆ ಅವರು ವಿವರ ಕೇಳಿದ್ದಾರೆ. ‘ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿವರ ಕೇಳಿದ್ದರೆ. ಈ ದಾಳಿಯಲ್ಲಿ ಹುತಾತ್ಮರಾದ ಭದ್ರತಾ ಸಿಬ್ಬಂದಿಯ ಕುಟುಂಬದವರಿಗೆ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ’ ಎಂದು ಪ್ರಧಾನಿ ಕಚೇರಿ ಟ್ವೀಟ್ ಮಾಡಿದೆ.
‘ಇಬ್ಬರು ಪೊಲೀಸರು ಹತ್ಯೆಯಾದ ಶ್ರೀನಗರ ದಾಳಿಯ ಬಗ್ಗೆ ಸುದ್ದಿ ಕೇಳಿ ಬಹಳ ದುಃಖವಾಗಿದೆ. ಕಾಶ್ಮೀರದಲ್ಲಿ ಸಹಜತೆ ಮರಳಿದೆ ಎಂದು ಭಾರತ ಸರ್ಕಾರದ ಸುಳ್ಳು ಪ್ರತಿಪಾದನೆಗಳು ಬಹಿರಂಗವಾಗಿದೆ. ಆದರೂ ಅದು ತನ್ನ ತಪ್ಪನ್ನು ತಿದ್ದುಕೊಂಡಿಲ್ಲ’ ಎಂದು ಮಾಜಿ ಸಿಎಂ ಮೆಹಬೂಬ ಮುಫ್ತಿ ಆರೋಪಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಎಲ್‌ಒಸಿ ಸಮೀಪ ನೆಲ ಬಾಂಬ್ ಸ್ಫೋಟ: ಇಬ್ಬರು ಸೈನಿಕರು ಹುತಾತ್ಮ
ಕಾಶ್ಮೀರದ ಬಂಡಿಪೊರಾ ಜಿಲ್ಲೆಯ ಗುಲ್ಷನ್ ಚೌಕದಲ್ಲಿ ಡಿ. 10ರಂದು ಉಗ್ರರು ಪೊಲೀಸರ ತಂಡದ ಮೇಲೆ ಗುಂಡಿನ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಇಬ್ಬರು ಪೊಲೀಸರು ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಪೊಲೀಸರನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಅವರು ಆಗಲೇ ಮೃತಪಟ್ಟಿದ್ದರು ಎಂದು ವೈದ್ಯರು ಘೋಷಿಸಿದ್ದರು.