ಬೆಂಗಳೂರು: ಹೈಕೋರ್ಟ್‌ನ ದಿನದ ಸಂಪೂರ್ಣ ಕಲಾಪವನ್ನು ಇದೇ ಮೊದಲ ಬಾರಿಗೆ ಸೋಮವಾರ ಪ್ರಾಯೋಗಿಕವಾಗಿ ಯೂ ಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಲಾಯಿತು.
ಪ್ರಧಾನ ಪೀಠದ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠದ ಕಲಾಪವನ್ನು ಒಂದೂವರೆ ಗಂಟೆ ಕಾಲ ನೇರ ಪ್ರಸಾರ ಮಾಡಲಾಗಿದ್ದು ಸುಮಾರು 2,400 ಜನ ವೀಕ್ಷಿಸಿದ್ದಾರೆ.
ನ್ಯಾಯಮೂರ್ತಿ ಎಸ್.ಸುಜಾತಾ ನೇತೃತ್ವದ ವಿಭಾಗೀಯ ನ್ಯಾಯಪೀಠದ ಕಲಾಪವನ್ನು ಒಂದೂಕಾಲು ಗಂಟೆಗೂ ಹೆಚ್ಚು ಸಮಯದ ಕಲಾಪವನ್ನು ನೇರ ಪ್ರಸಾರ ಮಾಡಲಾಗಿದ್ದು, ಒಂದೂವರೆ ಸಾವಿರ ಜನ ವೀಕ್ಷಿಸಿದ್ದಾರೆ.
ಕೋರ್ಟ್ ಹಾಲ್ ಎರಡು ಮತ್ತು ನಾಲ್ಕರ ಕಲಾಪವನ್ನು ನೇರ ಪ್ರಸಾರ ಮಾಡಲು ಸಿದ್ಧತೆ ನಡೆಸಲಾಗಿತ್ತಾದರೂ ತಾಂತ್ರಿಕ ಕಾರಣಗಳಿಂದ ಪ್ರಸಾರವಾಗಿಲ್ಲ.
’ಕಲಬುರಗಿ ಹಾಗೂ ಧಾರವಾಡ ಪೀಠಗಳ ಕಲಾಪವನ್ನು ನೇರ ಪ್ರಸಾರ ಮಾಡಿಲ್ಲ‘ ಎಂದು ಹೈಕೋರ್ಟ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯೂ ಟ್ಯೂಬ್ ನೇರ ಪ್ರಸಾರಕ್ಕೆ ಅವಕಾಶ ಕಲ್ಪಿಸುವ ‘ಕರ್ನಾಟಕ ರೂಲ್ಸ್ ಅನ್ ಲೈವ್ ಸ್ಟ್ರೀಮಿಂಗ್ ಅಂಡ್ ರೆಕಾರ್ಡಿಂಗ್ ಆಫ್ ಕೋರ್ಟ್ ಪ್ರೊಸೀಡಿಂಗ್ಸ್’, ನಿಯಮಗಳನ್ನು ಸರ್ಕಾರ 2022ರ ಡಿಸೆಂಬರ್ 30ರಂದು ರಾಜ್ಯಪತ್ರದಲ್ಲಿ ಪ್ರಕಟಿಸಿತ್ತು.
Read more from source
[wpas_products keywords=”deal of the day sale today kitchen”]