The New Indian Express
ನಮ್ಮನೆ ಯುವರಾಣಿ’ ಧಾರಾವಾಹಿಯಲ್ಲಿ ಮೀರಾ ಪಾತ್ರ ಮಾಡಿದ್ದ ನಟಿ ಅಂಕಿತಾ ಅಮರ್ ಅವರು “ಅಬ ಜಬ ದಬ” ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದಾರೆ.
ಕನ್ನಡ್ ಗೊತ್ತಿಲ್ಲ’ ಸಿನಿಮಾ ನಿರ್ದೇಶನ ಮಾಡಿದ್ದ ಮಯೂರ ರಾಘವೇಂದ್ರ ಅವರು ಎರಡನೇ ಸಿನಿಮಾವಾಗಿ ‘ಅಬ ಜಬ ದಬ’ ಮಾಡುತ್ತಿದ್ದಾರೆ. ಇದೊಂದು ಕಾಮಿಡಿ ಮತ್ತು ಫ್ಯಾಂಟಸಿ ಅಂಶಗಳಿರುವ ಸಿನಿಮಾವಂತೆ. ಈ ಸಿನಿಮಾದಲ್ಲಿ ಶಂಕರ್ ನಾಗ್ ಇರುತ್ತಾರೆ, ಆದರೆ ಶಂಕರ್ ನಾಗ್ ಹೇಗೆ ಇರುತ್ತಾರೆ ಎಂಬುದನ್ನು ಸಿನಿಮಾ ನೋಡಿ ತಿಳಿದುಕೊಳ್ಳಬೇಕು ಎಂದು ಸಿನಿಮಾ ತಂಡ ಟ್ವಿಸ್ಟ್ ಇಟ್ಟಿದೆ.
ನಟ ಪ್ರಥ್ವಿ ಅಂಬರ್ ಅವರು ಈ ಚಿತ್ರದಲ್ಲಿ ಹೀರೋ ಆಗಿ ನಟಿಸಲಿದ್ದಾರೆ. ಸುಧಾರಾಣಿ, ಅಚ್ಯುತ್ ಕುಮಾರ್, ಪಿಡಿ ಸತೀಶ್ ಚಂದ್ರ, ಮಹಾಂತೇಶ್, ಮುಖ್ಯಮಂತ್ರಿ ಚಂದ್ರು, ಅನಿರುದ್ಧ ಮಹೇಶ್, ನಿಧಿ ಸುಬ್ಬಯ್ಯ, ಮಯೂರ ರಾಘವೇಂದ್ರ, ಅನಂತ ಕೃಷ್ಣ, ಬಿಗ್ ಬಾಸ್ ಖ್ಯಾತಿಯ ರಘು, ಊರ್ವಶಿ, ವಿಶ್ವಕಿರಣ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಲಿದ್ದಾರೆ.
ಇದನ್ನೂ ಓದಿ: ‘ಅಬ ಜಬ ದಬ’ ಚಿತ್ರದ ಹೀರೋ ಪೃಥ್ವಿ ಅಂಬರ್?
ಸಿನಿಮಾವೊಂದರಲ್ಲಿ ರೇಖಾ ದಾಸ್ ಅವರು “ಅಬ ಜಬ ದಬ” ಪದ ಬಳಸಿದ್ದರು. ಇದೊಂದು ಫ್ಯಾಂಟಸಿ ಸಿನಿಮಾ ಆಗಿರುವುದರಿಂದ ಈ ಶೀರ್ಷಿಕೆ ಬಳಕೆ ಆಗಿದ್ದು, ರೇಖಾ ದಾಸ್‌ಗೂ, ಶಂಕರ್ ನಾಗ್ ಅವರಿಗೂ, ಈ ಶೀರ್ಷಿಕೆಗೂ ಏನು ಸಂಬಂಧ ಅನ್ನೋದನ್ನು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು. ಈ ಚಿತ್ರಕ್ಕೆ ಗಿರಿಧರ್ ದಿವಾನ್ ಛಾಯಾಗ್ರಹಣ, ಸತೀಶ್ ರಘುನಾಥನ್ ಸಂಗೀತ ಸಂಯೋಜನೆಯಿದೆ. ‘ಎಸ್. ರಾಮ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಅನಂತ ಕೃಷ್ಣ ಈ ಸಿನಿಮಾಕ್ಕೆ ಹಣ ಹಾಕುತ್ತಿದ್ದಾರೆ. ಒಟ್ಟಿನಲ್ಲಿ ಈ ತಂಡ ಸೃಜನಾತ್ಮಕವಾಗಿ ಸಿನಿಮಾ ಮಾಡುವ ತಯಾರಿಯಲ್ಲಿದೆ.
ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಿತ್ರತಂಡ ಮೊದಲ ಪೋಸ್ಟರ್ ರಿಲೀಸ್ ಮಾಡಿದ್ದು, ಪೋಸ್ಟರ್ ನಲ್ಲಿ ಅಂಕಿತಾ ಅಮರ್ ಮೈಕ್ ಹಿಡಿದಿದ್ದು, ಬ್ಯಾಕ್ ಗ್ರೌಂಡ್ ನಲ್ಲಿ ಹಿರಿಯ ಗಾಯಕ ಎಸ್ ಪಿ ಬಾಲಸುಬ್ರಮಣ್ಯ ಅವರ ಚಿತ್ರವಿದೆ.
Read more…
[wpas_products keywords=”party wear dress for women stylish indian”]