Karnataka news paper

ತೆಳ್ಳಗಿರುವವಳು ಎಂದು ದೇಹದ ಆಕಾರದ ಬಗ್ಗೆ ನೆಗೆಟಿವ್ ಮಾತನಾಡಿದವರಿಗೆ ಉತ್ತರ ಕೊಟ್ರು ಸಂಯುಕ್ತಾ ಹೆಗಡೆ


ಕಿರಿಕ್ ಪಾರ್ಟಿ‘ ಸಿನಿಮಾ ನಟಿ ಸಂಯುಕ್ತಾ ಹೆಗಡೆ ಅವರು ಇಲ್ಲಿಯವರೆಗೆ ಸಾಕಷ್ಟು ನೆಗೆಟಿವ್ ಕಾಮೆಂಟ್ಸ್, ಟ್ರೋಲ್ಸ್‌ಗಳನ್ನು ಎದುರಿಸಿದ್ದಾರೆ. ಅವರ ದೇಹದ ಬಗ್ಗೆಯೂ ಕೂಡ ಕಾಮೆಂಟ್ ಮಾಡಲಾಗಿದೆಯಂತೆ. ಹೀಗಾಗಿ ಸಂಯುಕ್ತಾ ವಿಶೇಷವಾದ ಪೋಸ್ಟ್‌ನೊಂದಿಗೆ ಅವರ ಬೇಸರವನ್ನು ಹೊರಹಾಕಿದ್ದಾರೆ.

ಸಂಯುಕ್ತಾ ಹೆಗಡೆ ಹೇಳಿದ್ದೇನು?

ನಾನು ತೆಳ್ಳಗಿರುವುದು ಎಷ್ಟು ಅದೃಷ್ಟ ಎಂದು ನಿರಂತರವಾಗಿ ತಿಳಿಸಿಕೊಟ್ಟಿದ್ದಕ್ಕೆ, ನನ್ನ ದೇಹದ ಪ್ರಕೃತಿಯ ಬಗ್ಗೆ ಗಮನಹರಿಸದಿರುವುದಕ್ಕೆ, ನಾನು ಫಿಟ್ ಆಗಿರಲು ಮಾಡುವ ಎಲ್ಲ ಪ್ರಯತ್ನಗಳನ್ನು ತಿರಸ್ಕರಿಸಿ ನಾನು ಪುಣ್ಯ ಮಾಡಿದ್ದೇನೆ ಎಂದು ಹೇಳುತ್ತಿರುವುದಕ್ಕೆ, 45ಕೆಜಿಯಿಂದ 50ಕೆಜಿ ಆಗುವವರೆಗೆ ನಾನು ಮಾಡಿದ ಪ್ರಯತ್ನಗಳನ್ನು ತಿರಸ್ಕರಿಸುವುದಕ್ಕೆ, ನೀನು ಏನು ಬೇಕಾದರೂ ತಿನ್ನು, ಅದು ನಿನ್ನ ದೇಹದಲ್ಲಿ ತೋರಿಸಲ್ಲ ಎಂದು ಹೇಳಿದ್ದಕ್ಕೆ, ತೆಳ್ಳಗಿರುವವರು ಫಿಟ್ ಆಗಿರೋದು ಲೆಕ್ಕಕ್ಕೆ ಬರೋದಿಲ್ಲ, ದಪ್ಪಗಿರುವವರು ಫಿಟ್ ಆಗಿರೋದು ಮಾತ್ರ ಲೆಕ್ಕಕ್ಕೆ ಬರುತ್ತದೆ ಎಂದು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು

ಇಂತಿ
ನಿಮ್ಮ ತೆಳ್ಳನೆಯ ಫ್ರೆಂಡ್

ಶಾಂತಿಯಿಂದ ಪ್ರತಿಯೊಬ್ಬರು ಒಂದೊಂದು ಹೋರಾಟ ಮಾಡುತ್ತಿರುತ್ಆರೆ. ನೀವು ಏನು ನೋಡುತ್ತೀರೋ ಅದರ ಆಧಾರದ ಮೇಲೆ ನಿರ್ಣಯಕ್ಕೆ ಬರಬೇಡಿ. ಕೆಲವರು ತೂಕ ಕಳೆದುಕೊಳ್ಳಲು ಹೋರಾಟ ಮಾಡಿದರೆ, ಇನ್ನೂ ಕೆಲವರು ತೂಕ ಹೆಚ್ಚಿಸಿಕೊಳ್ಳಲು ಹೋರಾಟ ಮಾಡುತ್ತಿರುತ್ತಾರೆ. ಇನ್ನೂ ಕೆಲವರು ಫಿಟ್ ಆಗಿರಲು ನಿರಂತರ ಅವರ ಪ್ರಯತ್ನ ಹಾಕುತ್ತಿರುತ್ತಾರೆ. ಯಾರೂ ಅದೃಷ್ಟವಂತರಲ್ಲ. ಎಲ್ಲರೂ ಹುಟ್ಟಿನಿಂದ ಪರ್ಫೆಕ್ಟ್ ಅಲ್ಲ, ಪರಿಪೂರ್ಣತೆಯನ್ನು ಪಡೆಯಲು ಯಾವುದೇ ಪ್ರಯಾಣವಿಲ್ಲ ಏಕೆಂದರೆ ಅದು ಅಸ್ತಿತ್ವದಲ್ಲಿಲ್ಲ. ಮಾನಸಿಕವಾಗಿ, ದೈಹಿಕವಾಗಿ ಫಿಟ್ ಆಗಿರೋದು ಮುಖ್ಯ. ನಿಮ್ಮ ದೇಹವನ್ನು ಪೋಷಿಸುವುದು, ತರಬೇತಿ ನೀಡುವುದು ಮುಖ್ಯ. ನೀವು ಹುಟ್ಟಿದ್ದೀರಿ ಎಂದು ಕಾಳಜಿ ತೆಗೆದುಕೊಳ್ಳಿ, ಅದೇ ಮುಖ್ಯ



Read more